Mysore
30
scattered clouds

Social Media

ಶುಕ್ರವಾರ, 20 ಡಿಸೆಂಬರ್ 2024
Light
Dark

ನಗರದಲ್ಲಿಂದು | ಮೈಸೂರಿನ ಇಂದಿನ ಕಾರ್ಯಕ್ರಮಗಳ ಪಟ್ಟಿ

mysore programs list

 

• ಶ್ರೀ ಶ್ರೀನಿವಾಸ ಸ್ವಾಮಿ ವಾರ್ಷಿಕ ಮಹೋತ್ಸವ
ಬೆಳಿಗ್ಗೆ 6ಕ್ಕೆ, ಶ್ರೀ ಶ್ರೀನಿವಾಸ ಸ್ವಾಮಿ ಕೈಂಕರ್ಯ ಸಭಾ, ವಿಶೇಷ-ನಮ್ಮಾಳ್ವಾರ್ ತಿರು ನಕ್ಷತ್ರ, ಸ್ಥಳ- ಶ್ರೀ ಶ್ರೀನಿವಾಸ ಸ್ವಾಮಿ ದೇವಸ್ಥಾನದ ರಸ್ತೆ, ತಿಲಕ್‌ ನಗರ,

ಯೋಗಾಭ್ಯಾಸ
ಬೆಳಿಗ್ಗೆ 6.30ಕ್ಕೆ, ಜೆಎಸ್‌ಎಸ್‌ ಆಯುರ್ವೆದ ಕಾಲೇಜು, ಸ್ಥಳ: ಜೆಎಸ್‌ಎಸ್ ಆಯುರ್ವೇದ ಆಸ್ಪತ್ರೆ, ಲಲಿತಾದ್ರಿಪುರ ರಸ್ತೆ.

ವಾರ್ಷಿಕೋತ್ಸವ ಸಂಭ್ರಮಾಚರಣೆ
ಬೆಳಿಗ್ಗೆ 8.30ಕ್ಕೆ, ಶ್ರೀ ವೆಂಕಟೇಶ್ವರ ಧ್ಯಾನ ಕೇಂದ್ರ, ಸ್ಥಳ- ಶ್ರೀ ವೆಂಕಟೇಶ್ವರ ಧ್ಯಾನ ಕೇಂದ್ರ, ಉತ್ತರಾದಿ ಮಠ, ಶ್ರೀರಾಂಪುರ,

ಬೊಜ್ಜು ನಿವಾರಣಾ ಚಿಕಿತ್ಸಾ ಶಿಬಿರ
ಬೆಳಿಗ್ಗೆ 9ಕ್ಕೆ, ಜೆಎಸ್‌ಎಸ್ ಆಯುರ್ವೇದ ಕಾಲೇಜು, ಸ್ಥಳ: ಜೆಎಸ್‌ಎಸ್‌ ಆಯುರ್ವೇದ ಆಸ್ಪತ್ರೆ, ಲಲಿತಾದ್ರಿಪುರ ರಸ್ತೆ.

ಥೈರಾಯಿಡ್ ಗ್ರಂಥಿಯ ವ್ಯಾಧಿಗಳ ಚಿಕಿತ್ಸಾ ಶಿಬಿರ
ಬೆಳಿಗ್ಗೆ 9ಕ್ಕೆ, ಜೆಎಸ್‌ಎಸ್ ಆಯುರ್ವೆದ ಕಾಲೇಜು, ಸ್ಥಳ: ಜೆಎಸ್‌ಎಸ್‌ ಆಯುರ್ವೇದ ಆಸ್ಪತ್ರೆ, ಲಲಿತಾದ್ರಿಪುರ ರಸ್ತೆ.

