Mysore
25
overcast clouds
Light
Dark

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ

ಮೈಸೂರು : ರಾಜ್ಯದಲ್ಲಿ ಮುಂದಿನ ಹದಿನೈದು ದಿನಗಳ ಕಾಲ ಮಳೆಯಾಗಲಿದೆ ಎಂದು ಹವಮಾನ ಇಲಾಖೆ ಮುನ್ಸೂಚನೆ ನೀಡಿದೆ. ಈ ವರ್ಷ ಸರಿಯಾದ ಪ್ರಮಾಣದಲ್ಲಿ ಮಳೆಯಾಗದೇ ರಾಜ್ಯದಲ್ಲಿನ ಜಲಾಶಯಗಳಲ್ಲಿ ನೀರಿನ ಮಟ್ಟ ಕಡಿಮೆಯಾಗಿದೆ. ಜಲಾಶಯಗಳಲ್ಲಿ ಪ್ರತಿ ದಿನವೂ ಕೂಡ ನೀರಿನ ಮಟ್ಟ ಏರಿಳಿತವಾಗುತ್ತಿರುತ್ತದೆ. ಇಂದು ರಾಜ್ಯದ ಪ್ರಮುಖ ಜಲಾಶಯ ಎಂದೆನಿಸಿರುವ ಕೆ ಆರ್ ಎಸ್ ( ಕೃಷ್ಣ ರಾಜ ಸಾಗರ) ಹಾಗೂ ಕಬಿನಿ ಜಲಾಶಯದಲ್ಲಿ ನೀರಿನ ಪ್ರಮಾಣ ಕಡಿಮೆಯಾಗಿದೆ.

ರಾಜ್ಯದ ಪ್ರಮುಖ ಜಲಾಶಯಗಳಲ್ಲಿ ಇಂದಿನ ನೀರಿನ ಮಟ್ಟ ಇಂತಿದೆ.

ಕೆ ಆರ್ ಎಸ್

ಗರಿಷ್ಠ ನೀರಿನ ಮಟ್ಟ  –  124.80 ಅಡಿ

ಇಂದಿನ ನೀರಿನ ಮಟ್ಟ  –  100.80 ಅಡಿ

ಒಳ ಹರಿವಿನ ಪ್ರಮಾಣ  –  1,686 ಕ್ಯೂ

ಹೊರ ಹರಿವಿನ ಪ್ರಮಾಣ  –  4,156 ಕ್ಯೂ

ಕಬಿನಿ

ಗರಿಷ್ಠ ನೀರಿನ ಮಟ್ಟ  –  2,284 ಅಡಿ

ಇಂದಿನ ನೀರಿನ ಮಟ್ಟ  –  2,275.34 ಅಡಿ 

ಒಳ ಹರಿವಿನ ಪ್ರಮಾಣ  –  166 ಕ್ಯೂ

ಹೊರ ಹರಿವಿನ ಪ್ರಮಾಣ  – 800 ಕ್ಯೂ

ಹಾರಂಗಿ

ಗರಿಷ್ಠ ನೀರಿನ ಮಟ್ಟ  –  2859.00 ಅಡಿ

ಇಂದಿನ ನೀರಿನ ಮಟ್ಟ  –  2,847.57 ಅಡಿ 

ಒಳ ಹರಿವಿನ ಪ್ರಮಾಣ  –  130 ಕ್ಯೂ

ಹೊರ ಹರಿವಿನ ಪ್ರಮಾಣ  –  1,800 ಕ್ಯೂ

ಹೇಮಾವತಿ

ಗರಿಷ್ಠ ನೀರಿನ ಮಟ್ಟ  –  2922.00 ಅಡಿ

ಇಂದಿನ ನೀರಿನ ಮಟ್ಟ  –  2894.00 ಅಡಿ

ಒಳ ಹರಿವಿನ ಪ್ರಮಾಣ  –  403 ಕ್ಯೂ

ಹೊರ ಹರಿವಿನ ಪ್ರಮಾಣ  –  1,340 ಕ್ಯೂ

ರಾಜ್ಯದ ದಕ್ಷಿಣ ಒಳನಾಡು ಹಾಗೂ ಕರಾವಳಿ ತೀರದ ಜಿಲ್ಲೆಗಳಾಗಿರುವ ಉತ್ತರ ಕನ್ನಡ,ದಕ್ಷಿಣ ಕನ್ನಡ, ಹಾಗೂ ಉಡುಪಿ,ಮಲೆನಾಡು ಭಾಗದಲ್ಲಿ ಸಾಧಾರಣ ಮಾಳೆಯಾಗಲಿದೆ. ಉತ್ತರ ಒಳನಾಡು ಜಿಲ್ಲೆಗಳಲ್ಲಿ ಒಣ ಹವೆ ಮುಂದುವರಿಯುವ ಸಾಧ್ಯತೆ ಇದೆ ಎಂದು ಹವಮಾನ ಇಲಾಖೆ ತಿಳಿಸಿದೆ.

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