Mysore
18
broken clouds

Social Media

ಮಂಗಳವಾರ, 11 ಫೆಬ್ರವರಿ 2025
Light
Dark

ಒಪ್ಪೊ ರೆನೋ ೧೩ ಎಐ ಕ್ಯಾಮೆರಾ ಫೋನ್

ಬೈಲ್ ತಯಾರಿಕಾ ಸಂಸ್ಥೆಯಾದ ಒಪ್ಪೊ ತನ್ನ ಬಹುನಿರೀಕ್ಷಿತ ರೆನೋ ೧೩ ಸರಣಿಯ ೫ಜಿ ಸ್ಮಾರ್ಟ್ಫೋನನ್ನು ದೇಶದಲ್ಲಿ ಬಿಡುಗಡೆಗೊಳಿಸಿದ್ದು, ಎಐ ಸನ್ನದ್ಧ ಸ್ಮಾರ್ಟ್ ಫೋನ್Media Tek Dimensity  ಚಿಪ್ಸೆಟ್ ಇದರ ಪ್ರಮುಖ ಆಕರ್ಷಣೆಯಾಗಿದೆ. ಸದ್ಯ ಫೋನ್ ಎರಡು ವೆರಿಯಂಟ್ಗಳಲ್ಲಿ ಲಭ್ಯವಿದೆ. ಎಐ ಸನ್ನದ್ಧ ಸ್ಮಾರ್ಟ್ಫೋನ್ನಲ್ಲಿ ಎಐ ಕ್ಯಾಮೆರಾದ ಮೂಲಕ ಲೈವ್ ಫೋಟೋ, ಎಐ ಕ್ಲಾರಿಟಿ ಮತ್ತು ನೀರಿನಾಳದ ಛಾಯಾಗ್ರಹಣವನ್ನು ಮಾಡಬಹುದಾಗಿದೆ. ಅಲ್ಲದೆ ೫೬೦೦ಎಂಎಎಚ್ ಫಾಸ್ಟ್ ಚಾರ್ಜಿಂಗ್ ಹೊಂದಿದೆ. .೫೯ ಇಂಚಿನ 20Hz Smart
Adaptive 1.5k OLED pro XDR   ಡಿಸ್ಪ್ಲೇ ಇನ್ಪಿನೆಟ್ ವ್ಯೂ ಡಿಸ್ಪ್ಲೇ ಹೊಂದಿದೆ. ಇನ್ನು ಫೋನ್ನಲ್ಲಿ ೫೦ಎಂಪಿ ಪ್ರೆ ಮರಿ ಹಾಗೂ ೮ಎಂಪಿ ಅಲ್ಟ್ರಾ ವೈಡ್ ಮತ್ತು ೨ಎಂಪಿ ಮೊನೊಕ್ರೋಮ್ ಕ್ಯಾಮೆರಾ ಇದ್ದು, ಡ್ಯುಯಲ್ ೪ಕೆ ವಿಡಿಯೋ ರೆಕಾರ್ಡಿಂಗ್ ಸೌಲಭ್ಯವನ್ನು ಹೊಂದಿದೆ.

ಇನ್ನು ೮ಜಿಬಿ+೧೨೮ಜಿಬಿಯ ರೆನೋ ೧೩ ೫ಜಿ ಫೋನ್ ೩೪,೧೯೯ ರೂ.ಗಳಿಗೆ ಲಭ್ಯವಿದ್ದರೆ, ೮ಜಿಬಿ+೨೫೬ಜಿಬಿ ೩೫,೯೯೯ ರೂ.ಗಳಾಗಿದೆ. ಇನ್ನು ರೆನೋ ೧೩ ಪ್ರೋ ೫ಜಿಯ ೧೨ಜಿಬಿ+೧೨೮ಜಿಬಿ ಫೋನ್ ೪೪,೯೯೯ ರೂ.ಗಳು ಮತ್ತು ೧೨ಜಿಬಿ+೫೧೨ಜಿಬಿ ೪೯,೪೯೯ ರೂ.ಗಳಿಗೆ ಲಭ್ಯವಿದೆ. ಫೋನ್ಗಳಿಗೆ ಫ್ಲಿಪ್ಕಾರ್ಟ್ನಲ್ಲಿ ಅತ್ಯುತ್ತಮ ಆಫರ್ಗಳೂ ಲಭ್ಯವಿವೆ.

Tags: