Mysore
28
overcast clouds

Social Media

ಶನಿವಾರ, 25 ಏಪ್ರಿಲ 2026
Light
Dark

ಬಣ್ಣ ಬದಲಿಸಿದ ವಾಟ್ಸಾಆಪ್‌ !

ಜಗತ್ತಿನಲ್ಲೆ ಅತ್ಯಂತ ಹೆಚ್ಚು ಬಳಕೆಯಲ್ಲಿರುವ ಸಾಮಾಜಿಕ ಜಾಲತಾಣಗಳಲ್ಲಿ ಒಂದಾದ ವಾಟ್ಸ್‌ ಆಪ್‌ ತನ್ನ ಬಣ್ಣ ಬಲಿಸುವ ಮೂಲಕ ಮತ್ತೊಮ್ಮೆ ಸುದ್ದಿಯಲ್ಲಿದೆ.

ಜಗತ್ತಿನಾದ್ಯಂತ ಮೂರು ಮಿಲಿಯನ್‌ ಬಳಕೆದಾರರನ್ನು ಹೊಂದಿರುವ ವಾಟ್ಸ್‌ ಆಪ್‌ ಹೊಸದೊಂದು ಬದಲಾವಣೆಯನ್ನು ಮಾಡಿಕೊಂಡಿದೆ. ವಾಟ್ಸ್‌ ಆಪ್‌ನ ಭಾಗಗಳು ತನ್ನ ಲೋಗೋ ಕಲರ್‌ನಂತೆಯೇ ಹಸಿರು ಬಣ್ಣಕ್ಕೆ ಬದಲಾವಣೆ ಮಾಡಿಕೊಂಡಿದೆ.

ಈ ಸೂಕ್ಷ್ಮ ಬದಲಾವಣೆಯನ್ನು ಗಮನಿಸಿರುವ ಕೆಲವು ಬಳಕೆದಾರರು ಮಾತ್ರ ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಚರ್ಚೆ ಮಾಡುತ್ತಿದ್ದಾರೆ. ಬಣ್ಣ ಬದಲಾವಣೆಯಿಂದ ಕೆಲವು ಬಳಕೆದಾರರಿಗೆ ಬೇಸರವಾಗಿದ್ದು ಇನ್ನುಳಿದ ಕೆಲವು ಬಳಕೆದಾರರು ಇಷ್ಟಪಟ್ಟಿದ್ದಾರೆ.

ವಾಟ್ಸ್‌ ಆಪ್‌ನ ಮೆಟಾ ಮಾಲೀಕತ್ವ ಈ ಬಗ್ಗೆ ಪ್ರತಿಕ್ರಿಯೆ ನೀಡಿದ್ದು, ವಾಟ್ಸ್‌ ಆಪ್‌ನ ಈ ಬದಲಾವಣೆ ಆಪ್‌ ಬಳಕೆಗೆ ಇನ್ನಷ್ಟು ಸುಲಭವಾಗುತ್ತದೆ. ಹಾಗೂ ಅಧುನಿಕ ಮತ್ತು ಹೊಸ ಅನುಭವ ನೀಡುತ್ತದೆ ಎಂದು ತಿಳಿಸಿದೆ. ಐಒಎಸ್‌ ಮತ್ತು ಆನ್‌ಡ್ರೋಯ್ಡ್‌ ಬಳಕೆದಾರರಿಬ್ಬರೂ ಕಾಣಬಹುದಾಗಿದೆ.

ಒಟ್ಟಾರೆ ವಾಟ್ಸ್‌ ಆಪ್‌ನ ಸಂಸ್ಥೆಯ ಈ ಸೂಕ್ಷ್ಮ ಬದಲಾವಣೆ ಪ್ರಪಂಚದಾದ್ಯಂತ ಚರ್ಚೆಗೆ ಗ್ರಾಸವಾಗಿದೆ.

Tags:
error: Content is protected !!