Mysore
22
broken clouds

Social Media

ಭಾನುವಾರ, 21 ಜೂನ್ 2026
Light
Dark

ಮಂಗಳೂರು ವಿವಿ: NEP ಮೊದಲ ಸೆಮಿಸ್ಟರ್ ಫಲಿತಾಂಶ ಪ್ರಕಟ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಎನ್ಇಪಿ ಮೊದಲ ಸೆಮಿಸ್ಟರ್ ಪರೀಕ್ಷೆಯ ಫಲಿತಾಂಶವನ್ನು ಡಿಸೆಂಬರ್ 24, 2022 ರಂದು ಯುಯುಸಿಎಂಎಸ್ ಪೋರ್ಟಲ್​ನಲ್ಲಿ ಪ್ರಕಟಿಸಿದೆ ಎಂದು ಮಂಗಳೂರು ವಿಶ್ವವಿದ್ಯಾನಿಲಯದ ಪ್ರಕಟನೆ ತಿಳಿಸಿದೆ.

ಸಮಸ್ಯೆಯಿರುವ ಉಳಿಕೆಯಾದ ಫಲಿತಾಂಶವನ್ನು ಡಿಸೆಂಬರ್ 29 ರಂದು ಪ್ರಕಟಿಸಲಾಗುವುದು. ಮೌಲ್ಯಮಾಪನ ಕಾರ್ಯವು ಹಂತಹಂತವಾಗಿ ಪೂರ್ಣಗೊಳ್ಳುತ್ತಿದ್ದು, ಈಗಾಗಲೇ ಸ್ನಾತಕ ಪದವಿಯ 6ನೇ ಸೆಮಿಸ್ಟರ್​ನ ಫಲಿತಾಂಶ ನೀಡಲಾಗಿದ್ದು, ವಿದ್ಯಾರ್ಥಿಗಳಿಗೆ ಸ್ನಾತಕೋತ್ತರ ಪದವಿ ಪ್ರವೇಶಕ್ಕೆ ಅನುಕೂಲ ಮಾಡಿಕೊಡಲಾಗಿದೆ ಎಂದು ತಿಳಿಸಿದೆ.ತರಗತಿಗಳ ನಡುವೆಯೇ ಎರಡನೇ ಹಾಗೂ ನಾಲ್ಕನೇ ಸೆಮಿಸ್ಟರ್​ನ ಮೌಲ್ಯಮಾಪನ ಕಾರ್ಯ ನಡೆಸಲಾಗುತ್ತಿದ್ದು, ಸದರಿ ಸೆಮಿಸ್ಟರ್​ಗಳ ಫಲಿತಾಂಶವನ್ನು ಜನವರಿ 20, 2023 ರ ಒಳಗೆ ಪ್ರಕಟಿಸಲಾಗುವುದು ಎಂದು ಕುಲಸಚಿವರ (ಪರೀಕ್ಷಾಂಗ) ಪ್ರಕಟಣೆ ತಿಳಿಸಿದೆ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!