Mysore
21
overcast clouds

Social Media

ಶುಕ್ರವಾರ, 12 ಜೂನ್ 2026
Light
Dark

ಜಗದೀಶ್‌ ಶೆಟ್ಟರ್‌ ಕಾಂಗ್ರೆಸ್‌ ಬಂದರೆ ಮುಕ್ತವಾಗಿ ಸ್ವಾಗತಿಸುತ್ತೇನೆ: ಸಿದ್ದರಾಮಯ್ಯ

ಬೆಳಗಾವಿ: ಬಿಜೆಪಿ ಮುಖಂಡ ಹಾಗೂ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಕಾಂಗ್ರೆಸ್‍ಗೆ ಬಂದರೆ ಮುಕ್ತವಾಗಿ ಸ್ವಾಗತಿಸುತ್ತೇನೆ ಎಂದು ಪ್ರತಿಪಕ್ಷದ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ.

ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಶೆಟ್ಟರ್ ಕಾಂಗ್ರೆಸ್‍ಗೆ ಬಂದರೆ ಸ್ವಾಗತ ಕೋರುತ್ತೇನೆ. ಆದರೆ ಅವರು ಈವರೆಗೂ ನನ್ನ ಜೊತೆ ಮಾತನಾಡಿಲ್ಲ. ಬಿಜೆಪಿಯಲ್ಲಿ ಅವರಿಗೆ ಟಿಕೆಟ್ ತಪ್ಪಿಸಿರುವುದು ನನಗೆ ಸಂಬಂಸಿದ್ದಲ್ಲ. ಅವರ ಅಂತರಿಕ ವಿದ್ಯಮಾನಗಳನ್ನು ನಾವ್ಯಾಕೆ ನೋಡಲು ಹೋಗೋಣ ಎಂದು ಪ್ರಶ್ನಿಸಿದರು.

ಜಗದೀಶ್ ಶೆಟ್ಟರ್ ಒಳ್ಳೆಯ ಮುಖಂಡ ಎಂಬುದರ ಬಗ್ಗೆ ಎರಡು ಮಾತಿಲ್ಲ. ಅವರು ಕಾಂಗ್ರೆಸ್‍ಗೆ ಬರುವ ಬಗ್ಗೆ ಮೊದಲು ತೀರ್ಮಾನ ಮಾಡಲಿ, ಬರದಿರುವ ಮೊದಲೇ ನಾನು ಹೇಗೆ ಸ್ವಾಗತ ಕೋರಲಿ ಎಂದರು.

ಬಿಜೆಪಿ ಜಗದೀಶ್, ಈಶ್ವರಪ್ಪ ಅವರಂತವರನ್ನು ಬಳಸಿ ಬಿಸಾಡುತ್ತಿದೆ. ಆ ಪಕ್ಷಕ್ಕೆ ಹಿರಿಯರ ಮೇಲೆ ಗೌರವ ಇಲ್ಲ. ಶೆಟ್ಟರ್ ಮಾಜಿ ಮುಖ್ಯಮಂತ್ರಿಯಾಗಿದ್ದವರು, ಹಿರಿಯ ನಾಯಕರು. ಕೆ.ಎಸ್.ಈಶ್ವರಪ್ಪ ಬಿಜೆಪಿ-ಆರೆಸ್‍ಸ್ ಪರವಾಗಿ ಅಷ್ಟೊಂದು ಮಾತನಾಡುತ್ತಿದ್ದರು. ಅವರಿಗೂ ಟಿಕೆಟ್ ತಪ್ಪಿಸುತ್ತಿದ್ದಾರೆ. ಪ್ರಭಾವಿ ನಾಯಕರನ್ನು ಬಳಸಿ ಈಗ ಮೂಲೆ ಗುಂಪು ಮಾಡುತ್ತಿದೆ ಎಂದು ಆರೋಪಿಸಿದ್ದಾರೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!