Mysore
23
overcast clouds

Social Media

ಭಾನುವಾರ, 14 ಜೂನ್ 2026
Light
Dark

ಅರ್ಜಿಗಳಲ್ಲಿ ನಿಮ್ಮನ್ನು ನೀವು ‘ರಿಪಬ್ಲಿಕ್ ಆಫ್ ಇಂಡಿಯಾ’ ಎಂದು ಹೇಳಿಕೊಳ್ಳುವಂತಿಲ್ಲ: ಸುಪ್ರೀಂ

ನವದೆಹಲಿ : ಗಣರಾಜ್ಯವನ್ನು ಪ್ರತಿನಿಧಿಸಿ ಅರ್ಜಿಗಳನ್ನು ಸಲ್ಲಿಸುವ ಸಿಬಿಐನ ಪ್ರವೃತ್ತಿಯ ಕುರಿತು ತೀವ್ರ ಅಸಮಾಧಾನವನ್ನು ವ್ಯಕ್ತಪಡಿಸಿರುವ ಸರ್ವೋಚ್ಚ ನ್ಯಾಯಾಲಯವು, ಅದು ತನ್ನನ್ನು ‘ರಿಪಬ್ಲಿಕ್ ಆಫ್ ಇಂಡಿಯಾ’ದೊಂದಿಗೆ ಸಮೀಕರಿಸಿಕೊಳ್ಳುವಂತಿಲ್ಲ ಎಂದು ಹೇಳಿದೆ ಎಂದು hindustantimes.com ವರದಿ ಮಾಡಿದೆ.

‘ರಿಪಬ್ಲಿಕ್ ಆಫ್ ಇಂಡಿಯಾ’ ಹೆಸರಿನಲ್ಲಿ ಸಿಬಿಐ ಸಲ್ಲಿಸಿದ್ದ ಅರ್ಜಿಯೊಂದನ್ನು ಶುಕ್ರವಾರ ವಿಚಾರಣೆಗೆತ್ತಿಕೊಂಡಿದ್ದ ನ್ಯಾಯಮೂರ್ತಿಗಳಾದ ಎ.ಎಸ್.ಓಕಾ ಮತ್ತು ಪಂಕಜ ಮಿತ್ತಲ್ ಅವರ ಪೀಠವು, ‘ನೀವು ರಿಪಬ್ಲಿಕ್ ಆಫ್ ಇಂಡಿಯಾ’ ಎಂದೇಕೆ ಅರ್ಜಿ ಸಲ್ಲಿಸಿದ್ದೀರಿ? ನೀವು ಭಾರತ ಒಕ್ಕೂಟವನ್ನು ಅಥವಾ ಗಣರಾಜ್ಯವನ್ನು ಪ್ರತಿನಿಧಿಸುತ್ತಿಲ್ಲ ಎಂದು ಕುಟುಕಿತು.

ಸಿಬಿಐ ‘ರಿಪಬ್ಲಿಕ್ ಆಫ್ ಇಂಡಿಯಾ’ಎಂದು ಹೇಳಿಕೊಂಡು ನ್ಯಾಯಾಲಯದಲ್ಲಿ ಅರ್ಜಿಗಳನ್ನು ಸಲ್ಲಿಸುವುದು ಸೂಕ್ತವಲ್ಲ. ನೀವು ಭಾರತ ಒಕ್ಕೂಟವನ್ನು ಪ್ರತಿನಿಧಿಸುವುದಿಲ್ಲ. ನೀವು ಹಾಗೆ ಅರ್ಜಿಗಳನ್ನು ಸಲ್ಲಿಸುವಂತಿಲ್ಲ ಎಂದು ಪೀಠವು ಸಿಬಿಐ ಪ್ರಕರಣವೊಂದರಲ್ಲಿ ಜಾಮೀನು ವಿರುದ್ದ ಸಲ್ಲಿಸಲಾದ ಮೇಲ್ಮನವಿಯಲ್ಲಿ ತನಿಖಾ ಸಂಸ್ಥೆಯ ಪರ ಹೆಚ್ಚುವರಿ ಸಾಲಿಸಿಟರ್ ಜನರಲ್ ಐಶ್ವರ್ಯಾ ಭಾಟಿ ಅವರನ್ನು ಉದ್ದೇಶಿಸಿ ಹೇಳಿತು.

ಬಳಿಕ ಪೀಠವು ‘ರಿಪಬ್ಲಿಕ್ ಆಫ್ ಇಂಡಿಯಾ’ಪದಗಳನ್ನು ಕೈಬಿಟ್ಟು ಪ್ರಕರಣದ ಕಾರಣ-ಶೀರ್ಷಿಕೆಯನ್ನು ಬದಲಿಸುವಂತೆ ನ್ಯಾಯಾಲಯದ ರಿಜಿಸ್ಟ್ರಿಗೆ ನಿರ್ದೇಶನ ನೀಡಿತು. ಭಾಟಿ ಅದನ್ನು ಒಪ್ಪಿಕೊಂಡರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!