Mysore
21
overcast clouds

Social Media

ಭಾನುವಾರ, 16 ಆಗಸ್ಟ್ 2026
Light
Dark

ಆನೆಗೆ ಕಬ್ಬು ಕೊಟ್ಟು ದಂಡತೆತ್ತ!

ಲಾರಿ ಚಾಲಕನಿಗೆ 75 ಸಾವಿರರೂ. ದಂಡ

ಚಾಮರಾಜನಗರ: ಕಾಡಾನೆಗೆ ಕಬ್ಬು ನೀಡಿದ ಲಾರಿಯ ಚಾಲಕನಿಗೆ ಅರಣ್ಯ ಇಲಾಖೆ 75 ಸಾವಿರ ರೂ. ದಂಡ ಹಾಕಿದೆ!ನಂಜನಗೂಡು ತಾಲ್ಲೂಕಿನ ಸಿದ್ದರಾಜು ದಂಡತೆತ್ತ ಚಾಲಕ ಎಂದು ಗುರುತಿಸಲಾಗಿದೆ.

ಚಾಮರಾಜನಗರ ಗಡಿಗೆ ಸೇರಿದ ತಮಿಳುನಾಡಿನ ಸತ್ಯಮಂಗಲ ಹುಲಿ ಸಂರಕ್ಷಿತ ಪ್ರದೇಶದ ಹಾಸನೂರು ಬಳಿ ಡಿ. 3ರಂದು ಈ ಪ್ರಕರಣ ನಡೆದಿದೆ.

ಕರೆಪಳ್ಳಂ ಚೆಕ್‌ಪೋಸ್ಟ್‌ ಸನಿಹದ  ರಾಷ್ಟ್ರೀಯ ಹೆದ್ದಾರಿ ಬಳಿ ನಿಂತಿದ್ದ ಕಾಡಾನೆಗೆ ನೀಡಲು ಲಾರಿಯಿಂದ ಚಾಲಕ ಕಬ್ಬು ತೆಗೆದುಕೊಂಡು ಹೋಗಿದ್ದು

ಗಸ್ತಿನ ಮೇಲಿದ್ದಅರಣ್ಯ ಇಲಾಖೆ ಸಿಬ್ಬಂದಿಗೆ ಕಂಡು ಬಂದಿತು. ಈಸಂದರ್ಭದಲ್ಲಿ ವಿಚಾರಣೆ ಮಾಡಿದಾಗ ಕಬ್ಬನ್ನು ಆನೆಗೆ ನೀಡಿದ್ದಾಗಿ ಚಾಲಕ ಒಪ್ಪಿಕೊಂಡರು ಎನ್ನಲಾಗಿದೆ.

ಈ ಹಿನ್ನೆಲೆಯಲ್ಲಿ ಹಾಸಸೂರು ವನಕೊಟ್ಟಂ ಅರಣ್ಯ ಅಧಿಕಾರಿ ಆದೇಶದಂತೆ ಸಿದ್ದರಾಜು ಅವರಿಂದ 75 ಸಾವಿರ ರೂ. ದಂಡದ ಶುಲ್ಕ ಕಟ್ಟಿಸಿಕೊಂಡು ಪ್ರಕರಣವನ್ನು ಮುಕ್ತಾಯಗೊಳಿಸಲಾಗಿದೆ ಎಂದು ಅಲ್ಲಿನ ಅರಣ್ಯ ಇಲಾಖೆಯ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಲಾಗಿದೆ.

ರಕ್ಷಿತಾರಾಣ್ಯಗಳಲ್ಲಿ ವಾಹನಗಳನ್ನು ನಿಲ್ಲಿಸುವುದು ಹಾಗೂ ವನ್ಯಪ್ರಾಣಿಗಳಿಗೆ ಆಹಾರ ನೀಡುವುದಕ್ಕೆ ನಿರ್ಬಂಧವಿದೆ.  ಜಿಲ್ಲೆಯ ಬಿಆರ್ ಟಿಯಲ್ಲಿಯೂ ಪ್ರಾಣಿಗಳಿಗೆ ಆಹಾರ ನೀಡಿದ್ದಕ್ಕೆ ತ್ಯಾಜ್ಯ ಬಿಸಾಡಿದ್ದಕ್ಕೆ ಮತ್ತು ರಕ್ಷಿತಾರಣ್ಯದಲ್ಲಿ ವಾಹನ ನಿಲ್ಲಿಸಿದ್ದಕ್ಕೆ 2ತಿಂಗಳ ಹಿಂದೆಯಷ್ಟೇ ಪ್ರವಾಸಿಗರಿಗೆ ಅಲ್ಪ ಪ್ರಮಾಣದಲ್ಲಿ ದಂಡ ಹಾಕಿ ಎಚ್ಚರಿಕೆ ನೀಡಲಾಗಿತ್ತು.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!