Mysore
26
light rain

Social Media

ಸೋಮವಾರ, 23 ಡಿಸೆಂಬರ್ 2024
Light
Dark

ಜಿ.ಎಂ ಜೈವಿಕ ಬೀಜ ಬೆಳೆಯನ್ನು ಕೇಂದ್ರ ತಿರಸ್ಕರಿಸಬೇಕು: ಹಾಡ್ಯ ರಮೇಶ್‌ ಒತ್ತಾಯ

ಮಂಡ್ಯ: ಸರ್ವೋಚ್ಛ ನ್ಯಾಯಾಲಯದ ನ್ಯಾಯಾಧೀಶರು ಜಿ.ಎಂ ಜೈವಿಕ ಬೀಜಗಳ ಸಂಬಂಧ ಸಮಾಲೋಚನೆ ಸಭೆ ನಡೆಸಿ ಬೆಳೆ ಬೆಳೆಯುವ ಸಂಬಂಧ ತೀರ್ಮಾನಕೈಗೊಳ್ಳುವಂತೆ ಕೇಂದ್ರ ಸರ್ಕಾರಕ್ಕೆ ಆದೇಶ ನೀಡಿದ್ದು, ಇದನ್ನು ಕೇಂದ್ರ ಸರ್ಕಾರ ತಿರಸ್ಕರಿಸಬೇಕು ಎಂದು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತದ ಅಧ್ಯಕ್ಷ ಹಾಡ್ಯ ರಮೇಶ್ ಒತ್ತಾಯಿಸಿದರು.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಜಿ.ಎಂ ಬೀಜಗಳು ಜೈವಿಕ ತಂತ್ರಜ್ಞಾನದಿಂದ ಬೀಜಗಳನ್ನು ಮಾಡುವ ವಿಧಾನ ಅನೈಸರ್ಗಿಕವಾಗಿದ್ದು, ಇದರಿಂದ ಬೆಳೆ ಬೆಳೆಯುವ ಭೂಮಿಯ ಮೇಲು ದುಷ್ಪರಿಣಾಮ ಬೀರಲಿದ್ದು, ಇದಕ್ಕೆ ಕೇಂದ್ರ ಸರ್ಕಾರ ಒಪ್ಪಿಗೆ ನೀಡಬಾರದು ಎಂದು ಆಗ್ರಹಿಸಿದರು.

ಅಮೆರಿಕ ದೇಶದಲ್ಲಿಯೂ ಈ ರೀತಿಯ ಬೀಜಗಳಿಂದ ಬೆಳೆ ಬೆಳೆಯಲಾಗುತ್ತಿದ್ದು, ಇದನ್ನು ಪ್ರಾಣಿಗಳಿಗೆ ನೀಡಲು ಮತ್ತು ಉಪ ಉತ್ಪನ್ನಗಳ ತಯಾರಿಕೆಗೆ ಬಳಸಲಾಗುತ್ತಿದ್ದು, ಸೇವನೆಗೆ ಯೋಗ್ಯವಲ್ಲದ ಸದರಿ ಬೀಜಗಳು ಆರೋಗ್ಯದ ಮೇಲೆ ದುಷ್ಪರಿಣಾ ಬೀರಲಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಹಿಂದೆಯೂ ಬಿಟಿ ಹತ್ತಿ ತಳಿಯನ್ನು ಪರಿಚಯ ಮಾಡಿದ್ದು, ಸದರಿ ತಳಿಯಿಂದ ಸಾಕಷ್ಟು ಅನಾಹುತಗಳು, ರೈತರು ನಷ್ಟ ಅನುಭವಿಸುವಂತಹ ಸಂಗತಿಗಳು ನಡೆದು, ನಿರಂತರ ಹೋರಾಟದ ಫಲವಾಗಿ ಬಿಟಿ ಹತ್ತಿಯನ್ನು ಹಾಗೂ ಬಿಟಿ ಬದನೆಯನ್ನು ತಿರಸ್ಕರಿಸಿ ಹಿಮ್ಮೆಟ್ಟಿಸಲಾಯಿತು ಎಂದರು.

ಈಗ ಜಿಎಂ ಬೀಜಗಳನ್ನು ತಿರಸ್ಕರಿಸುವಂತೆ ಕಿಸಾನ್ ಸಂಘ ಪ್ರಸ್ತುತತೆಯಿರುವ ೬೦೦ ಜಿಲ್ಲೆಗಳ ಎಲ್ಲಾ ಸಂಸದರಿಗೆ ಮನವಿ ಸಲ್ಲಿಸಲಾಗುತ್ತಿದೆ. ಈ ಮೂಲಕ ಕೇಂದ್ರ ಸರ್ಕಾರ ಅಧಿವೇಶನದಲ್ಲಿ ಇದನ್ನು ತಿರಸ್ಕರಿಸುವಂತೆ ಗಮನ ಸೆಳೆಯಲಾಗಿದೆ. ರಾಜ್ಯಸಭೆ, ಲೋಕಸಭೆಯ ಸಭಾಪತಿಗಳಿಯೂ ಪತ್ರ ಬರೆಯಲಾಗಿದ್ದು, ಫ್ಯಾಕ್ಸ್ ಮೂಲಕವೂ ಅವರ ಗಮನೆ ಸೆಳಯುವ ಪ್ರಯತ್ನ ಮಾಡಲಾಗುತ್ತಿದೆ ಎಂದು ಹೇಳಿದರು.

ಗೋಷ್ಠಿಯಲ್ಲಿ ಪಣಕನಹಳ್ಳಿ ವೆಂಕಟೇಶ್, ಬೂದನೂರು ಅಪ್ಪಾಜಿ, ಪಾಪೇಗೌಡ, ಇಂದ್ರಮ್ಮ, ದುರ್ಗೇಶ್ ಇದ್ದರು.

Tags: