ಅತ್ಯುತ್ತಮ ವಿನ್ಯಾಸ, ದೀರ್ಘಾವಧಿಯ ಬ್ಯಾಟರಿ ಬಾಳಿಕೆ, ಹೆಲ್ತ್ ಮತ್ತು ಮೋಷನ್ ಟ್ರ್ಯಾಕಿಂಗ್ ಹಾಗೂ ಇನ್‌ಬಿಲ್ಟ್ ಕರೆ ಸೌಲಭ್ಯಗಳು ಮತ್ತು ನ್ಯಾವಿಗೇಷನ್ ವೈಶಿಷ್ಟ ಗಳೊಂದಿಗೆ ಫಿಟ್ನೆಸ್ ಮತ್ತು ಟೆಕ್ ಪ್ರಿಯರಿಗೆ ಇಷ್ಟವಾಗುವಂತೆ ವಿನ್ಯಾಸಗೊಳಿಸಿರುವ ನೂತನ ವಾಚ್ ಮಾರುಕಟ್ಟೆಯಲ್ಲಿ ಲಭ್ಯವಿದೆ.
ಹುವಾಯಿ ಜಿಟಿ ೫ ಪ್ರೋ ಇದೀಗ ಟೈಟಾನಿಯಂ ಆವೃತ್ತಿಯಲ್ಲಿ ಬಿಡುಗಡೆಯಾಗಿದ್ದು, ಅಮೆಜಾನ್ ಮತ್ತು ಫ್ಲಿಫ್ ಕಾರ್ಟ್‌ನಲ್ಲಿ ದೊರೆಯಲಿದೆ.
ಅತ್ಯುತ್ತಮ ಸ್ಟೋರ್ಟ್ಸ್ ಮೋಡ್, ಇಂಟಿಗ್ರೇಟೆಡ್ ಜಿಪಿಎಸ್ ಮ್ಯಾಪ್, ಅತ್ಯುತ್ತಮ ಇಸಿಜಿ ಮಾನಿಟರ್ ಹೊಂದಿರುವ ಈ ವಾಚ್‌ಅನ್ನು ಸುಂದರವಾಗಿ ವಿನ್ಯಾಸಗೊಳಿಸಲಾಗಿದೆ.
ಫಿಟ್ನೆಸ್‌ನ ಜತೆ ಜತೆಗೆ ಈ ವಾಚ್ ಸಮಗ್ರ ಆರೋಗ್ಯ ವಿವರಗಳನ್ನೂ ನೀಡುತ್ತದೆ. ಒತ್ತಡ ನಿರ್ವಹಣೆಗೆ ಹುವಾವೇ ಅಡ್ವಾನ್ಸ್ ಟ್ರುಸೆನ್ಸ್ ಟೆಕ್ನಾಲಜಿ, ಸ್ಲೀಪ್ ಎನಾಲಿಸಿಸ್, ಹಾರ್ಟ್ ಬೀಟ್ ಮತ್ತು ಹೆಲ್ತ್ ಟ್ರ್ಯಾಕಿಂಗ್ ಒಳಗೊಂಡಂತೆ ಒಟ್ಟಾರೆ ಆರೋಗ್ಯ ವಿವರಗಳನ್ನು ಒದಗಿಸುತ್ತದೆ. ಏರೋಸ್ಪೇಸ್ -ಗ್ರೇಡ್ ಟೈಟಾನಿಯಂ ಮಿಶ್ರಲೋಹದಿಂದ ಈ ವಾಚ್‌ಅನ್ನು ತಯಾರಿಸಲಾಗಿದ್ದು, ಇದರ ಮಾರುಕಟ್ಟೆ ಮೌಲ್ಯವು ೩೯,೦೦೦ ರೂ. ಗಳಾಗಿದೆ.
ದೈನಂದಿನ ಚಟುವಟಿಕೆಗಳಿಗೆ ಹೊಂದುವಂತೆ ಈ ವಾಚ್‌ಅನ್ನು ವಿನ್ಯಾಸಗೊಳಿಸಲಾಗಿದೆ ಎಂದು ಕಂಪೆನಿ ತಿಳಿಸಿದೆ.