ನಾನು ಮಗುವಿನಂತೆ ನಡೆಯುವುದನ್ನು ಕಲಿಯುತ್ತಿದ್ದೇನೆ ಎಂದು ಬಾಹ್ಯಾಕಾಶದಿಂದ ಶುಭಾಂಶು ಶುಕ್ಲಾ ಅವರು ಮತ್ತೊಂದು ಸಂದೇಶ ರವಾನೆ ಮಾಡಿದ್ದಾರೆ.
ತನ್ನ ಮೊದಲ ಕರೆಯಲ್ಲಿ ಭಾರತೀಯ ಗಗನಯಾತ್ರಿ ಶುಭಾಂಶು ಶುಕ್ಲಾ ನಿನ್ನೆಯ ಉಡಾವಣೆಯ ಬಗ್ಗೆ ಮಾತನಾಡುತ್ತಾ ಅನುಭವವನ್ನು ಎಕ್ಸಲೆಂಟ್ ಎಂದಿರುವ ಅವರು, ಬಾಹ್ಯಾಕಾಶದಿಂದ ನಮಸ್ಕಾರದೊಂದಿಗೆ ಸ್ವಾಗತಿಸುತ್ತಾ, ಶೂನ್ಯ ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳುತ್ತೇನೆ ಎಂದು ಹೇಳಿದ್ದಾರೆ.
ನಾನು ಇನ್ನೂ ಶೂನ್ಯ ಗುರುತ್ವಾಕರ್ಷಣೆಗೆ ಒಗ್ಗಿಕೊಳ್ಳುತ್ತಿದ್ದೇನೆ. ಮಗುವಿನಂತೆ ನಡೆಯುವುದು, ಚಲಿಸುವುದು ಮತ್ತು ನನ್ನನ್ನು ನಿಯಂತ್ರಿಸುವುದು ಹೇಗೆ ಎಂದು ಕಲಿಯುತ್ತಿದ್ದೇನೆ. ಆದರೆ ನಾನು ಪ್ರತಿ ಕ್ಷಣವನ್ನು ನಿಜವಾಗಿಯೂ ಆನಂದಿಸುತ್ತಿದ್ದೇನೆ. ತುಂಬಾ ನಿದ್ದೆ ಮಾಡುತ್ತಿದ್ದೇನೆ ಎಂದು ಹೇಳಿದರು.
ಭಾರತದ ಮಾನವ ಬಾಹ್ಯಾಕಾಶ ಕಾರ್ಯಕ್ರಮ ಮತ್ತು ಮುಂಬರುವ ಗಗನಯಾನ ಮಿಷನ್ಗೆ ಒಂದು ಬಲವಾದ ಹೆಜ್ಜೆಯಾಗಿದೆ ಎಂದು ಹೇಳಿದರು.





