Mysore
21
overcast clouds

Social Media

ಶನಿವಾರ, 20 ಜೂನ್ 2026
Light
Dark

ವಾಮಾಚಾರದ ಭೀತಿಯಿಂದ ಮಾನಸಿಕವಾಗಿ ನೊಂದಿದ್ದ ಯುವಕ ಆತ್ಮಹತ್ಯೆ

ಮೈಸೂರು: ಮಾಟ ಮಂತ್ರ ಮಾಡಿಸಿದ್ದಾರೆ ಎಂದು ಮಾನಸಿಕವಾಗಿ ನೊಂದಿದ್ದ ಯುವಕ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಗರದ ಗೋಕುಲಂ ಬಡಾವಣೆಯಲ್ಲಿ ಜರುಗಿದ್ದು, ಈ ಸಂಬಂಧ ವಿವಿಪುರಂ ಠಾಣೆಯಲ್ಲಿ ದೂರು ದಾಖಲಾಗಿದೆ.

ಅರ್ಚಕ ಮುರಳೀಧರ್‌ ಮಗ ಮಧುಕರ್(22)‌ ಎಂಬಾತ ಮೃತ ದುರ್ದೈವಿ. ಮುರಳೀಧರ್‌ ಪತ್ನಿ ವಿಚ್ಛೇಧನ ಪಡೆದ ಕಾರಣ ಮಗ ಮಧುಕರ್‌ ತಂದೆಯ ಜೊತೆ ವಾಸವಾಗಿದ್ದರು.

ಕೆಲದಿನಗಳಿಂದ ಯಾರೋ ಮಾಟ ಮಂತ್ರ ಮಾಡಿಸಿದ್ದಾರೆ ಎಂದು ಮೃತನು ದಿನರಾತ್ರಿ ಭಯದ ಭೀತಿಯಲ್ಲಿದ್ದನಂತೆ. ಡಿಪ್ಲೋಮಾದಲ್ಲಿ ಅನುತ್ತೀರ್ಣಗೊಂಡ ಮಧುಕರ್‌ ಸಣ್ಣಪುಟ್ಟ ಕೆಲಸ ಮಾಡಿಕೊಂಡಿದ್ದ. ಹೊರಗೆ ಹೋಗಿ ಬರುತ್ತೇನೆ ಎಂದು ಹೇಳಿ ಹೋದವನು ಸಂಜೆ ಮನೆಗೆ ಬಂದಾಗ ಕೊಠಡಿಯಲ್ಲಿ ನೇಣುಬಿಗಿದ ಸ್ಥಿತಿಯಲ್ಲಿದ್ದನು. ವಾಮಾಚಾರದ ಭೀತಿಯಿಂದ ಮಧುಕರ್‌ ಆತ್ಮಹತ್ಯೆಗೆ ಶರಣಾಗಿದ್ದಾನೆ ಎಂದು ಮೃತನ ತಂದೆ ಮುರಳೀಧರ್‌ ದೂರಿನಲ್ಲಿ ಉಲ್ಲೇಖಿಸಿದ್ದಾರೆ.

Tags:
error: Content is protected !!