• ದೃಷ್ಟಿದೋಷ ಚಿಕಿತ್ಸಾ ಶಿಬಿರ
ಬೆಳಿಗ್ಗೆ 9ಕ್ಕೆ, ಜೆಎಸ್ಎಸ್ ಆಯುರ್ವೇದ ಕಾಲೇಜು, ಸ್ಥಳ: ಜೆಎಸ್‌ಎಸ್‌ ಆಯುರ್ವೇದ ಆಸ್ಪತ್ರೆ, ಲಲಿತಾದ್ರಿಪುರ ರಸ್ತೆ.

ಆರೋಗ್ಯಾಯುಷ್ಯ ಆರೋಗ್ಯ ವರ್ಧಕ ಚಿಕಿತ್ಸಾ ಶಿಬಿರ
ಬೆಳಿಗ್ಗೆ 9ಕ್ಕೆ, ಜೆಎಸ್‌ಎಸ್ ಆಯುರ್ವೆದ ಕಾಲೇಜು, ಸ್ಥಳ: ಜೆಎಸ್‌ಎಸ್‌ ಆಯುರ್ವೇದ ಆಸ್ಪತ್ರೆ, ಲಲಿತಾದ್ರಿಪುರ ರಸ್ತೆ.

• ರಾಮ್‌ಸನ್ಸ್‌ ಕ್ರೀಡಾ ಕೌಶಲ
ಬೆಳಿಗ್ಗೆ 10ಕ್ಕೆ, ರಾಮ್‌ಸನ್ಸ್ ಹ್ಯಾಂಡಿಕ್ರಾಫ್ಟ್ ಸೇಲ್ಸ್ ಎಂಪೋರಿಯಮ್, ಸ್ಥಳ-ರಾಮ್
ಇಂದಿನ ಕಾರ್ಯಕ್ರಮಗಳು
ಸನ್ಸ್ ಹ್ಯಾಂಡಿಕ್ರಾಫ್ಟ್ ಸೇಲ್ಸ್ ಎಂಪೋರಿಯಮ್, ಮೃಗಾಲಯ ಎದುರು,
ನಜರ್ ಬಾದ್.

• ಅಕ್ಯೂ ಡಿಜಿಟಲ್ ಫಿಸಿಯೋಥೆರಪಿ ಚಿಕಿತ್ಸಾ ಶಿಬಿರ
ಬೆಳಿಗ್ಗೆ 10.30ಕ್ಕೆ, ಮೈಸೂರು ಜಿಲ್ಲಾ ಪ್ರಾಕೃತಿಕ ಚಿಕಿತ್ಸಾ ಪರಿಷತ್, ಸ್ಥಳ-ವಿ.ಕೆ.ಪಬ್ಲಿಕ್ ಸ್ಕೂಲ್, 3ನೇ ಹಂತ, ‘ಎ’ ಬ್ಲಾಕ್, ವಿಜಯನಗರ,

2568ನೇ ಬುದ್ಧ ಪೂರ್ಣಿಮೆಯ ಅಂಗವಾಗಿ ಧಮ್ಮಪದ: ಜಾಗತಿಕ ಅನಿವಾರ್ಯ ಉಪನ್ಯಾಸ ಬೆಳಿಗ್ಗೆ 10.30ಕ್ಕೆ, ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣೆ ಕೇಂದ್ರ, ಉದ್ಘಾಟನೆ-ಬೈಲುಕುಪ್ಪೆಯ ಸೆರಾ ಜೆ ಮೊನಾಸ್ಟಿಕ್ ವಿವಿಯ ಭಿಕ್ಖು ಜಂಪಾ ಗ್ಯಾಲ್ ಸ್ಪೇನ್, ಸಂಪನ್ಮೂಲ ವ್ಯಕ್ತಿ-ಮೈಸೂರು ವಿವಿ ಇಂಗ್ಲಿಷ್ ಅಧ್ಯಯನ ವಿಭಾಗದ ವಿಶ್ರಾಂತ ಮುಖ್ಯಸ್ಥ ಪ್ರೊ.ಡಿ.ಎ.ಶಂಕರ್, ಅಧ್ಯಕ್ಷತೆ-ಡಾ.ಬಿ.ಆರ್.ಅಂಬೇಡ್ಕರ್ ಸಂಶೋಧನಾ ಹಾಗೂ ವಿಸ್ತರಣೆ ಕೇಂದ್ರದ ನಿರ್ದೆಶಕ ಪ್ರೊ.ಜೆ.ಸೋಮಶೇಖರ್, ಸ್ಥಳ-ಡಾ.ಬೆಟ್ರಿಕ್ಸ್ ‘ಡಿ’ ಸೌಜ ಸಭಾಂಗಣ, ಡಾ.ಬಿ.ಆರ್.ಅಂಬೇಡ‌ ಸಂಶೋಧನಾ ಹಾಗೂ ವಿಸ್ತರಣೆ ಕೇಂದ್ರ, ಮಾನಸಗಂಗೋತ್ರಿ,

