Mysore
21
overcast clouds

Social Media

ಶುಕ್ರವಾರ, 14 ಆಗಸ್ಟ್ 2026
Light
Dark

ಡಾಲರ್‌ ಎದುರು ಸಾರ್ವಕಾಲಿಕ ಕುಸಿತ ಕಂಡ ರೂಪಾಯಿ ಮೌಲ್ಯ

ಮುಂಬೈ: ವಿದೇಶಿ ವಿನಿಮಯ ಮಾರುಕಟ್ಟೆಯ ಇಂದಿನ ಆರಂಭಿಕ (ಸೋಮವಾರ) ವಹಿವಾಟಿನಲ್ಲಿ ಅಮೇರಿಕಾದ ಡಾಲರ್‌ ಎದುರು ಭಾರತದ ರೂಪಾಯಿ ಮೌಲ್ಯವು ಸಾರ್ವಕಾಲಿಕ ಮಟ್ಟಕ್ಕೆ ಕುಸಿತ ಕಂಡಿದೆ. ಈ ಮೂಲಕ ಭಾರತದ ರೂಪಾಯಿಯು, ಡಾಲರ್‌ ಎದುರು ಸ್ಥಿರವಾಗಿ ತನ್ನ ಮೌಲ್ಯವನ್ನು ಕಳೆದುಕೊಳ್ಳುವ ಪ್ರವೃತ್ತಿಯು ಮುಂದುವರೆದಿದೆ.

ರೂಪಾಯಿ ಮೌಲ್ಯ 23 ಪೈಸೆ ಇಳಿಕೆಯಾಗಿದ್ದು, ಪ್ರತಿ ಡಾಲರ್‌ಗೆ ರೂಪಾಯಿ ಮೌಲ್ಯವು 86.27ರೂ. ಗೆ ತಲುಪಿದೆ.

ದೇಶದ ಈಕ್ವಿಟಿ ಮಾರುಕಟ್ಟೆಯಲ್ಲಿ ವಿದೇಶಿ ಬಂಡವಾಳದ ಹೊರಅರಿವು ಹೆಚ್ಚಾಗಿದೆ. ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲದ ಬೆಲೆ ಏರಿಕೆಯಾಗುತ್ತಿದೆ. ದೇಶದ ಸರಕುಗಳನ್ನು ರಫ್ತು ಮಾಡುವುದಕ್ಕಿಂತ ಹೊರಗಿನ ದೇಶದ ಸರಕುಗಳನ್ನು ಅಮದು ಮಾಡಿಕೊಳ್ಳುವುದು ಜಾಸ್ತಿಯಾಗುತ್ತಿದೆ ಇದರಿಂದ ರೂಪಾಯಿಯ ಬಳಕೆಯು ಕಡಿಮೆಯಾಗುತ್ತಿದೆ.

ಅಮೇರಿಕದ ಬಾಂಡ್‌ಗಳ ಗಳಿಕೆಯಲ್ಲಿ ಹೆಚ್ಚಳವಾಗಿದೆ. ದೇಶಿಯ ಮಾರುಕಟ್ಟೆ ಸೂಚ್ಯಂಕಗಳ ಇಳಿಕೆಯಿಂದಾಗಿ ರೂಪಾಯಿ ಮೇಲೆ ಒತ್ತಡ ಸೃಷ್ಠಿಯಾಗಿದೆ. ಇದರಿಂದ ರೂಪಾಯಿ ಕುಸಿತದ ಹಾದಿ ಹಿಡಿದಿದೆ ಎಂದು ತಜ್ಞರು ಹೇಳಿದ್ದಾರೆ.

Tags:
error: Content is protected !!