Mysore
23
overcast clouds

Social Media

ಭಾನುವಾರ, 14 ಜೂನ್ 2026
Light
Dark

ಶೀಘ್ರದಲ್ಲೇ ಭೇರ್ಯ ಗ್ರಾಮವು ಹೋಬಳಿಯಾಗಲಿದೆ: ಸಾರಾ

ಭೇರ್ಯ : ಶೀಘ್ರದಲ್ಲೇ ಭೇರ್ಯ  ಗ್ರಾಮವನ್ನು ಹೋಬಳಿ ಕೇಂದ್ರ ಮಾಡಲಾಗುತ್ತದೆ. ಇದರಿಂದ ಈ ಭಾಗದಲ್ಲಿ ವ್ಯಾಪಾರ, ವಹಿವಾಟು ಹೆಚ್ಚಿ ಭೂಮಿ ಬೆಲೆ ಹೆಚ್ಚಾಗಲಿದೆ ಎಂದು ಶಾಸಕ ಸಾ.ರಾ.ಮಹೇಶ್ ಹೇಳಿದರು.

ಭೇರ್ಯ ಗ್ರಾಮ ಪಂಚಾಯಿತಿ ಆವರಣದಲ್ಲಿ ತಾಲ್ಲೂಕು ಆಡಳಿತ ಹಾಗೂ ತಾಲ್ಲೂಕು ಪಂಚಾಯತಿ ವತಿಯಿಂದ ಹಮ್ಮಿಕೊಂಡಿದ್ದ ಜನಸಂಪರ್ಕ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಭೇರ್ಯ ಗ್ರಾಮದಲ್ಲಿ ಸಾಕಷ್ಟು ಅಭಿವೃದ್ಧಿ ಕಾರ್ಯಗಳು ಆಗಿವೆ. ಕಾಲೇಜು ಮತ್ತು ಪ್ರೌಢಶಾಲಾ ಕಟ್ಟಡ, ಗಾಂಧಿನಗರ ಬಡಾವಣೆಯಲ್ಲಿ 2 ಕೋಟಿ ರೂ. ವೆಚ್ಚದಲ್ಲಿ ಕಾಂಕ್ರೀಟ್ ರಸ್ತೆ ಮತ್ತು ಚರಂಡಿ, ಹೇಮಾವತಿ ನದಿಯಿಂದ ಕುಡಿಯುವ ನೀರು, ಏತನೀರಾವರಿ ಯೋಜನೆ ಮೂಲಕ ಕೆರೆ ತುಂಬಿಸುವುದು, 3.50 ಕೋಟಿ ರೂ. ವೆಚ್ಚದ ಬಸ್ ನಿಲ್ದಾಣ, ವಿದ್ಯುತ್ ವಿತರಣಾ ಉಪ ಕೇಂದ್ರಕ್ಕೆ ೨ ಕೋಟಿ ರೂ. ವೆಚ್ಚದ ಟ್ರಾನ್ಸ್‌ಫಾರ್ಮರ್ ಅಳವಡಿಕೆ ಮುಂತಾದ ಹಲವಾರು ಕೆಲಸಗಳನ್ನು ಮಾಡಲಾಗಿದೆ ಎಂದರು.

ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಎಂ.ಟಿ.ಕುಮಾರ್, ಗ್ರಾ.ಪಂ.ಅಧ್ಯಕ್ಷೆ ಜ್ಯೋತಿ ಮಹೇಶ್ ನಾಯಕ, ಉಪಾಧ್ಯಕ್ಷ ಶಿವಕುಮಾರ್, ಸದಸ್ಯರಾದ ಮೊಹಸಿನ್ ತಾಜ್, ತಾಯಮ್ಮ ರೂಪ ಹರೀಶ್, ಬಿ.ಕೆ.ಕುಮಾರ್, ಬಿ.ಬಿ. ಶಿವಣ್ಣ, ಬಿ.ಎಲ್.ರಾಜಶೇಖರ್, ಜಾ.ದಳ ಮುಖಂಡರಾದ ಅನೀಫ್ ಗೌಡ, ರಾಜಯ್ಯ, ಚಿದಂಬರ, ಚೆಲುವರಾಯ್ಯ, ಜಾನತಾದಳ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಮುಶೀರ್ ಅಹಮದ್ ಖಾನ್, ಸ್ತ್ರೀ ಶಕ್ತಿ ಸ್ವಸಹಾಯ ಮಹಿಳಾ ಸಂಘದ ಮಾಜಿ ಅಧ್ಯಕ್ಷರಾದ ಶಿವಮ್ಮ, ಸಾಲಿಗ್ರಾಮ ರತ್ನಮ್ಮ, ತಹಸಿಲ್ದಾರ್ ಕೆ.ಎನ್.ಮೋಹನ್, ತಾ.ಪಂ. ಇಓ ಹೆಚ್.ಕೆ.ಸತೀಶ್, ಪಿಡಿಒ ಕೆ.ಎ.ಮಂಜುನಾಥ್, ಕೃಷಿ ಸಹಾಯಕ ನಿರ್ದೇಶಕ ಗುರುಪ್ರಸಾದ್, ಜಿ.ಪಂ.ಎಇಇ ವಿನುತ್, ಗಾಮೀಣ ಕುಡಿಯುವ ನೀರು ಎಇಇ ರಾಜುರಾಂ, ಬಿಇಒ ಗಾಯತ್ರಿ, ಪಶುವೈದ್ಯ ಸಹಾಯಕ ನಿರ್ದೇಶಕ ಡಾ.ಮಂಜುನಾಥ್, ಪಶುವೈದ್ಯ ಡಾ.ಹರೀಶ್, ಆರೋಗ್ಯಾಧಿಕಾರಿ ಡಾ. ಮಹೇಂದ್ರಪ್ಪ, ಸಬ್ ಇನ್ಸ್ ಪೆಕ್ಟರ್ ಕುಮುದಾ, ಸಿಡಿಪಿಒ ಪೂರ್ಣಿಮಾ, ರಾಜಸ್ವ ನಿರೀಕ್ಷಕ ಹೇಮಂತ್, ಗ್ರಾಮ ಲೆಕ್ಕಿಗ ರವೀಂದ್ರ, ಇತರರು ಹಾಜರಿದ್ದರು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!