• ಎಸ್‌ಎಸ್‌ಎಲ್‌ಸಿ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ
ಬೆಳಿಗ್ಗೆ 11ಕ್ಕೆ, ಹಿರಣ್ಮಯಿ ಪ್ರತಿಷ್ಠಾನ ಮತ್ತು ಕಾವೇರಿ ಬೆಳಗ, ಪ್ರಶಸ್ತಿ ಪ್ರದಾನ-ಎಪಿಎಂಸಿ
ಬಂಡಿಪಾಳ್ಯದ ಮೇಘನಾ ವೆಂಕಟೇಶ್‌, ಅತಿಥಿ-ಕಾವೇರಿ ಬಳಗದ ಅಧ್ಯಕ್ಷ ಎನ್. ಕೆ.ಕಾವೇರಿಯಮ್ಮ, ಹಿರಣ್ಮಯಿ ಪ್ರತಿಷ್ಠಾನದ ಅಧ್ಯಕ್ಷ ಎ.ಸಂಗಪ್ಪ, ಸ್ಥಳ- ಶ್ರೀ ಶಿರಡಿ ಸಾಯಿಬಾಬಾ ಮಂದಿರ, ರಾಮಾನುಜ ರಸ್ತೆಯ 9ನೇ ಕ್ರಾಸ್‌.

•2586ನೇ ಬುದ್ದ ಜಯಂತಿ
ಬೆಳಿಗ್ಗೆ 11ಕ್ಕೆ, ಜೈಭೀಮ್ ಜನಸ್ಪಂದನ ವೇದಿಕೆ, ಅತಿಥಿಗಳು-ಶ್ರೀ ಜ್ಞಾನಪ್ರಕಾಶ ಸ್ವಾಮೀಜಿ, ನಗರಪಾಲಿಕೆ ಮಾಜಿ ಸದಸ್ಯ ಸಿದ್ದಪ್ಪ, ಅಧ್ಯಕ್ಷತೆ-ಜೈಭೀಮ್ ಜನಸ್ಪಂದನ ವೇದಿಕೆ ಅಧ್ಯಕ್ಷ-ಚೇತನ್ ಕಾಂತರಾಜ್, ಸ್ಥಳ-ಉರಿಲಿಂಗ ಪೆದ್ದೀಶ್ವರ ಮಠ, ಗಾಂಧಿನಗರ.

