Mysore
21
overcast clouds

Social Media

ಸೋಮವಾರ, 03 ಆಗಸ್ಟ್ 2026
Light
Dark

ಮಾಜಿ ಸಚಿವ ಬಿ.ಸಿ ಪಾಟೀಲ್‌ ಅಳಿಯ ವಿಷಸೇವಿಸಿ ಆತ್ಮಹತ್ಯೆ: ಕಾರಣ ನಿಗೂಢ!

ದಾವಣಗೆರೆ: ರಾಜ್ಯದ ಮಾಜಿ ಕೃಷಿ ಸಚಿವ, ನಟ ಬಿ.ಸಿ ಪಾಟೀಲ್‌ ಅವರ ಅಳಿಯ ಕೆ.ಜಿ ಪ್ರತಾಪ್‌ ಕುಮಾರ್‌ ಅವರು ವಿಷ ಸೇವಿಸಿ ಸೋಮವಾರ (ಜುಲೈ.8) ಆತ್ಮಹತ್ಯೆ ಮಾಡಿಕೊಂಡಿದ್ದಾರೆ.

ಬಿ.ಸಿ ಪಾಟೀಲ್‌ ಅವರ ಮಗಳಾದ ಶೃತಿ ಪಾಟೀಲ್‌ ಅವರ ಗಂಡ ಕೆ.ಜಿ ಪ್ರತಾಪ್‌ ಕುಮಾರ್‌ (41 ವರ್ಷ) ಆಗಿದ್ದು, ಅಜ್ಞಾತ ಸ್ಥಳದಲ್ಲಿ ವಿಷ ಪ್ರಾಷನ ಮಾಡಿದ್ದಾರೆ.

ಶಿವಮೊಗ್ಗ-ಹರಿಹರ ರಾಜ್ಯ ಹೆದ್ದಾರಿಯ ದಾವಣಗೆರೆಯ ಹೋನ್ನಾಳಿಯ ಅರೆಕೆರೆ ಅರಣ್ಯಪ್ರದೇಶದಲ್ಲಿ ಹುಂಡೈ ಕಾರನ್ನು ಪಾರ್ಕ್‌ ರಸ್ತೆ ಬದಿ ಪಾರ್ಕ್‌ ಮಾಡಿ ವಿಷ ಸೇವಿಸಿದ್ದಾರೆ.

ಇದನ್ನು ಕಂಡ ಸ್ಥಳೀಯರು ಆತನನ್ನು ಸ್ಥಳೀಯ ಮೆಗ್ಗಾನ್‌ ಆಸ್ಪತ್ರೆಗೆ ದಾಖಲಿಸಿದರಾದರೂ ಚಿಕಿತ್ಸೆ ಫಲಕಾರಿಯಾಗದೇ ಪ್ರತಾಪ್‌ ಕುಮಾರ್‌ ಕೊನೆಯುಸಿರೆಳೆದಿದ್ದಾರೆ.

Tags:
error: Content is protected !!