Mysore
36
few clouds

Social Media

ಗುರುವಾರ, 09 ಏಪ್ರಿಲ 2026
Light
Dark

ಕ್ಯಾಂಟರ್‌ಗೆ ಸಾರಿಗೆ ಬಸ್‌ ಡಿಕ್ಕಿ ; 20ಕ್ಕೂ ಹೆಚ್ಚು ಮಂದಿಗೆ ಗಾಯ

ರಾಮನಗರ : ಇಲ್ಲಿನ ಮಾಗಡಿಯ ಸೋಲೂರು ಸಮೀಪದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪಂಕ್ಚರ್ ಆಗಿ ನಿಂತದ್ದ ಕ್ಯಾಂಟರ್‌ಗೆ ಕೆಎಸ್‌ಆರ್‌ಟಿಸಿ ಬಸ್‌ ಹಿಂಬದಿಯಿಂದ ಡಿಕ್ಕಿಯಾದ ಪರಿಣಾಮ ಬಸ್‌ನಲ್ಲಿದ್ದ 20ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ.

ಅಪಘಾತದ ತೀವ್ರತೆಗೆ ಬಸ್‌ ನಜ್ಜುಗುಜ್ಜಾಗಿದ್ದು, ಚಾಲಕನ ಸ್ಥಿತಿ ಗಂಭೀರವಾಗಿದೆ.

ಕ್ಯಾಂಟರ್‌ ಪಂಕ್ಚರ್‌ ಆಗಿ‌ ಮಂಗಳೂರು-ಬೆಂಗಳೂರು  ಹೆದ್ದಾರಿಯಲ್ಲಿ ನಿಂತಿತ್ತು. ಇದನ್ನು ಗಮನಿಸದೇ ಬಸ್‌ ಚಾಲಕ ಬಂದಿದ್ದಾನೆ. ಪರಿಣಾಮ ಬಸ್‌ ಕ್ಯಾಂಟರ್‌ನ ಹಿಂಭಾಗಕ್ಕೆ ಡಿಕ್ಕಿಯಾಗಿದೆ.

ಗಾಯಾಳುಗಳನ್ನು ನೆಲಮಂಗಲ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದ್ದು, ಸ್ಥಳಕ್ಕೆ ಸೋಲೂರು ಪೊಲೀಸರು ಭೇಟಿ ನೀಡಿ ಪ್ರಕರಣ ದಾಖಲಿಸಿಕೊಂಡು ಪರಿಶೀಲನೆ ನಡೆಸಿದ್ದಾರೆ.

Tags:
error: Content is protected !!