•133ನೇ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ
ಬೆಳಿಗ್ಗೆ 11ಕ್ಕೆ, ಕರ್ನಾಟಕ ರಾಜ್ಯ ಮುಕ್ತ ವಿವಿಯ ಡಾ.ಬಿ.ಆರ್.ಅಂಬೇಡ್ಕ‌ರ್ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ, ಉದ್ಘಾಟನೆ-ಕರ್ನಾಟಕ ರಾಜ್ಯ ಕಾನೂನು ವಿವಿಯ ಕುಲಪತಿ ಪ್ರೊ.ಸಿ.ಬಸವರಾಜು, ಉಪನ್ಯಾಸ-ಕರಾಮುವಿ ಪರೀಕ್ಷಾಂಗ ಕುಲಸಚಿವ ಡಾ.ಎಚ್‌.ವಿಶ್ವನಾಥ್, ಉಪಸ್ಥಿತಿ-ಕರಾಮುವಿ ಕುಲಸಚಿವ ಪ್ರೊ. ಕೆ.ಬಿ.ಪ್ರವೀಣ್, ಅಧ್ಯಕ್ಷತೆ-ಕರ್ನಾಟಕ ರಾಜ್ಯ ಮುಕ್ತ ವಿವಿ ಕುಲಪತಿ ಪ್ರೊ.ಶರಣಪ್ಪ ವಿ. ಹಲಸೆ, ಸ್ಥಳ-ಕಾವೇರಿ ಸಭಾಂಗಣ, ಕರ್ನಾಟಕ ರಾಜ್ಯ ಮುಕ್ತ ವಿವಿ.

ಪ್ರೊ.ಎಂ.ಮಾದಯ್ಯ ಅವರಿಗೆ ನುಡಿನಮನ ಕಾರ್ಯಕ್ರಮ
ಬೆಳಿಗ್ಗೆ 11.30ಕ್ಕೆ, ವಿಶ್ವಮಾನವ ಮೈಸೂರು ವಿವಿಯ ನೌಕರರ ವೇದಿಕೆ, ಮೈವಿವಿ ಸ್ನಾತಕ ಗ್ರಂಥಾಲಯ, ನುಡಿನಮನ ಸಲ್ಲಿಸುವರು-ಶಾಸಕರಾದ ಕೆ.ಹರೀಶ್ ಗೌಡ, ಟಿ.ಎಸ್.ಶ್ರೀವತ್ಸ, ಮೈಸೂರು ವಿವಿ ಕುಲಪತಿ ಪ್ರೊ.ಎನ್.ಕೆ.ಲೋಕನಾಥ್, ಸ್ಥಳ-ಸ್ನಾತಕ
ಗ್ರಂಥಾಲಯ, ಮಹಾರಾಜ ಕಾಲೇಜು.

•133ನೇ ಡಾ.ಬಿ.ಆರ್.ಅಂಬೇಡ್ಕರ್ ಜನ್ಮದಿನಾಚರಣೆ
ಮಧ್ಯಾಹ್ನ 12ಕ್ಕೆ, ಮೈಸೂರು ವಿವಿಯ ಕಾನೂನು ಶಾಲೆ, ಉದ್ಘಾಟನೆ-ಬಿ.ಎನ್. ಬಹುದ್ದೂರ್ ನಿರ್ವಹಣೆ ಮತ್ತು ವಿಜ್ಞಾನ ಸಂಸ್ಥೆಯ ನಿರ್ದೇಶಕ ಪ್ರೊ.ಡಿ.ಆನಂದ್, ಅತಿಥಿಗಳು-ಮೈಸೂರು ವಿವಿ ಕಾನೂನು ಅಧ್ಯಯನ ವಿಭಾಗದ ಡೀನ್ ಪ್ರೊ.ಸುರೇಶ್ ಬೆಂಜಮಿನ್, ಪ್ರಾಧ್ಯಾಪಕ ಪ್ರೊ.ರಮೇಶ್, ಅಧ್ಯಕ್ಷತೆ-ಮೈಸೂರು ವಿವಿ ಕಾನೂನು ಅಧ್ಯಯನ ವಿಭಾಗ ಮತ್ತು ಕಾನೂನು ಶಾಲೆಯ ಅಧ್ಯಕ್ಷ ಪ್ರೊ.ಟಿ.ಆರ್. ಮಾರುತಿ, ಸ್ಥಳ-ಕಾನೂನು ಶಾಲೆ, ಮಾನಸ ಗಂಗೋತ್ರಿ,

