Mysore
22
overcast clouds

Social Media

ಭಾನುವಾರ, 14 ಜೂನ್ 2026
Light
Dark

ನಿಟ್ರೆ ಗ್ರಾಮದಲ್ಲಿ ʼಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆʼ ಗ್ರಾಮ ವಾಸ್ತವ್ಯ ಕಾರ್ಯಕ್ರಮ ಯಶಸ್ವಿ

ಚಾಮರಾಜನಗರ : ತಾಲ್ಲೂಕಿನ ನಿಟ್ರೆ ಗ್ರಾಮದಲ್ಲಿ ಜಿಲ್ಲಾಧಿಕಾರಿಗಳ ನಡೆ ಹಳ್ಳಿಯ ಕಡೆ ಗ್ರಾಮ ವಾಸ್ತವ್ಯ ಕಾರ್ಯಕ್ರಮವು ಯಶಸ್ವಿಯಾಗಿ ನಡೆಯಿತು.
ಕಾರ್ಯಕ್ರಮದ ಅಂಗವಾಗಿ ಆಯೋಜಿಸಲಾಗಿದ್ದ ರಕ್ತದಾನ ಶಿಬಿರದಲ್ಲಿ ನಿಟ್ರೆ ಗ್ರಾಪಂ ಅಧ್ಯಕ್ಷ ಮರಿಸ್ವಾಮಿ ಖುದ್ದಾಗಿ ರಕ್ತ ದಾನ ಮಾಡಿದರು. ಜಿಲ್ಲಾಧಿಕಾರಿಗಳಾದ ಚಾರುಲತಾ ಸೋಮಲ್  ಹಾಗೂ ಶಾಸಕ ಸಿಎಂ ನಿರಂಜನ್ ಕುಮಾರ್‌ ಅವರ ನೇತೃತ್ವದಲ್ಲಿ ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಲಾಯಿತು.
ಕಾರ್ಯಕ್ರಮದಲ್ಲಿ ತಹಶೀಲ್ದಾರ್ ಸಿ.ಜಿ.ರವಿಶಂಕರ್, ಡಿ. ಎಚ್‌. ಒ ವಿಶ್ವೇಶ್ವರಯ್ಯ, ಬಗರ್ ಹುಕುಂ ತಾ ಕಮಿಟಿ ಸದಸ್ಯ ನಾಗರಾಜಪ್ಪ, ಜಿ.ಪಂ.ಸದಸ್ಯ ನಾಗರಾಜು. ಗ್ರಾಪಂ ಅಧ್ಯಕ್ಷ ಮರಿಸ್ವಾಮಿ, ಉಪಾಧ್ಯಕ್ಷ ಲಕ್ಷ್ಮಮ್ಮ ದುಂಡ್ ನಾಯಕ, ದಿ.ಡಿ. ಎಲ್. ಆರ್.ವಿಧ್ಯಯಿನಿ, ಚಾ.ನಗರ ಕೈಗಾರಿಕೆ ರಾಜೇಂದ್ರಪ್ರಸಾದ್, ತಾಪಂ ಇ ಓ ಶ್ರೀಕಂಠರಾಜೇ ಅರಸ್ , ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ನಂಜುಂಡ ರಾಜೇ ಅರಸ್ ಡಿ. ಎಚ್. ಒ.ದೇವಿಕಾ, ಮುಂತಾದವರು ಹಾಜರಿದ್ದರು

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ

error: Content is protected !!