Mysore
15
clear sky

Social Media

ಶನಿವಾರ, 13 ಡಿಸೆಂಬರ್ 2025
Light
Dark

ಮಾರುಕಟ್ಟೆಗೆ ಬಂದ ಐಫೋನ್ ಹದಿನಾರು

ಬಹುನಿರೀಕ್ಷಿತ ಐಫೋನ್ 16 ಸರಣಿಯ ಸ್ಮಾರ್ಟ್‌ ಫೋನ್‌ಗಳನ್ನು ಆ್ಯಪಲ್ ಕಂಪೆನಿಯು ತನ್ನ ವಾರ್ಷಿಕ ಸಮಾವೇಶದಲ್ಲಿ ಬಿಡುಗಡೆ ಮಾಡಿದ್ದು, 16ರ ಸರಣಿಯ ಐಫೋನ್ 16, ಐಫೋನ್ 16 ಪ್ಲಸ್, ಐಫೋನ್ 16 ಪ್ರೊ, ಐಫೋನ್ 16 ಪ್ರೊ ಮ್ಯಾಕ್ಸ್ ಎಂಬ ನಾಲ್ಕು ಮಾದರಿಗಳನ್ನು ಮಾರುಕಟ್ಟೆಗೆ ಪರಿಚಯಿಸಿದೆ.

ಐಫೋನ್ 16ನಲ್ಲಿ 6.1 ಇಂಚಿನ ಡಿಸ್‌ಪ್ಲೇ ಹಾಗೂ 16 ಪ್ಲಸ್ ಆವೃತ್ತಿಯಲ್ಲಿ 6.7 XRD OLED ಪ್ಯಾನಲ್ ಹೊಂದಿರ ಲಿದೆ. ಆದರೆ ಪಿಕ್ಸೆಲ್ ಸಾಂದ್ರತೆ 460 ಪಿಪಿಎ ಹಾಗೂ 60Hz ರಿಫ್ರೆಶ್‌ರೇಟ್ ಇದೆ. ಫೋನ್‌ನ ಹೊರ ಕವಚವು ಏರೋ ಸ್ಪೇಸ್ ಗುಣಮಟ್ಟದ ಅಲ್ಯೂಮಿನಿಯಂ ನಿಂದ ಸಿದ್ಧಪಡಿಸಲಾಗಿದೆ.

ಐಫೋನ್ 16 ಪ್ರೊ ಮತ್ತು 16 ಪ್ರೊ ಮ್ಯಾಕ್ಸ್ ಅನುಕ್ರಮವಾಗಿ 6.3 ಇಂಚು ಮತ್ತು 6.9 ಇಂಚಿನ ಪರದೆಯನ್ನು ಹೊಂದಿರಲಿದೆ. ಹೀಗಾಗಿ ದೊಡ್ಡ ಪರದೆ
ಮತ್ತು ದೊಡ್ಡ ಬ್ಯಾಟರಿ ಬಳಕೆದಾರರಿಗೆ ಸಿಗಲಿದೆ. ಅಲ್ಲದೆ ಪ್ರೊ ಮಾದರಿಯ ಫೋನ್‌ಗಳ ಕ್ಯಾಮೆರಾಗಳ ಹಾರ್ಡ್ ವೇರ್, ಸೆನ್ಸರ್ ಗಳು ಬೇರೆಯೇ ಆಗಿದ್ದು, ಗುಣಮಟ್ಟದ ಚಿತ್ರೀಕರಣಕ್ಕೆ ಸಹಾಯಕವಾಗಿದೆ.