• ಮುಳ್ಳೂರು ಗುರುಪ್ರಸಾದ್ ಅವರಿಗೆ ಅಭಿನಂದನೆ ಸಮಾರಂಭ
ಮಧ್ಯಾಹ್ನ 2ಕ್ಕೆ, ಮೈಸೂರು ಜಿಲ್ಲಾ ಬ್ರಾಹ್ಮಣ ಯುವ ವೇದಿಕೆ, ಅತಿಥಿಗಳು- ಧಾರ್ಮಿಕ ಮುಖಂಡ ಭಾನುಪ್ರಕಾಶ್ ಶರ್ಮ, ಮೈಸೂರು ನಗರ ಮತ್ತು ಜಿಲ್ಲಾ ಬ್ರಾಹ್ಮಣ ಸಂಘದ ಅಧ್ಯಕ್ಷ ಡಿ.ಟಿ.ಪ್ರಕಾಶ್, ಹಿರಿಯ ಬ್ರಾಹ್ಮಣ ಮುಖಂಡ ಕೆ.ರಘುರಾಂ ವಾಜಪೇಯಿ, ಸ್ಥಳ- ಅಪೂರ್ವ ಹೋಟೆಲ್, ಚಾಮುಂಡಿಪುರಂ.

ಅಂತರ್ಜಾತಿ ದಂಪತಿ ನೋಂದಣಿ ಮಾಡುವ
ಹಾಗೂ ವೆಬ್‌ಸೈಟ್ ಉದ್ಘಾಟನಾ ಕಾರ್ಯಕ್ರಮ ಸಂಜೆ 4ಕ್ಕೆ, ಜನಸ್ಪಂದನ ಟ್ರಸ್ಟ್ ಮಾನವ ಮಂಟಪ, ವಿಶೇಷ ಅಂತರ್ಜಾತಿ ವಿಹಾಹಿತರ ಸಭೆ ಹಾಗೂ ಲಕ್ಷಾಂತರ ಅಂತರ್ಜಾತಿ ದಂಪತಿಗಳ ನೋಂದಣಿ ಮಾಡುವ ವೆಬ್‌ಸೈಟ್ ಉದ್ಘಾಟನಾ ಕಾರ್ಯಕ್ರಮ, ಉದ್ಘಾಟನೆ-ಮುಖ್ಯಮಂತ್ರಿ ಸಿದ್ದರಾಮಯ್ಯ, ವಿಷಯ ಮಂಡನೆ-ರಂಗ ನಿರ್ದೇಶಕ ಸಿ.ಬಸವಲಿಂಗಯ್ಯ, ಹಿರಿಯ ಪತ್ರಕರ್ತ ಜಿ.ಪಿ.ಬಸವರಾಜು, ಪ್ರಗತಿಪರ ಚಿಂತಕ ಡಾ.ಬಂಜಗೆರೆ ಜಯಪ್ರಕಾಶ್, ಸಾಹಿತಿ
ಎಸ್.ಜಿ.ಸಿದ್ದರಾಮಯ್ಯ, ಅಧ್ಯಕ್ಷತೆ-ಮಾಜಿ ಶಾಸಕ ಎಂ.ಕೆ.ಸೋಮಶೇಖರ್, ಸ್ಥಳ-ಚಿಕ್ಕಮಾನಿಕೇತನ ಕಲ್ಯಾಣಮಂಟಪ, ಕುವೆಂಪುನಗರ.

