ಮೊಸರನ್ನ ಸೇವನೆ ಮಾಡಿ
ಮೊಸರನ್ನದಲ್ಲಿ ಫೈಬರ್ ಅಂಶ ಹೆಚ್ಚಾಗಿ ಇರುತ್ತದೆ. ಇದರ ನಿಯಮಿತ ಸೇವನೆಯಿಂದ ಅಜೀರ್ಣ ಸಮಸ್ಯೆ ಕಡಿಮೆಯಾಗುತ್ತದೆ. ಅಸಿಡಿಟಿ ಇರುವವರು ಮೊಸರನ್ನ ಸೇವಿಸುವುದು ಉತ್ತಮ. ಅಲ್ಲದೇ ಅತಿಸಾರ ಆದ ಸಂದರ್ಭದಲ್ಲಿ ಮೊಸರನ್ನ ಸೇವಿಸುವುದರಿಂದ ದೇಹದಲ್ಲಿನ ನೀರಿನ ಅಂಶ ಕಾಪಾಡಿಕೊಳ್ಳಲು ಸಾಧ್ಯವಾಗುತ್ತದೆ. ಅಲ್ಲದೇ ಬೇಧಿ ನಿಲ್ಲಲೂ ಇದು ಸಹಕಾರಿ.
——-
ಮೊಳಕೆ ಬಂದ ಮೆಂತ್ಯ ಕಾಳು
ತೂಕ ಇಳಿಕೆ, ಅಜೀರ್ಣ ಸಮಸ್ಯೆ, ಪೋಷಕಾಂಶಗಳ ಕೊರತೆ ಎದುರಿಸುತ್ತಿದ್ದರೆ ಮೊಳಕೆ ಬಂದ ಮೆಂತ್ಯ ಕಾಳುಗಳನ್ನು ನಿಯಮಿತವಾಗಿ ಸೇವಿಸುವುದು ಉತ್ತಮ. ಅದರಲ್ಲಿಯೂ ಖಾಲಿ ಹೊಟ್ಟೆಯಲ್ಲಿ ಸೇವಿಸುವುದು ಪರಿಣಾಮಕಾರಿ. ಇವುಗಳು ಹೆಚ್ಚಿನ ಪೋಷಕಾಂಶಗಳನ್ನು ಒಳಗೊಂಡಿದ್ದು, ದೇಹದಲ್ಲಿ ಇರುವ ಬೇಡದ ಕೊಬ್ಬನ್ನು ಕರಗಿಸುವ ಕೆಲಸ ಮಾಡುತ್ತದೆ.




