Mysore
25
clear sky

Social Media

ಬುಧವಾರ, 04 ಫೆಬ್ರವರಿ 2026
Light
Dark

WTC: ಬೋನಸ್‌ ಪಾಯಿಂಟ್‌ ಜಾರಿಗೆ ಐಸಿಸಿ ಚಿಂತನೆ

ನವದೆಹಲಿ: ಮುಂದಿನ ವಿಶ್ವ ಟೆಸ್ಟ್‌ ಚಾಂಪಿಯನ್‌ಷಿಪ್‌ ವೇಳೆ ಬೋನಸ್‌ ಪಾಯಿಂಟ್‌ ವ್ಯವಸ್ಥೆ ಅಳವಡಿಸಲು ಅಂತರಾಷ್ಟ್ರೀಯ ಕ್ರಿಕೆಟ್‌ ಸಮಿತಿ (ಐಸಿಸಿ) ಚಿಂತನೆ ನಡೆಸುತ್ತಿದೆ.

ಈಗ ಚಾಲ್ತಿಯಲ್ಲಿರುವ ನಿಯಮಗಳ ಪ್ರಕಾರ ಅತ್ಯಲ್ಪ ಅಂತರದಿಂದ ಅಥವಾ ಇನ್ನಿಂಗ್ಸ್‌ ಅಂತರದಿಂದ ಗೆಲ್ಲುವ ತಂಡಕ್ಕೆ 12 ಪಾಯಿಂಟ್‌. ಟೈ ಆದರಲ್ಲಿ 6 ಪಾಯಿಂಟ್‌ ಹಾಗೂ ಡ್ರಾ ಆದಲ್ಲಿ ತಂಡಗಳು ತಲಾ 4 ಪಾಯಿಂಟ್‌ ಪಡೆಯುತ್ತವೆ.

ಐಸಿಸಿಯಿ ಈ ನಿಯಮಗಳಲ್ಲಿ ಬದಲಾವಣೆ ತರುವ ಸಾಧ್ಯತೆ ಇದೆ. ಇದರನ್ವಯ ಇನ್ನಿಂಗ್ಸ್‌ ಗೆಲುವು ಅಥವಾ ದೊಡ್ಡ ಅಂತರದಿಂದ ಗೆಲ್ಲುವ ತಂಡಕ್ಕೆ ಬೋನಸ್‌ ಪಾಯಿಂಟ್‌ ನೀಡುವ ವಿಷಯ ಪರಿಗಣನೆಯಲ್ಲಿದೆ ಎಂದು ಟೆಲಿಗ್ರಾಫ್‌ ವರದಿ ಮಾಡಿದೆ.

ಪ್ರಬಲ ತಂಡಗಳಾದ ಭಾರತ, ಆಸ್ಟ್ರೇಲಿಯಾ, ಇಂಗ್ಲೆಂಡ್‌ ಇನ್ನಿತರ ತಂಡಗಳ ವಿರುದ್ಧ ಗೆಲುವು ಸಾಧಿಸಿದಾಗ ಹೆಚ್ಚಿನ ಅಂಕ ನೀಡಬೇಕು ಎಂದು ಹಲವರು ಅಭಿಪ್ರಾಯ ನೀಡಿದ್ದಾರೆ.

ಇದು ಒಳ್ಳೆಯ ನಿಲುವು ಆಗಲಿದೆ. ಈ ವ್ಯವಸ್ಥೆ ಜಾರಿಯಿಂದ ಕುತೂಹಲಕರ ಪಂದ್ಯಗಳನ್ನು ನಿರೀಕ್ಷಿಸಬಹುದು ಎಂದು ಭಾರತ ತಂಡದ ಮಾಜಿ ಆಟಗಾರರೊಬ್ಬರು ತಿಳಿಸಿದರು.

Tags:
error: Content is protected !!