ಮಡಿಕೇರಿ: ಫ್ರೆಂಡ್ಸ್ ಹುಲಿತಾಳ ಇವರ ವತಿಯಿಂದ ಪ್ರಥಮ ವರ್ಷದ ಹುಳಿತಾಳ ಕ್ರಿಕೆಟ್ ಪ್ರೀಮಿಯರ್ ಲೀಗ್ ಪಂದ್ಯವು ಮಾರ್ಚ್ 21,22,23ರಂದು ಮಡಿಕೇರಿಯ ಮ್ಯಾನ್ಸ್ ಕಾಂಪೌಂಡ್ ಮೈದಾನದಲ್ಲಿ ನಡೆಯಲಿದೆ.
ಒಟ್ಟು ಹತ್ತು ಮಾಲೀಕತ್ವದ ಹತ್ತು ತಂಡಗಳು ಪಾಲ್ಗೊಳ್ಳಲಿದ್ದು ಟೀಮ್ ಶೀಲ್ಡ್ ಮೇಕೇರಿ, ಟೀಮ್ ವಿರಾಟ್ಸ್ ಮಡಿಕೇರಿ, ಟೀಮ್ ಲೂಸರ್ಸ್ ಕಡಗದಾಳು, ಟ್ಯಾಂಗೋ ಬಾಯ್ಸ್ ಕಾಂತೂರು, ಟೀಮ್ ರೈಡರ್ಸ್ ಮರಗೋಡು, ಪ್ರವೀತ್ ಕ್ರಿಕೆಟರ್ಸ್ ಮರಗೋಡು, ಟೀಮ್ ಎಂ ಸ್ ಡಿ ಅರೆಕಾಡು, ಟೀಮ್ ಕಾರ್ಣಿಕ ಕೊಡಗು, ಕಿಂಗ್ಸ್ ಎಲೆವೆನ್ ಕಡಗದಾಳು, ಶ್ರೀ ಕುಶಾನಿ ಕ್ರಿಕೆಟರ್ಸ್ ಹುಲಿತಾಳ, ತಂಡಗಳ ನಡುವೆ ಲೀಗ್ ಪಂದ್ಯಗಳು ನಡೆಯಲಿವೆ.
ಪಂದ್ಯ ಕೂಟದ ವಿನ್ನರ್ಸ್ ತಂಡಕ್ಕೆ 1ಲಕ್ಷ ನಗದು ಹಾಗೂ ಆಕರ್ಷಕ ಟ್ರೊಫಿ, ರನ್ನರ್ಸ್ ತಂಡಕ್ಕೆ 50,000 ನಗದು ಹಾಗೂ ಆಕರ್ಷಕ ಟ್ರೊಫಿ ಹಾಗೆಯೇ ತೃತೀಯ ಬಹುಮಾನವಾಗಿ 10,000 ನಗದು ಹಾಗೂ ಆಕರ್ಷಕ ಟ್ರೊಫಿ, ಚತುರ್ಥ ಬಹುಮಾನವಾಗಿ 5000 ನಗದು ಹಾಗೂ ಆಕರ್ಷಕ ಟ್ರೊಫಿ ಹಾಗೂ ಕ್ರೀಡಾ ಪಟುಗಳಿಗೆ ವೈಯಕ್ತಿಕ ಬಹುಮಾನಗಳು ಕೂಡ ಸಿಗಲಿವೆ.
ಮರಗೋಡು, ಅರೆಕಾಡು, ಹೊಸ್ಕೇರಿ , ಕಡಗದಾಳು, ಕತ್ತಲೆಕಾಡು, ಹಾಕತ್ತೂರು, ಕಾಂಡನಕೊಲ್ಲಿ, ನೀರುಕೊಲ್ಲಿ, ಕಾಂತೂರು ಮೂರ್ನಾಡು ಮೆಕೇರಿ ವ್ಯಾಪ್ತಿಗೆ ಒಳಪಡುವ ಆಟಗಾರರಿಗೆ ಅವಕಾಶ ಇದ್ದು 3 ದಿನಗಳ ಕಾಲ ಪಂದ್ಯ ನಡೆಯಲಿದೆ.