Mysore
20
overcast clouds

Social Media

ಸೋಮವಾರ, 17 ಆಗಸ್ಟ್ 2026
Light
Dark

ಯತ್ನಾಳ್‌ ಒಬ್ಬರೇ ಹಿಂದುತ್ವದ ನಾಯಕರಲ್ಲ: ಎಸ್‌ ಮುನಿಸ್ವಾಮಿ

ಕೋಲಾರ: ಯತ್ನಾಳ್‌ ಒಬ್ಬರೇ ಹಿಂದುತ್ವದ ನಾಯಕರಲ್ಲ. ಶತಮಾನಗಳಿಂದ ಹಿಂದುತ್ವದ ನಾಯಕರು ಹಾದು ಹೋಗಿದ್ದಾರೆ ಎಂದು ಕೋಲಾರ ಮಾಜಿ ಸಂಸದ ಎಸ್‌.ಮುನಿಸ್ವಾಮಿ ಟಾಂಗ್‌ ಕೊಟ್ಟಿದ್ದಾರೆ.

ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯತ್ನಾಳ್‌ ಅವರು ಪಕ್ಷದ ಲಿಮಿಟ್‌ ಮೀರಿ ನಡೆದುಕೊಂಡಿದ್ದಾರೆ. ಆದ ಕಾರಣ ಅವರನ್ನು ಅಮಾನತು ಮಾಡಲಾಗಿದೆ. ಅವರ ವಯಸ್ಸಿಗೆ ಗೌರವ ಕೊಡುತ್ತೇವೆ ಅದನ್ನು ಉಳಿಸಿಕೊಳ್ಳಲಿ. ಎಲ್ಲದಕ್ಕೂ ಒಂದು ತಾಳ್ಮೆ ಇರುತ್ತದೆ ಎಂದು ತಿರುಗೇಟು ನೀಡಿದರು.

ಯತ್ನಾಳ್‌ ಅವರು ಬಿಜೆಪಿ ನಾಯಕರ ವಿರುದ್ಧ ತಿರುಗಿ ಬೀಳುವ ಮೂಲಕ ಕಾಂಗ್ರೆಸ್‌ ಪಕ್ಷಕ್ಕೆ ದಿನಕ್ಕೊಂದು ಅಸ್ತ್ರ ನೀಡುತ್ತಿದ್ದಾರೆ. ಬೇಕಾದರೆ ಸಿದ್ದರಾಮಯ್ಯ ವಿರುದ್ಧ ಯತ್ನಾಳ್‌ ಮಾತನಾಡಲಿ ಆಗ ಮೆಚ್ಚುತ್ತೇವೆ. ಯತ್ನಾಳ್‌ ಒಬ್ಬರೇ ಹಿಂದುತ್ವದ ನಾಯಕರಲ್ಲ ನಮ್ಮನ್ನೂ ಹಿಂದೂ ಫೈರ್‌ಬ್ರ್ಯಾಂಡ್‌ ಎಂದು ಕರೆಯುತ್ತಾರೆ ಎಂದರು.

Tags:
error: Content is protected !!