ಕೊಡಗು: ಬೆಂಗಳೂರು ಅರಮನೆ ಜಾಗದ ವಿಚಾರಕ್ಕೆ ಸಂಬಂಧಿಸಿದಂತೆ ಕೋರ್ಟ್ ನೀಡಿರುವ ಆದೇಶವನ್ನು ಸರ್ಕಾರ ಪಾಲಿಸಬೇಕು ಎಂದು ಮೈಸೂರು-ಕೊಡಗು ಸಂಸದ ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ತಿಳಸಿದ್ದಾರೆ.
ಇಂದು (ಫೆ.28) ಕುಶಾಲನಗರದಲ್ಲಿ ಮಾತನಾಡಿದ ಅವರು, ಟಿಡಿಆರ್ ಡೆಪಾಸಿಟ್ ಮಾಡುವಂತೆ ಕೋರ್ಟ್ ರಾಜ್ಯ ಸರ್ಕಾರಕ್ಕೆ ಆದೇಶಿಸಿದೆ. ಇದು ಸರ್ಕಾರಕ್ಕೆ ಹಿನ್ನಡೆ ಎಂದು ಹೇಳಲಾಗುತ್ತಿದೆ. ಸರ್ಕಾರಕ್ಕೆ ಕೆಟ್ಟದು ಮಾಡುವ ಉದ್ದೇಶ ನಮಗಿಲ್ಲ. ರಾಜ್ಯ ಸರ್ಕಾರ ಒಳ್ಳೆಯ ಕೆಲಸ ಮಾಡಬೇಕು, ಸರ್ಕಾರಕ್ಕೆ ಒಳ್ಳೆಯ ಹೆಸರು ಬರಬೇಕು ಎಂಬ ಬಯಕೆ ಇದೆ. ಸರ್ಕಾರ ಕಾನೂನು ಪ್ರಕ್ರಿಯೆಯಂತೆ ಕೆಲಸ ಮಾಡಿದರೆ ಎಲ್ಲರಿಗೂ ಅನುಕೂಲ ಆಗುತ್ತದೆ ಎಂದರು.
ಟಿಡಿಆರ್ ಎಂದರೆ ಇಷ್ಟು ಮಾಲೀಕರು ಅಂತ ಒಂದು ಸರ್ಟಿಫಿಕೇಟ್ ಅಷ್ಟೇ. ಟಿಡಿಆರ್ ಕೋಡುತ್ತೇವೆ ಎಂದು 2009ರಲ್ಲೇ ಸರ್ಕಾರ ಒಪ್ಪಿಕೊಂಡಿತ್ತು. ಅಂದಿನಿಂದ ಇಲ್ಲಿವರೆಗೂ ನೀಡಿಲ್ಲ. ಅದಕ್ಕಾಗಿ 15 ವರ್ಷದಿಂದ ಹೋರಾಡುತ್ತಿದ್ದೇವೆ. ಹೀಗಾಗಿ ಕಾನೂನು ಪ್ರಕ್ರಿಯೆಯಂತೆ ಸರ್ಕಾರ ಕೆಲಸ ಮಾಡಲಿ ಎಂದು ಯದುವೀರ್ ತಿಳಿಸಿದರು.





