ದೆಹಲಿ : ವಾಟ್ಸ್‌ಆಪ್ ಎನ್‌ಕ್ರಿಪ್ಶನ್ ವ್ಯವಸ್ಥೆಗೆ ಧಕ್ಕೆಯಾದ್ರೆ ನಾವು ಭಾರತ ತೊರೆಯುತ್ತೇವೆ ಎಂದು ವಾಟ್ಸ್ ಆಪ್ ಪರ ವಕೀಲರು ದಿಲ್ಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಸೋಶಿಯಲ್ ಮೀಡಿಯಾಗೆ ಸಂಬಂಧಿಸಿದಂತೆ 2021ರ ಮಾಹಿತಿ ಮತ್ತು ತಂತ್ರಜ್ಞಾನ ನಿಯಮದಡಿ ವಾಟ್ಸ್‌ಆಪ್ ಹಾಗೂ ಅದ್ರ ಮಾತೃ ಸಂಸ್ಥೆ ಮೆಟಾ ಕಂಪನಿಯನ್ನ ದಿಲ್ಲಿ ಹೈಕೋರ್ಟ್ ವಿಚಾರಣೆ ನಡೆಸಿದೆ.
ಈ ವೇಳೆ ಕೋರ್ಟ್‌ಗೆ ಹಾಜರಾದ ವಾಟ್ಸ್‌ಆಯಪ್ ಪರ ವಕೀಲ ತೇಜಸ್ ಕಾರಿಯಾ, ವಾಟ್ಸ್‌ಆಯಪ್‌ನ ಎಂಡ್-ಟು-ಎಂಡ್ ಎನ್‌ಕ್ರಿಪ್ಶನ್ ಯಾವುದೇ ವ್ಯಕ್ತಿ ಇನ್ನೊಬ್ಬರಿಗೆ ಕಳುಹಿಸೊ ಮೆಸೇಜ್‌ನ್ನ ಬೇರೆಯವ್ರು ನೋಡಲು ಆಗದಿರೊ ಸುರಕ್ಷತಾ ವ್ಯವಸ್ಥೆ ಹೊಂದಿದೆ.
ಈ ವ್ಯವಸ್ಥೆಗೆ ಧಕ್ಕೆಯಾದರೆ ನಾವು ಭಾರತದಿಂದಲೇ ಹೊರಹೋಗುತ್ತೇವೆ. ಜನರು ತಾವು ಕಳುಹಿಸಿದ ಮೆಸೇಜ್‌ನ್ನ ಬೇರೆಯವ್ರು ಓದೊದಿಲ್ಲ, ಖಾಸಗಿತನಕ್ಕೆ ಧಕ್ಕೆಯಾಗೊದಿಲ್ಲ ಅಂತ ಬಳಸುತ್ತಾರೆ. ಹಾಗಾಗಿ, ಎನ್‌ಕ್ರಿಪ್ಶನ್‌ಗೆ ಧಕ್ಕೆಯಾದರೆ ನಾವು ಭಾರತದಲ್ಲಿ ಮುಂದುವರಿಯೊದಿಲ್ಲ ಎಂದು ವಾಟ್ಸ್ ಆಪ್ ವಕೀಲರು ದಿಲ್ಲಿ ಹೈಕೋರ್ಟ್‌ಗೆ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣಗಳ ಮೇಲೆ ನಿಗಾ ಇರಿಸಲು ಕೇಂದ್ರ ಸರ್ಕಾರ 2021ರಲ್ಲಿ ಐಟಿ ವಿಭಾಗದಲ್ಲಿ ಕೆಲ ನಿಯಮಗಳನ್ನ ಜಾರಿ ತಂದಿತ್ತು. ಅದನ್ನ ಪ್ರಶ್ನಿಸಿ ವಾಟ್ಸ್‌ಆಯಪ್ ದಿಲ್ಲಿ ಹೈಕೋರ್ಟ್ ಮೊರೆ ಹೋಗಿತ್ತು. ಇದೀಗ ಅರ್ಜಿಯ ವಿಚಾರಣೆ ವೇಳೆ ಅದ್ರ ವಕೀಲರು ಕೋರ್ಟ್‌ಗೆ ಈ ರೀತಿ ಹೇಳಿದ್ದಾರೆ.