• ಬಿಎಸ್ಎಸ್ ವಿದ್ಯೋದಯ ಉದ್ಘಾಟನಾ ಸಮಾರಂಭ
ಸಂಜೆ 5ಕ್ಕೆ, ವೈ.ಕೆ.ಅಮೃತಬಾಯಿ ಎಸ್. ಕೆ.ಸುರಮಾ ಬಾಯಿ ಭಗಿನಿ ಸೇವಾ ಸಮಾಜ ಎಜುಕೇಷನಲ್ ಅಂಡ್‌ ಕಲ್ಬರಲ್ ಟ್ರಸ್ಟ್, ಶ್ರೀ ವಿಜಯ ವಿಠಲ ಪ್ರತಿಷ್ಠಾನ, ಅತಿಥಿ-ಉಡುಪಿಯ ಶ್ರೀ ಮಧ್ವಾಚಾರ್ಯ ಮೂಲ ಮಹಾಸಂಸ್ಥಾನದ ಹೃಷಿಕೇಶತೀರ್ಥ ಪೀಠದ ಶ್ರೀ ವಿದ್ಯಾಧೀಶತೀರ್ಥ ಸ್ವಾಮೀಜಿ, ಸುತ್ತೂರು ಕ್ಷೇತ್ರದ ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಉಡುಪಿಯ ಪೇಜಾವರ ಮಠದ ಶ್ರೀ ವಿಶ್ವಪ್ರಸನ್ನತೀರ್ಥ ಸ್ವಾಮೀಜಿ, ಸ್ಥಳ- ಬಿಎಸ್‌ಎಸ್ ವಿದ್ಯೋದಯ ಶಾಲೆ, ರಾಘವೇಂದ್ರಸ್ವಾಮಿ ಮಠದ ಹತ್ತಿರ, ಕೃಷ್ಣಮೂರ್ತಿಪುರಂ.

• ಭಗವಾನ್ ಬುದ್ಧರ 2568ನೇ ಜನ್ಮ
ದಿನಾಚರಣೆ
ಸಂಜೆ 5.30ಕ್ಕೆ, ವಿಶ್ವಮೈತ್ರಿ ಬುದ್ಧವಿಹಾರ, ಉದ್ಘಾಟನೆ-ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಸ್ಥಿತಿ-ವಿಶ್ವಮೈತ್ರಿ ಬುದ್ಧವಿಹಾರದ ಬೌದ್ಧಭಿಕ್ಕು ಡಾ.ಕಲ್ಯಾಣಸಿರಿ ಬಂತೇಜಿ ಭಾಷಣಕಾರರು – ಬೆಂಗಳೂರು ವಿವಿಯ ಮನೋವಿಜ್ಞಾನ ವಿಭಾಗದ ಪ್ರಾಧ್ಯಾಪಕ ಡಾ.ಎನ್.ಮೀನಾಕ್ಷಿ, ಅಧ್ಯಕ್ಷತೆ-ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ. ಮಹದೇವಪ್ಪ, ಸ್ಥಳ-ವಿಶ್ವಮೈತ್ರಿ ಬುದ್ಧವಿಹಾರ, ಅಶೋಕ ವೃತ್ತ.

• ಸಿದ್ದ ಸಮಾಧಿ ಯೋಗ ಶಿಬಿರ ಸಂಜೆ 6ಕ್ಕೆ, ಋಷಿ ಸಂಸ್ಕೃತಿ ವಿದ್ಯಾಕೇಂದ್ರ, ಸ್ಥಳ-ಋಷಿ ಸಂಸ್ಕೃತಿ ವಿದ್ಯಾಕೇಂದ್ರ, ನಂ.8 ಆದಿಚುಂಚನಗಿರಿ ರಸ್ತೆ, ‘ಕೆ’ ಬ್ಲಾಕ್, ಕುವೆಂಪುನಗರ.

• ಬುದ್ಧ ಪೂರ್ಣಿಮೆಯ ಅಂಗವಾಗಿ ಅರಿವು ಅರಳಿ ಬುದ್ದನಾಗು ಉಪನ್ಯಾಸ ಸಂಜೆ 6ಕ್ಕೆ, ಆಯುರ್ವೇದ ಪಂಚಕರ್ಮ ಆಸ್ಪತ್ರೆ, ದೀಕ್ಷಿತ್ ಆರೋಗ್ಯ ಧಾಮ, ಉಪನ್ಯಾಸಕರು- ದೀಕ್ಷಿತ್ ಆರೋಗ್ಯ ಧಾಮ ನಿರ್ದೆಶಕ ಡಾ.ಸಿ.ಎಸ್.ಅನಿಲ್ ಕುಮಾರ್, ಸ್ಥಳ- ದೀಕ್ಷಿತ್ ಆರೋಗ್ಯ ಧಾಮ, 12, ‘ಸಿ’ ಬ್ಲಾಕ್, 3ನೇ ಹಂತ, ವಿಜಯನಗರ,

