ಮಳೆಗಾಲ ಆರಂಭವಾಗಲಿದ್ದು ಬಿರುಬೇಸಿಗೆ ಸಹಜವಾಗಿ ಕಡಿಮೆಯಾಗಲಿದೆ. ಮಳೆಗಾಲ ಒಂದಷ್ಟು ಅನಾಹುತಗಳನ್ನೂ ತಂದೊಡ್ಡುತ್ತದೆ. ಕೆಲವೊಮ್ಮೆ ಊಹಿಸಲೂ ಕಷ್ಟ ಸಾಧ್ಯವಾಗಬಹುದು. ಮೈಸೂರು ನಗರಪಾಲಿಕೆ ವ್ಯಾಪ್ತಿಯ ತಗ್ಗು ಪ್ರದೇಶಗಳ ನಿವಾಸಿಗಳಿಗೆ ಮಳೆಗಾಲದ ಸಂದರ್ಭದಲ್ಲಿ ಆತಂಕ ಇದ್ದದ್ದೇ, ಹಲವೆಡೆ ಚರಂಡಿಗಳಲ್ಲಿ ಮಳೆ ನೀರು ಸರಾಗವಾಗಿ ಹರಿಯುತ್ತಿಲ್ಲ. ಹಾಗಾಗಿ ರಸ್ತೆಗಳು ಜಲಾವೃತವಾಗಿ ಜನಸಾಮಾನ್ಯರು ಪರದಾಡುವಂತಾಗಿದೆ.
ಇದನ್ನೂ ಓದಿ:- ಓದುಗರ ಪತ್ರ | ‘ಆಪರೇಷನ್ ಸಿಂಧೂರ’ ಮಾಹಿತಿಯನ್ನು ಸರ್ಕಾರವೇ ಜನರಿಗೆ ನೀಡಲಿ
ಚರಂಡಿಗಳಲ್ಲಿ ಕೊಳಚೆ ನೀರು ಸರಾಗವಾಗಿ ಹರಿದು ಹೋಗದಿದ್ದರೆ, ಸಾಂಕ್ರಾಮಿಕ ರೋಗಗಳು ಉಲ್ಬಣಗೊಳ್ಳುತ್ತವೆ. ಈ ಸಂದರ್ಭಗಳಲ್ಲಿ ಡೆಂಗ್ಯೂ ಮತ್ತಿತರ ಮಾರಕ ರೋಗಗಳು ಹರಡುವ ಸಾಧ್ಯತೆ ಹೆಚ್ಚಿರುತ್ತದೆ. ಹಾಗಾಗಿ ನಗರ ಪಾಲಿಕೆ ಅಽಕಾರಿಗಳು, ಮುಂಜಾಗ್ರತೆಯಾಗಿ ಚರಂಡಿಗಳಲ್ಲಿ ಹೂಳು ತೆಗೆಸಬೇಕು, ರಸ್ತೆಗಳಲ್ಲಿರುವ ಹಳ್ಳ- ದಿಣ್ಣೆಗಳನ್ನು ಮುಚ್ಚಿಸಲು ತುರ್ತಾಗಿ ಕ್ರಮವಹಿಸಬೇಕು. ಉದಾಸೀನ ತೋರಿದರೆ ಜನರು, ಮಕ್ಕಳ ಜೀವ ಮತ್ತು ಸಾರ್ವಜನಿಕ ಆಸ್ತಿಪಾಸ್ತಿಗಳನ್ನು ಕಡೆಗಣಿಸಿದಂತಾಗುತ್ತದೆ. ಹಾಗಾಗಿ ಸಂಬಂಧ ಪಟ್ಟ ಅಽಕಾರಿಗಳು ಮಳೆಗಾಲದಲ್ಲಿ ಉಂಟಾಗಬಹುದಾದ ಅನಾಹುತ ಗಳನ್ನು ಸಮರ್ಪಕವಾಗಿ ಎದುರಿಸಲು ಮುಂಜಾಗ್ರತೆ ಕ್ರಮವಹಿಸಬೇಕು.
– ಜಿ. ಶಿವಶಂಕರ್,ಜಯನಗರ,ಮೈಸೂರು





