Mysore
27
light rain

Social Media

ಭಾನುವಾರ, 02 ಆಗಸ್ಟ್ 2026
Light
Dark

ಬಿಜೆಪಿಯಲ್ಲಿ ಹೆಚ್ಚಾದ ರೇಣುಕಾಚಾರ್ಯ ಉಚ್ಛಾಟನೆಯ ಕೂಗು

ದಾವಣಗೆರೆ: ಬಿಜೆಪಿಯಿಂದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ ಉಚ್ಛಾಟನೆಯ ಕೂಗು ಪದೇ ಪದೇ ಕೇಳಿಬರುತ್ತಿರುವ ಬೆನ್ನಲ್ಲೇ ಇದೀಗ ರೇಣುಕಾಚಾರ್ಯ ಉಚ್ಛಾಟನೆಗೂ ಬಿಜೆಪಿಯಲ್ಲಿ ಕೂಗು ಜೋರಾಗಿದೆ.

ಈ ಬಗ್ಗೆ ಮಾತನಾಡಿರುವ ಸಿದ್ದೇಶ್ವರ್‌ ತಂಡದ ಮುಖಂಡರು ಹಾಗೂ ಬೆಂಬಲಿಗರು ಮಾಜಿ ಸಚಿವ ರೇಣುಕಾಚಾರ್ಯ ಅವರನ್ನು ಪಕ್ಷದಿಂದ ಉಚ್ಛಾಟನೆ ಮಾಡುವಂತೆ ಒತ್ತಾಯಿಸಿದ್ದಾರೆ.

ಪಕ್ಷದಿಂದ ಶಾಸಕ ಬಸನಗೌಡ ಪಾಟೀಲ್‌ ಯತ್ನಾಳ್‌ರನ್ನು ಉಚ್ಛಾಟನೆ ಮಾಡುವುದಾದರೆ ರೇಣುಕಾಚಾರ್ಯ ಅವರನ್ನು ಉಚ್ಛಾಟನೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ರೇಣುಕಾಚಾರ್ಯ ಅವರು ನಳಿನ್‌ ಕುಮಾರ್‌ ಕಟೀಲ್‌, ಸಂತೋಷ್‌ ಜಿ ಅವರನ್ನು ನಿಂದಿಸಿದ್ದರು. ಬಿಎಸ್‌ವೈ ವಿರುದ್ಧವೇ ಬಂಡಾಯವೆದ್ದಿದ್ದರು. ಇಂತಹ ಜೋಕರ್‌ನನ್ನು ಬಿಜೆಪಿ ಪಕ್ಷದಿಂದ ಉಚ್ಛಾಟಿಸಬೇಕು ಎಂದು ಸಿದ್ದೇಶ್ವರ್‌ ಬಣದ ನಾಯಕರು ಒತ್ತಾಯಿಸಿದ್ದಾರೆ.

 

Tags:
error: Content is protected !!