Mysore
25
haze

Social Media

ಭಾನುವಾರ, 07 ಡಿಸೆಂಬರ್ 2025
Light
Dark

ಹುವಾಯಿಯಿಂದ ಹೊಸ ಸ್ಮಾರ್ಟ್‌ ಗಡಿಯಾರ

ಅತ್ಯುತ್ತಮ ವಿನ್ಯಾಸ, ದೀರ್ಘಾವಧಿಯ ಬ್ಯಾಟರಿ ಬಾಳಿಕೆ, ಹೆಲ್ತ್ ಮತ್ತು ಮೋಷನ್ ಟ್ರ್ಯಾಕಿಂಗ್ ಹಾಗೂ ಇನ್‌ಬಿಲ್ಟ್ ಕರೆ ಸೌಲಭ್ಯಗಳು ಮತ್ತು ನ್ಯಾವಿಗೇಷನ್ ವೈಶಿಷ್ಟ ಗಳೊಂದಿಗೆ ಫಿಟ್ನೆಸ್ ಮತ್ತು ಟೆಕ್ ಪ್ರಿಯರಿಗೆ ಇಷ್ಟವಾಗುವಂತೆ ವಿನ್ಯಾಸಗೊಳಿಸಿರುವ ನೂತನ ವಾಚ್ ಮಾರುಕಟ್ಟೆಯಲ್ಲಿ ಲಭ್ಯವಿದೆ.

ಹುವಾಯಿ ಜಿಟಿ ೫ ಪ್ರೋ ಇದೀಗ ಟೈಟಾನಿಯಂ ಆವೃತ್ತಿಯಲ್ಲಿ ಬಿಡುಗಡೆಯಾಗಿದ್ದು, ಅಮೆಜಾನ್ ಮತ್ತು ಫ್ಲಿಫ್ ಕಾರ್ಟ್‌ನಲ್ಲಿ ದೊರೆಯಲಿದೆ.

ಅತ್ಯುತ್ತಮ ಸ್ಟೋರ್ಟ್ಸ್ ಮೋಡ್, ಇಂಟಿಗ್ರೇಟೆಡ್ ಜಿಪಿಎಸ್ ಮ್ಯಾಪ್, ಅತ್ಯುತ್ತಮ ಇಸಿಜಿ ಮಾನಿಟರ್ ಹೊಂದಿರುವ ಈ ವಾಚ್‌ಅನ್ನು ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ.

ಫಿಟ್ನೆಸ್‌ನ ಜತೆ ಜತೆಗೆ ಈ ವಾಚ್ ಸಮಗ್ರ ಆರೋಗ್ಯ ವಿವರಗಳನ್ನೂ ನೀಡುತ್ತದೆ. ಒತ್ತಡ ನಿರ್ವಹಣೆಗೆ ಹುವಾವೇ ಅಡ್ವಾನ್ಸ್ ಟ್ರುಸೆನ್ಸ್ ಟೆಕ್ನಾಲಜಿ, ಸ್ಲೀಪ್ ಎನಾಲಿಸಿಸ್, ಹಾರ್ಟ್ ಬೀಟ್ ಮತ್ತು ಹೆಲ್ತ್ ಟ್ರ್ಯಾಕಿಂಗ್ ಒಳಗೊಂಡಂತೆ ಒಟ್ಟಾರೆ ಆರೋಗ್ಯ ವಿವರಗಳನ್ನು ಒದಗಿಸುತ್ತದೆ. ಏರೋಸ್ಪೇಸ್ -ಗ್ರೇಡ್ ಟೈಟಾನಿಯಂ ಮಿಶ್ರಲೋಹದಿಂದ ಈ ವಾಚ್‌ಅನ್ನು ತಯಾರಿಸಲಾಗಿದ್ದು, ಇದರ ಮಾರುಕಟ್ಟೆ ಮೌಲ್ಯವು ೩೯,೦೦೦ ರೂ. ಗಳಾಗಿದೆ.

ದೈನಂದಿನ ಚಟುವಟಿಕೆಗಳಿಗೆ ಹೊಂದುವಂತೆ ಈ ವಾಚ್‌ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ.

 

Tags:
error: Content is protected !!