Mysore
18
broken clouds

Social Media

ಬುಧವಾರ, 31 ಡಿಸೆಂಬರ್ 2025
Light
Dark

ಕೆಆರ್‌ ನಗರ: ಕ್ಷುಲ್ಲಕ ಕಾರಣಕ್ಕೆ ಯುವಕನಿಗೆ ಚೂರಿ ಇರಿತ

ಕೆ.ಆರ್.ನಗರ: ಪಟ್ಟಣದ ಬಸ್ ನಿಲ್ದಾಣದ ಶೌಚಾಲಯ ಮುಂದೆ ಕ್ಷುಲ್ಲಕ ಕಾರಣಕ್ಕೆ ಕೃಷ್ಣ (19) ಎಂಬ ಯುವಕನಿಗೆ ಮತ್ತೋರ್ವ ಯುವಕ ಚೂರಿ ಇರಿದಿರುವ ಘಟನೆ ನಡೆದಿದೆ.

ಚೂರಿ ಇರಿತಕ್ಕೆ ಒಳಗಾದ ಯುವಕ ಕೆ.ಆರ್.ನಗರ ತಾಲೂಕು ಚೀರನಹಳ್ಳಿ ಗ್ರಾಮದ ಲೇಟ್ ಕುಮಾರ್ ಎಂಬುವವರ ಕೃಷ್ಣ(19) ಮಗನಾಗಿದ್ದು, ಪಟ್ಟಣದ ಸಾರ್ವಜನಿಕ ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಲಾಯಿತು. ಇರಿತಕ್ಕೊಳಗಾದ ಯುವಕನಿಗೆ ಐದಾರು ಕಡೆ ಚೂರಿ ಇರಿದಿದ್ದು, ಗಂಭೀರವಾಗಿದ್ದರಿಂದ ಹೆಚ್ಚಿನ ಚಿಕಿತ್ಸೆಗಾಗಿ ಮೈಸೂರಿಗೆ ಕಳುಹಿಸಲಾಗಿದೆ.

ಇದೇ ಚೀರನಹಳ್ಳಿಯ ಮಹದೇವ್ ಎಂಬುವರ ಮಗ ಸುದೀಪ್ (23) ಸ್ನೇಹಿತ ಕೃಷ್ಣನಿಗೆ ಚೂರಿ ಇರಿತ ಮಾಡಿ ಪರಾರಿಯಾಗಿದ್ದಾನೆ.

 

Tags:
error: Content is protected !!