Mysore
24
light rain

Social Media

ಶುಕ್ರವಾರ, 07 ಆಗಸ್ಟ್ 2026
Light
Dark

ಸಿನಿಮಾಲ್‌ : ಲಾಯರ್ ಆಗಿ ಸಂಯುಕ್ತ ಹೊರನಾಡು

ʼಲವ್ ಬರ್ಡ್ಸ್’ ಪಿ.ಸಿ.ಶೇಖರ್ ನಿರ್ದೇಶಿಸುತ್ತಿರುವ ಚಿತ್ರ. ಶ್ರೀ ಬನಶಂಕರಿ ಚಿತ್ರಾಲಯ ಲಾಂಛನದಲ್ಲಿ ಕಡ್ಡಿಪುಡಿ ಚಂದ್ರು ನಿರ್ಮಿಸುತ್ತಿರುವ ಈ ಚಿತ್ರದಲ್ಲಿ ಪ್ರೇಮಪಕ್ಷಿಗಳಾಗಿ ನಟಿಸುತ್ತಿರುವವರು ಡಾರ್ಲಿಂಗ್ ಕೃಷ್ಣ ಮತ್ತು ಮಿಲನ ನಾಗರಾಜ್. ಇದೊಂದು ಪ್ರೇಮಕಥೆ. ಈ ಚಿತ್ರದಲ್ಲಿ ಬರುವ ಮಾಯಾ ಹೆಸರಿನ ವಕೀಲೆಯಾಗಿ ನಟಿ ಸಂಯುಕ್ತ ಹೊರನಾಡು ನಟಿಸುತ್ತಿದ್ದಾರೆ ಎಂದಿರುವ ತಂಡ, ಅವರ ಮೊದಲ ನೋಟವನ್ನೂ ಬಿಡುಗಡೆ ಮಾಡಿದ್ದಾರೆ. ಪ್ರೇಮಕಥೆಯಲ್ಲಿ ವಕೀಲರಿಗೇನು ಕೆಲಸ ಎನ್ನುವ ಪ್ರಶ್ನೆ ಸಹಜ. ಇನ್ನೇನಿರುತ್ತದೆ, ಮದುವೆಯಾಗಿದ್ದರೆ ಇಬ್ಬರ ನಡುವೆ ಭಿನ್ನಾಭಿಪ್ರಾಯ ಬಂದು ವಿಚ್ಛೇದನಕ್ಕೆ ನೆರವು ಪಡೆಯಲು ಅವರಲ್ಲೊಬ್ಬರು ಈಕೆಯನ್ನು ಸಂಪರ್ಕಿಸಬಹುದು, ಇಲ್ಲವೇ ಯಾವುದಾದರೂ ತಮ್ಮದಲ್ಲದ ತಪ್ಪಿಗೆ ಸಿಕ್ಕಿಹಾಕಿಕೊಂಡು ಬಿಡಿಸಲು ನೆರವು ಕೇಳಬಹುದು. ಪ್ರೇಮಿಗಳಿಬ್ಬರ ಗೆಳತಿಯೂ ಆಗಿರುವ ಈ ವಕೀಲೆಯದು ಯಾರಿಗೂ ಅಂಜದ ದಿಟ್ಟ ಹುಡುಗಿಯ, ಕೈಗೆತ್ತಿಕೊಂಡ ಎಲ್ಲ ಕೇಸ್‌ಗಳನ್ನೂ ಗೆಲ್ಲುವ ಛಾತಿಯುಳ್ಳ ಪಾತ್ರ ಎನ್ನುವುದು ನಿರ್ದೇಶಕರ ಅಂಬೋಣ. ?ಲವ್‌ಬರ್ಡ್ಸ್’ಗೆ ಈ ವಕೀಲೆ ಅದೇನು ಕಾನೂನು ನೆರವು ನೀಡುತ್ತಾರೆ ಎನ್ನುವುದನ್ನು, ಇನ್ನೇನು ತೆರೆಗೆ ಬರಲಿರುವ ಚಿತ್ರ ಹೇಳಲಿದೆ!

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!