Mysore
22
overcast clouds

Social Media

ಗುರುವಾರ, 13 ಆಗಸ್ಟ್ 2026
Light
Dark

ನೇಪಾಳದಲ್ಲಿ ತಪ್ಪಿ ನದಿಗೆ ಬಿದ್ದ ಬಸ್ : 8 ಮಂದಿ ದುರ್ಮರಣ-15 ಜನರಿಗೆ ಗಾಯ

ನೇಪಾಳ : ನೇಪಾಳದಲ್ಲಿ ಚಾಲಕನ ನಿಯಂತ್ರಣ ತಪ್ಪಿ ಬಸ್​ ಒಂದು ನದಿಗೆ ಬಿದ್ದ ಪರಿಣಾಮ 8 ಮಂದಿ ಮೃತಪಟ್ಟಿದ್ದು, 15 ಜನರಿಗೆ ಗಂಭೀರ ಗಾಯಗಳಾಗಿವೆ. ನೇಪಾಳದ ಧಾಡಿಂಗ್ ಜಿಲ್ಲೆಯಲ್ಲಿ ಪ್ರಯಾಣಿಕರಿದ್ದ ಬಸ್ ತ್ರಿಶೂಲಿ ನದಿಗೆ ಬಿದ್ದ ಪರಿಣಾಮ 8 ಮಂದಿ ಮೃತಪಟ್ಟಿದ್ದಾರೆ. ಗಾಯಗೊಂಡ 15ಕ್ಕೂ ಅಧಿಕ ಮಂದಿಯನ್ನು ಆಸ್ಪತ್ರೆಗೆ ರವಾನಿಸಲಾಗಿದೆ. ಬಸ್ ಕಠ್ಮಂಡುವಿನಿಂದ ಬೇನಿಗೆ ತೆರಳುತ್ತಿದ್ದಾಗ ಘಟನೆ ನಡೆದಿದೆ.

ಕಠ್ಮಂಡುವಿನಿಂದ ರಮಣೀಯ ನಗರವಾದ ಪೊಖರಾಗೆ ತೆರಳುತ್ತಿದ್ದ ಬಸ್ ಪ್ರಾಂತದ ಧಾಡಿಂಗ್ ಜಿಲ್ಲೆಯ ಚಾಲೀಸ್‌ನಲ್ಲಿ ತ್ರಿಶೂಲಿ ನದಿಗೆ ಬಿದ್ದಾಗ ಈ ಅಪಘಾತ ಸಂಭವಿಸಿದೆ.

ಅಪಘಾತದ ನಂತರ ಬಸ್ ತ್ರಿಶೂಲಿ ನದಿಯಲ್ಲಿ ಭಾಗಶಃ ಮುಳುಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ. ಹಾಗೆಯೇ ಅನೇಕ ಪ್ರಯಾಣಿಕರನ್ನು ಬಸ್​ನಿಂದ ಜೀವಂತವಾಗಿ ಹೊರತೆಗೆಯಲಾಯಿತು. ಮುಂಗಾರಿನಿಂದಾಗಿ ನದಿಯ ನೀರಿನ ಮಟ್ಟ ಹೆಚ್ಚಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!