Mysore
30
broken clouds

Social Media

ಭಾನುವಾರ, 04 ಅಕ್ಟೋಬರ್ 2026
Light
Dark

ನವರಸ ನಾಯಕ ಜಗ್ಗೇಶ್​, ರಚಿತಾ ರಾಮ್​ಗೆ ಗುರುವೈಭವೋತ್ಸವ ಪ್ರಶಸ್ತಿ

ರಾಯಚೂರು: ಮಂತ್ರಾಲಯದ ಶ್ರೀರಾಘವೇಂದ್ರ ಸ್ವಾಮಿಗಳ ‘ ಗುರುವೈಭವೋತ್ಸವ’ ವಿಜಭೃಣೆಯಿಂದ ನಡೆಯುತ್ತಿದ್ದು, ವಿವಿಧ ಕ್ಷೇತ್ರಗಳಲ್ಲಿ ಸಾಧನೆ ಮಾಡಿದ ಸಾಧಕರಿಗೆ ಸನ್ಮಾನಿಸಿ ಗೌರವಿಸಲಾಗುತ್ತಿದೆ. ತುಂಗಾ ತೀರದಲ್ಲಿ ನೆಲೆಸಿರುವ ಶ್ರೀರಾಘವೇಂದ್ರ ಸ್ವಾಮಿಗಳು 402ನೇ ಪಟ್ಟಾಭಿಷೇಕೋತ್ಸವ ಮತ್ತು 428ನೇ ವರ್ಧಂತಿ ಉತ್ಸವ ನಡೆಯುತ್ತಿದ್ದು, ಫೆಬ್ರವರಿ 21ರಿಂದ ಆರಂಭ ಗುರುವೈಭೋತ್ಸವ ಮೂರನೇ ದಿನವಾದ ನಿನ್ನೆ ಅದ್ಧೂರಿಯಾಗಿ ಜರುಗಿತ್ತು.

ರಚಿತಾ ರಾಮ್​ಗೆ ಗುರುವೈಭೋತ್ಸವ ಪ್ರಶಸ್ತಿಬೆಳಿಗ್ಗೆ ರಾಘವೇಂದ್ರ ಸ್ವಾಮಿಗಳ ಮೂಲ ಬೃಂದವನಕ್ಕೆ ಪಂಚಾಮೃತ ಅಭಿಷೇಕ ಸೇರಿದಂತೆ ವಿವಿಧ ಪೂಜೆಗಳು ನೇರವೇರಿಸಿದ ನಂತರದಲ್ಲಿ, ನವರತ್ನ ಖಚಿತ ಕವಚದಿಂದ ವಿವಿಧ ಬಣ್ಣಗಳ ಹೂಗಳಿಂದ ಅಲಂಕಾರಿಸಲಾಗಿತ್ತು. ಇದಾದ ನಂತರದಲ್ಲಿ ಶ್ರೀಮಠದ ಪೀಠಾಧಿಪತಿ ಸುಭುದೇಂಧ್ರ ತೀರ್ಥರು ಮೂಲ ರಾಮದೇವರ ಪೂಜೆ ಸೇರಿದಂತೆ ವಿವಿಧ ಧಾರ್ಮಿಕ ಕಾರ್ಯಕ್ರಮಗಳು, ಪೂಜೆ- ಪುನಸ್ಕಾರ ನೇರವೇರಿಸಿದರು.

ಸಂಜೆ ಮಠದ ಆವರಣದ ಮುಂಭಾಗದ ಯೋಗೇಂದ್ರ ಸಭಾಮಂಟಪದಲ್ಲಿ ಸಂಗೀತ ಕಾರ್ಯಕ್ರಮ ಜರುಗಿತು. ಅಲ್ಲದೇ ಸ್ಯಾಂಡಲ್​ವುಡ್​ನ ಡಿಂಪಲ್ ಕ್ವೀನ್ ಎಂದು ಫೇಮಸ್ ಆಗಿರುವ ರಚಿತ್ ರಾಮ್​ಗೆ ಗುರುವೈಭವೋತ್ಸವ ಪ್ರಶಸ್ತಿಯನ್ನು ನೀಡಿ ಸನ್ಮಾನಿಸಲಾಯಿತು. ಜೊತೆಗೆ ನವರಸನಾಯಕ ನಟ ಹಾಗೂ ರಾಜ್ಯಸಭಾ ಸದಸ್ಯ ಜಗ್ಗೇಶ್, ಆಂಧ್ರ ಶಾಸಕ ಕಟಸನಿ ರಾಮಭೂಪಾಲ್, ಬಳ್ಳಾರಿಯ ಶ್ರೀರಾಘವೇಂದ್ರ ಅಸ್ಟತೋತ್ತರ ಸಂಘದವರಿಗೆ ಸನ್ಮಾನಿಸಿ ಗೌರವಿಸಲಾಯಿತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!