Mysore
28
scattered clouds

Social Media

ಮಂಗಳವಾರ, 24 ಫೆಬ್ರವರಿ 2026
Light
Dark

ಡಿಕೆಶಿ ಸದ್ಗುರು ಕಾರ್ಯಕ್ರಮದಲ್ಲಿ ಭಾಗಿ; ಅನಗತ್ಯ ಚರ್ಚೆ ಬೇಡ: ಪ್ರಿಯಾಂಕ್‌ ಖರ್ಗೆ

ಬೆಂಗಳೂರು: ಡಿಸಿಎಂ ಡಿಕೆ ಶಿವಕುಮಾರ್‌ ಅವರು ಸದ್ಗುರು ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದರ ಬಗ್ಗೆ ಅನಗತ್ಯವಾಗಿ ಚರ್ಚೆ ಬೇಡ ಎಂದು ಸಚಿವ ಪ್ರಿಯಾಂಕ್‌ ಖರ್ಗೆ ಹೇಳಿದ್ದಾರೆ.

ನಗರದಲ್ಲಿ ಇಂದು ಮಾತನಾಡಿದ ಅವರು, ಡಿಕೆ ಶಿವಕುಮಾರ್‌ ಅವರು ಮಹಾಕುಂಭಮೇಳಕ್ಕೆ ಹೋಗಿದ್ದು, ಸದ್ಗುರು ಕಾರ್ಯಕ್ರಮದಲ್ಲಿ ಭಾಗಿಯಾದ ತಕ್ಷಣ ಬಿಜೆಪಿ ಸೇರುತ್ತಾರೆ ಎನ್ನುವುದೆಲ್ಲ ಸುಳ್ಳು ಇದರ ಬಗ್ಗೆ ಅನಗತ್ಯ ಚರ್ಚೆ ಬೇಡ ಎಂದು ಹೇಳಿದರು.

ಬಿಜೆಪಿಯಲ್ಲಿ ನಾಯಕತ್ವದ ಕೊರತೆ ಇದೆ. ಆದ ಕಾರಣ ಈ ತರಹದ ವಿವಾದಗಳನ್ನು ಎಬ್ಬಿಸುತ್ತಾರೆ. ಸ್ವಂತ ಸಾಮರ್ಥ್ಯದಿಂದ ಯಾವತ್ತಾದರೂ ಬಿಜೆಪಿ ಅಧಿಕಾರಕ್ಕೆ ಬಂದಿದ್ದಾರಾ. ಹೋದ ಸಲ 17 ಏಕನಾಥ ಶಿಂಧೆಗಳನ್ನು ಕರೆದುಕೊಂಡು ಹೋಗಿದ್ರಲ್ಲಾ. ಈ ಸಲ ಅದು ಸಾಧ್ಯವಿಲ್ಲ ಎಂದರು.

ಬಿಜೆಪಿಯವರೂ ಯಾರನ್ನಾದರೂ ದ್ವೇಷಿಸಿಕೊಳ್ಳಲಿ, ನಾನು ತಲೆ ಕೆಡಿಸಿಕೊಳ್ಳುವುದಿಲ್ಲ. ಮೋದಿ, ಖರ್ಗೆ ಅಕ್ಕಪಕ್ಕ ಫೋಟೋ ಇರುತ್ತೆ ಹಾಗಂತ ಮೋದಿ ಕಾಂಗ್ರೆಸ್‌ ಸೇರುತ್ತಾರೆ ಅನ್ನೋಕ್ಕಾಗತ್ತಾ ಎಂದು ತಿರುಗೇಟು ನೀಡಿದರು.

ಡಿಕೆ ಶಿವಕುಮಾರ್‌ ಸಿಎಂ ಆಗಬೇಕು ಎಂಬ ಮಾಜಿ ಸಂಸದ ಸುರೇಶ್‌ ಅವರ ಹೇಳಿಕೆ ವಿಚಾರಕ್ಕೆ ಪ್ರತಿಕ್ರಿಯಿಸಿದ ಅವರು, ಎಲ್ಲರಿಗೂ ಅವರ ಕುಟುಂಬದವರು ದೊಡ್ಡ ಹುದ್ದೆಗೇರಬೇಕು ಎನ್ನುವ ಹಂಬಲ ಇರುತ್ತದೆ. ನಮ್ಮ ಕುಟಂಬದವರನ್ನು ಕೇಳಿದ್ರೂ ಅದನ್ನೇ ಹೇಳುತ್ತಾರೆ. ಆದರೆ, ಅಂತಿಮವಾಗಿ ಇದರ ಬಗ್ಗೆ ಹೈಕಮಾಂಡ್‌ ತೀರ್ಮಾನ ಮಾಡಲಿದೆ ಎಂದು ತಿಳಿಸಿದರು.

Tags:
error: Content is protected !!