Mysore
22
overcast clouds

Social Media

ಭಾನುವಾರ, 14 ಜೂನ್ 2026
Light
Dark

ಸಿದ್ದರಾಮಯ್ಯ ಹುಂಡಿ ಶಾಲೆಗೆ ಶಾಸಕ ಯತಿಂದ್ರ ಭೇಟಿ: ಶಾಲಾ ಮಕ್ಕಳ ಜೊತೆಯಲ್ಲಿ ಬಾಲ್ಯದ ನೆನಪು

ಸುತ್ತೂರು: ವರುಣ ಕ್ಷೇತ್ರಕ್ಕೆ ಸೇರಿರುವ ಸಿದ್ದರಾಮಯ್ಯ ಹುಂಡಿ ಶಾಲೆಗೆ ಶಾಸಕ ಡಾಕ್ಟರ್ ಯತಿಂದ್ರ ಸಿದ್ದರಾಮಯ್ಯನವರು ಭೇಟಿ ನೀಡಿ ಕೆಲಹೊತ್ತು ಮಕ್ಕಳ ಜೊತೆಯಲ್ಲಿ ಸಂದರ್ಶನ ನಡೆಸಿದರು.

ನಂತರ ಅವರು ಮಾತನಾಡಿ, ನಾನು ಶಾಲೆಗೆ ಸೇರಿದ ಶಾಲೆ ಇದು ನಾನು ನಿಮ್ಮ ಹಾಗೆ ಇಲ್ಲೇ ಅಕ್ಷರ ಅಭ್ಯಾಸ ಕಲಿತಿದ್ದೆ ಅದೇ ರೀತಿ ಈಗ ನಿಮ್ಮ ಜೊತೆ ನಾನು ನಮ್ಮ ಶಾಲೆಗೆ ಬಂದಿದ್ದೇನೆ. ನಿಮ್ಮ ಜೊತೆ ಕೆಲ ಹೊತ್ತು ನಾನು ಕಲಿತ ಅಭ್ಯಾಸವನ್ನು ಮೆಲಕು ಹಾಕಿದ್ದೇನೆ. ನಿಮ್ಮ ವಯಸ್ಸಿನಲ್ಲಿ ಆಟವಾಡುವ ಮನಸ್ಸಿದೆ. ನೀವೆಲ್ಲರೂ ಉತ್ತಮ ಶಿಕ್ಷಣ ಪಡೆದು ಇಡೀ ದೇಶಕ್ಕೆ ಉತ್ತಮ ವ್ಯಕ್ತಿಯಾಗಿ ಬೆಳೆಯಬೇಕೆಂದು ವಿದ್ಯಾರ್ಥಿಗಳಲ್ಲಿ ಮನವಿ ಮಾಡಿಕೊಂಡರು.

ಈ ಸಂದರ್ಭದಲ್ಲಿ ಎಪಿಎಂಸಿ ಸದಸ್ಯರಾದ ಬಸವರಾಜಣ್ಣ, ಜಿಲ್ಲಾಪಂಚಾಯಿತಿ ಮಾಜಿ ಸದಸ್ಯ ಕೆಂಪಿರಯ್ಯ. ತಾಲ್ಲೂಕು ಪಂಚಾಯತಿ ಮಾಜಿ ಅಧ್ಯಕ್ಷ ಪುಟ್ಟಣ್ಣ, ಎಡಕೋಳ ಗ್ರಾಮ ಪಂಚಾಯತಿ ಅಧ್ಯಕ್ಷ ಚಂದ್ರಶೇಖರ್, ವರುಣ ಬ್ಲಾಕ್ ಕಾಂಗ್ರೆಸ್ ಉಪಾಧ್ಯಕ್ಷ ರಾಯ ಉಂಡಿ ರವಿ ಮಾದೇವ ಶಾಲಾ ಶಿಕ್ಷಕರು, ಯಾಂದಳ್ಳಿ ಶಂಕರ್, ಚೋರ್ನಳ್ಳಿ ರಾಜು, ದೇವಯ್ಯ ಗ್ರಾಮ ಪಂಚಾಯತಿ ಸದಸ್ಯರು ಗ್ರಾಮದ ಮುಖಂಡರು ಹಾಜರಿದ್ದರು

 

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!