Mysore
15
clear sky

Social Media

ಬುಧವಾರ, 04 ಫೆಬ್ರವರಿ 2026
Light
Dark

100ಕ್ಕೂ ಅಧಿಕ ಗಂಟೆ ಕಳೆದರೂ ಬಿಡುಗಡೆಯಾಗದ ಬಿಎಸ್‌ಎಫ್‌ ಯೋಧ

bsf-jawan-detained-by-pakistan-border- kumar sha

ಹೊಸದಿಲ್ಲಿ : ಪಂಜಾಬ್‌ನ ಫೀರೋಝ್‌ಪುರದ ಬಳಿ ಆಕಸ್ಮಿಕವಾಗಿ ಅಂತಾರಾಷ್ಟ್ರೀಯ ಗಡಿ ದಾಟಿದ ಗಡಿ ಭದ್ರತಾ ಪಡೆ ಕಾನ್ಸ್‌ಟೇಬಲ್‌ ಅನ್ನು ಪಾಕಿಸ್ತಾನ ರೇಂಜರ್‌ಗಳು ಬಂಧಿಸಿ 100 ಗಂಟೆಗಳಿಗೂ ಅಧಿಕ ಸಮಯ ಕಳೆದಿದೆ. ಬಿಎಸ್‌ಎಫ್‌ ಮತ್ತು ಪಾಕಿಸ್ತಾನ ರೇಂಜರ್‌ಗಳ ನಡುವೆ ಮೂರು ಸುತ್ತಿನ ಫ್ಲಾಗ್‌ ಮೀಟಿಂಗ್‌ ನಡೆದಿದೆ. ಆದರೆ ಯೋಧನನ್ನು ಇನ್ನೂ ಬಿಡುಗಡೆ ಮಾಡಿಲ್ಲ ಎಂಬ ಮಾಹಿತಿ ಲಭ್ಯವಾಗಿದೆ.

ಯೋಧನನ್ನು ವಾಪಸ್‌ ಕರೆತರುವ ಪ್ರಯತ್ನ ನಡೆಯುತ್ತಿದ್ದು, ಪಾಕಿಸ್ತಾನ ರೇಂಜರ್‌ಗಳೊಂದಿಗೆ ಮತ್ತೊಂದು ಸುತ್ತಿನ ಫೀಲ್ಡ್‌ ಕಮಾಂಡರ್‌ ಮಟ್ಟದ ಫ್ಲಾಗ್‌ ಮೀಟಿಂಗ್‌ಗೆ ಬಿಎಸ್‌ಎಫ್‌ ವಿನಂತಿ ಮಾಡಿದೆ. ಶೀಘ್ರದಲ್ಲೇ ಸಭೆ ನಡೆಯುವ ನಿರೀಕ್ಷೆಯಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಬಿಎಸ್‌ಎಫ್‌ನ 182ನೇ ಬೆಟಾಲಿಯನ್‌ ಸದಸ್ಯ ಪೂರ್ಣಮ್‌ ಕುಮಾರ್‌ ಶಾ ಗಡಿ ಬಳಿ ಕರ್ತವ್ಯದಲ್ಲಿದ್ದಾಗ ಆಕಸ್ಮಿಕವಾಗಿ ಪಾಕಿಸ್ತಾನದ ಪ್ರದೇಶವನ್ನು ದಾಟಿದ್ದರು. ಆ ಸಮಯದಲ್ಲಿ ಅವರು ಸೇನಾ ಸಮವಸ್ತ್ರದಲ್ಲಿದ್ದರು ಜೊತೆಗೆ ಸೇವಾ ರೈಫಲ್‌ ಅನ್ನು ಹೊಂದಿದ್ದರು.

Tags:
error: Content is protected !!