Mysore
20
clear sky

Social Media

ಶನಿವಾರ, 24 ಜನವರಿ 2026
Light
Dark

ವಿಶಾಖಪಟ್ಟಣಂ ಬೀಚ್‌ನಲ್ಲಿ ಯೋಗ ಮಾಡಿದ ಪ್ರಧಾನಿ ನರೇಂದ್ರ ಮೋದಿ

ಆಂಧ್ರಪ್ರದೇಶ: ವಿಶಾಖಪಟ್ಟಣಂನ ಸಮುದ್ರ ತೀರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದು 3 ಲಕ್ಷ ಜನರೊಂದಿಗೆ ಯೋಗ ಮಾಡುವ ಮೂಲಕ ಹೊಸ ದಾಖಲೆ ಮಾಡಿದ್ದಾರೆ.

ಒಂದು ಭೂಮಿಗಾಗಿ, ಒಂದು ಆರೋಗ್ಯಕ್ಕಾಗಿ ಯೋಗ ಎಂಬ ಘೋಷ ವಾಕ್ಯದಡಿ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು.

ವಿಶಾಖಪಟ್ಟಣಂನಲ್ಲಿ ನಡೆದ 11ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು 3 ಲಕ್ಷ ಜನರೊಂದಿಗೆ ಯೋಗ ಮಾಡಿದರು. 25,000 ವಿದ್ಯಾರ್ಥಿಗಳು 108 ನಿಮಿಷ ಸೂರ್ಯ ನಮಸ್ಕಾರ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು. ಕಾರ್ಯಕ್ರಮದಲ್ಲಿ ಸಿಎಂ ಚಂದ್ರಬಾಬು ನಾಯ್ಡು, ಡಿಸಿಎಂ ಪವನ್‌ ಕಲ್ಯಾಣ್‌ ಸೇರಿದಂತೆ ಹಲವು ನಾಯಕರು ಭಾಗಿಯಾಗಿದ್ದರು.

ಕಾರ್ಯಕ್ರಮದಲ್ಲಿ ಮಾತನಾಡಿದ ಪ್ರಧಾನಿ ನರೇಂದ್ರ ಮೋದಿ ಅವರು, ಸರ್ವೇ ಭವಂತು ಸುಖಿನಃ. ನಾವು ಈ ಚಿಂತನೆಯಿಂದ ಬದುಕಬೇಕು. ಏಕೆಂದರೆ ಇದು ಶಾಂತಿಯುತ ಸಮಾಜಕ್ಕೆ ಕಾರಣವಾಗುತ್ತದೆ. ದುರದೃಷ್ಟವಶಾಥತ್‌ ಇಂದು ಜಗತ್ತು ವ್ಯಾಪಕ ಹಿಂಸೆ ಹಾಗೂ ಅಶಾಂತಿಗೆ ಸಾಕ್ಷಿಯಾಗುತ್ತಿದೆ. ಯೋಗವು ಮಾನವೀಯತೆಯು ಉಸಿರಾಡಲು, ಸಮತೋಲನವನ್ನು ಕಂಡುಕೊಳ್ಳಲು ಮತ್ತು ಶಾಂತತೆಯನ್ನು ಮರಳಿ ಪಡೆಯಲು ಯೋಗ ಅಗತ್ಯವಾಗಿದೆ ಎಂದು ಹೇಳಿದರು.

ಇನ್ನು ಯೋಗ ಕಾರ್ಯಕ್ರಮಕ್ಕೆ ಭಾರೀ ಭದ್ರತಾ ವ್ಯವಸ್ಥೆಯನ್ನು ಮಾಡಲಾಗಿತ್ತು. 10,000ಕ್ಕೂ ಹೆಚ್ಚು ಪೊಲೀಸ್‌ ಸಿಬ್ಬಂದಿಯನ್ನು ನಿಯೋಜಿಸಲಾಗಿತ್ತು. ಇಡೀ ಮಾರ್ಗದುದ್ದಕ್ಕೂ 1200 ಸಿಸಿ ಕ್ಯಾಮರಾಗಳು ಮತ್ತು ಡ್ರೋನ್‌ ಮೂಲಕ ಕಣ್ಗಾವಲಿನಲ್ಲಿಡಲಾಗಿತ್ತು.

Tags:
error: Content is protected !!