Mysore
27
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ಮೈಸೂರು: ಹುಲಿ ವೀಕ್ಷಣೆಗಾಗಿ ಹಾಕಿದ್ದ ಸಿಸಿಟಿವಿಯಲ್ಲಿ ಚಿರತೆ ಸೆರೆ

ಮೈಸೂರು: ಜಯಪುರ ಹೋಬಳಿಯ ದೊಡ್ಡ ಕಾನ್ಯಾ ಗ್ರಾಮದಲ್ಲಿ ಹುಲಿಗಳು ಸಂಚರಿಸುತ್ತಿವೆ ಎಂದು  ಸ್ಥಳೀಯರು ನೀಡಿದ್ದ ಮಾಹಿತಿಯ ಹಿನ್ನೆಲೆಯಲ್ಲಿ ಅವುಗಳ ಚಲನವಲನ ಗಮನಿಸಲು ಅರಣ್ಯ ಇಲಾಖೆ ಅಳವಡಿಸಿದ್ದ ಸಿಸಿಟಿವಿಯಲ್ಲಿ ಹುಲಿಗಳ ಬದಲಾಗಿ ಚಿರತೆ ಪ್ರತ್ಯಕ್ಷವಾಗಿರುವುದು ಕಂಡುಬಂದಿದೆ.

ದೊಡ್ಡ ಕಾನ್ಯಾ ಎಂಬ ಗ್ರಾಮದ ಬಳಿ ಕಳೆದ ಮಂಗಳವಾರದಿಂದ ಎರಡು ಹುಲಿಗಳು ಓಡಾಡುತ್ತಿವೆ ಎಂಬ ಮಾಹಿತಿಯನ್ನು ಅರಣ್ಯ ಇಲಾಖೆಗೆ ಇಲ್ಲಿನ  ಗ್ರಾಮಸ್ಥರು ನೀಡಿದ್ದರು. ಈ ವಿಚಾರದ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಬಂದ ಅರಣ್ಯ ಇಲಾಖೆಯವರು ಸ್ಥಳದ ಪರಿಶೀಲನೆ ನಡೆಸಿದ ಬಳಿಕ ಗ್ರಾಮಸ್ಥರ ಹೇಳಿಕೆಗಳ ಆಧಾರದ ಮೇಲೆ ಹುಲಿಗಳು ತಿರುಗಾಡುತ್ತಿವೆ ಎಂಬುದನ್ನು ಖಚಿತ ಪಡಿಸಿಕೊಂಡು ಆ ಸ್ಥಳಕ್ಕೆ ಸಿಸಿಟಿವಿಯನ್ನು ಅಳವಡಿಸಿದ್ದರು.

ಈ ಗ್ರಾಮದಲ್ಲಿ ಸಿಸಿಟಿವಿಯನ್ನು ಅಳವಡಿಸಿರುವ ತೋಟದ ಮನೆಯ ಮುಂದಿರುವ ಗೇಟ್‌ ನಲ್ಲಿ ಹುಲಿಗಳ ಬದಲಾಗಿ ಎರಡು ಚಿರತೆಗಳು ಓಡಾಟ ನಡೆಸಿರುವ ದೃಶ್ಯ ಕಂಡು ಬಂದಿದ್ದರಿಂದ, ಈ ಸಂಬಂಧ ಅರಣ್ಯಾಧಿಕಾರಿಗಳು ಸಿಸಿಟಿವಿಯನ್ನು ಪರಿಶೀಲಿಸಿದಾಗ ಆ ಸ್ಥಳದಲ್ಲಿ ಓಡಾಟ ನಡೆಸಿರುವುದು ಹುಲಿಗಳಲ್ಲ ಚಿರತೆಗಳು ಎಂಬುದು ತಿಳಿದುದ್ದರಿಂದ ತನಿಖೆ ನಡೆಸಿ ಚಿರತೆಗಳ ಸೆರೆಗೆ ಸಿಬ್ಬಂದಿಯು ಕಾರ್ಯಾಚಾರಣೆ ಮುಂದುವರೆಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!