ಇನ್ನು ಐಫೋನ್ 16 ಮತ್ತು 16ಪ್ಲಸ್‌ನಲ್ಲಿ 48 ಮೆಗಾಪಿಕ್ಸೆಲ್‌ ಪ್ರಧಾನ ಕ್ಯಾಮೆರಾದೊಂದಿಗೆ 12ಎಂಪಿ ಅಲ್ಪಾವೈಡ್ ಆ್ಯಂಗಲ್ ಸೆನ್ಸರ್ ಇದೆ. ಜತೆಗೆ 12ಎಂಪಿಬಸೆಲ್ಸಿ ಕ್ಯಾಮೆರಾ ಇದೆ. ಐಫೋನ್ 16 ಪ್ರೊ ಮತ್ತು 16 ಪ್ರೊ ಮ್ಯಾಕ್ಸ್‌ಗಳಲ್ಲಿ 48 ಮೆಗಾ ಪಿಕ್ಸೆಲ್‌ ಪ್ರಧಾನ ಕ್ಯಾಮೆರಾದೊಂದಿಗೆ 12ಎಂಪಿ ಅಲ್ಫಾ ವೈಡ್ ಆ್ಯಂಗಲ್ ಸೆನ್ಸ‌ ಇದೆ. ಜತೆಗೆ 12 ಎಂಪಿ ಸೆಲ್ವಿ ಕ್ಯಾಮೆರಾ ಇದೆ.

ಇನ್ನು ಐಫೋನ್ ಪ್ರೊ ಮ್ಯಾಕ್ಸ್‌ನಲ್ಲಿ ಸತತ 33 ಗಂಟೆಗಳವರೆಗೆ ವಿಡಿಯೊ ರೆರ್ಕಾಡಿಂಗ್‌ಗೆ ಅನುಕೂಲವಾಗುವಂತೆ ಬ್ಯಾಟರಿ ವ್ಯವಸ್ಥೆ ಮಾಡಲಾಗಿದೆ.

ಐಫೋನ್ 16, 128ಜಿಬಿ, 256ಜಿಬಿ ಮತ್ತು 512ಜಿಬಿಯಲ್ಲಿ ಲಭ್ಯವಿದ್ದು, ಬೆಲೆಯು ಕ್ರಮವಾಗಿ 79,900 ರೂ., 999 ರೂ. ಮತ್ತು 1,09,900 ರೂ.ಗಳಿಗೆ ಲಭ್ಯವಾಗಲಿದೆ.

• ಐಫೋನ್ 16 ಪ್ಲಸ್ 128ಜಿಬಿ, 256ಜಿಬಿ ಮತ್ತು 512ಜಿಬಿಯಲ್ಲಿ ಲಭ್ಯವಿದ್ದು, 89,900 ರೂ, 99,999ರೂ., 1,19,900ರೂಗಳಿಗೆ ಲಭ್ಯವಿದೆ.

• 16 ಪ್ರೊ ಫೋನ್ 128ಜಿಬಿ, 256ಜಿಬಿ, 512ಜಿಬಿ ಮತ್ತು 1ಟಿಬಿಗಳಲ್ಲಿ ಲಭ್ಯವಿದ್ದು, ಕ್ರಮವಾಗಿ 1,19,900 ರೂ., 1,29,999 ರೂ., 1,49,999 ರೂ., 169,900 ರೂ.ಗಳಲ್ಲಿ ಲಭ್ಯ.

• 16 ಪ್ರೊ ಮ್ಯಾಕ್ಸ್ 256 ಜಿಬಿಗೆ 1,44,900 ರೂ., 512ಜಿಬಿಗೆ 1,64,999 ರೂ. ಮತ್ತು 1ಟಿಬಿಗೆ 1,84,900 ರೂ.ಗಳಲ್ಲಿ ಲಭ್ಯವಾಗಲಿದೆ.

ಈ ಫೋನ್‌ಗಳು ಸೆಪ್ಟೆಂಬರ್ 13ರಿಂದ ಆನ್‌ಲೈನ್‌ನಲ್ಲಿ ಮುಂಗಡ ಬುಕ್ಕಿಂಗ್‌ಗೆ ಲಭ್ಯವಿದ್ದು, ಸೆ.20ರಿಂದ ಮಳಿಗೆಗಳಲ್ಲಿ ಸಿಗಲಿದೆ.

Tags:
error: Content is protected !!