ಬೆಳದಿಂಗಳ ಸಂಗೀತ-267
ಸಂಜೆ 6ಕ್ಕೆ, ಶ್ರೀ ಸುತ್ತೂರು ಮಠ, ಉಪಸ್ಥಿತಿ-ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿ, ಗಾಯನ-ವಿದ್ವಾನ್ ವಿನಯ್ ಶರ್ಮಾ, ವಿದುಷಿ ಸಿ.ವಿ.ಶ್ರುತಿ, ವಿದ್ವಾನ್ ಕೆ.ವಿಷ್ಣುವರ್ಧನ, ವಿದ್ವಾನ್ ಶ್ರೀನಿಧಿ ಆರ್. ಕೌಂಡಿನ್ಯ, ಸ್ಥಳ- ಶ್ರೀ ಸುತ್ತೂರು ಮಠ, ಚಾಮುಂಡಿಬೆಟದ ತಪ್ಪಲು.

2568ನೇ ಬುದ್ಧ ಜಯಂತಿ ಸಂಜೆ 6ಕ್ಕೆ ಕರ್ನಾಟಕ ಬುದ್ಧ ಧಮ್ಮ ಸಮಿತಿ, ಉಪಸ್ಥಿತಿ-ಕೊಳ್ಳೇಗಾಲದ ಜೇತವನ ಬುದ್ಧವಿಹಾರದ ಭಿಕ್ಖು ಮನೋರಕ್ಷಿತ ಬಂತೇಜಿ, ಅತಿಥಿ-ವಿಚಾರವಾದಿ ಎನ್‌.ಬಿ.ಶಿವರುದ್ರಪ್ಪ, ಅಧ್ಯಕ್ಷತೆ-ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆ ಅಧ್ಯಕ್ಷ ಪ್ರೊ.ಡಿ.ನಂಜುಂಡಯ್ಯ, ಪ್ರಾಸ್ತಾವಿಕ ನುಡಿ- ಆರ್.ಮಹಾದೇವಪ್ಪ ಸ್ಥಳ-ಧ್ಯಾನ ಮಂದಿರ, ಡಿ.ಸಂಜೀವಯ್ಯ ಸ್ಮಾರಕ ಶಿಕ್ಷಣ ಸಂಸ್ಥೆ ಆವರಣ, ವಿಜಯನಗರ 1ನೇ ಹಂತ •

ಕದಂಬ ನಗೆ ನಾಟಕೋತ್ಸವ ಸಂಜೆ 6.30ಕ್ಕೆ, ಕದಂಬ ರಂಗ ವೇದಿಕೆ, ಉದ್ಘಾಟನೆ-ವಿಶ್ವಜ್ಯೋತಿ ಶ್ರೀ ಪಂಚಾಕ್ಷರ ನಾಟ್ಯ ಸಂಘದ ಸಂಸ್ಥೆಯ ಜೇವರ್ಗಿ ರಾಜಣ್ಣ, ಅತಿಥಿಗಳು-ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಜಂಟಿ ನಿರ್ದೇಶಕ ವಿ.ಎನ್.ಮಲ್ಲಿಕಾರ್ಜುನ ಸ್ವಾಮಿ, ಹಾಸ್ಯ ಕಲಾವಿದ ಆನಂದ್, ಸಂಜೆ 7ಕ್ಕೆ ನೆಮ್ಮದಿ ಅಪಾರ್ಟ್‌ಮೆಂಟ್ ನಾಟಕ, ಸ್ಥಳ- ಕಿರುರಂಗಮಂದಿರ, ಕಲಾಮಂದಿರ ಆವರಣ

Tags: