Mysore
25
broken clouds

Social Media

ಶುಕ್ರವಾರ, 05 ಡಿಸೆಂಬರ್ 2025
Light
Dark

ಸ್ಪಾಮ್‌ ಕರೆಗಳ ಕಾಟವೇ? TRAI DND ಆ್ಯಪ್‌ನಲ್ಲಿ ವರದಿ ಮಾಡಲು ಟ್ರಾಯ್ ಸೂಚನೆ

ಬೆಂಗಳೂರು : ಅನಪೇಕ್ಷಿತ ಕರೆಗಳ (ಸ್ಪಾಮ್‌ ಕಾಲ್ಸ್‌) ನಂಬರ್‌ಗಳನ್ನು ಬ್ಲಾಕ್‌ ಮಾಡುವುದರಿಂದ ಕರೆಗಳನ್ನು ನಿಲ್ಲಿಸಲಾಗುವುದಿಲ್ಲ. ಅದರ ಬದಲಾಗಿ ಅಂತಹ ಅನಪೇಕ್ಷಿತ ಕರೆಗಳ ಸಂಖ್ಯೆಗಳನ್ನು ದೂರಸಂಪರ್ಕ ನಿಯಂತ್ರಣ ಪ್ರಾಧಿಕಾರದ (TRAI) ‘ಟ್ರಾಯ್ ಡಿಎನ್‌ಡಿ’ ಆ್ಯಪ್‌ ಮೂಲಕ ವರದಿ ಮಾಡಬೇಕು TRAI ಎಂದು ಹೇಳಿದೆ.

ಬಳಕೆದಾರರ ದೂರಿನ ಆಧಾರದಲ್ಲಿ ಅನಪೇಕ್ಷಿತ ಕರೆ ಮತ್ತು ವಂಚನೆ ಸಂದೇಶ ಕಳುಹಿಸಿದ 21 ಲಕ್ಷಕ್ಕೂ ಹೆಚ್ಚು ಮೊಬೈಲ್‌ ಸಂಖ್ಯೆಗಳ ಸಂಪರ್ಕವನ್ನು ಕಡಿತಗೊಳಿಸಿ ಕಪ್ಪುಪಟ್ಟಿಗೆ ಸೇರಿಸಲಾಗಿದೆ ಎಂದು ಟ್ರಾಯ್ ಹೇಳಿದೆ.

ಈ ಕುರಿತು ಮಾರ್ಗಸೂಚಿಗಳನ್ನು ಬಿಡುಗಡೆ ಮಾಡಿರುವ ಪ್ರಾಧಿಕಾರ, ಅನಪೇಕ್ಷಿತ ಕರೆಯ ಫೋನ್‌ ನಂಬರ್‌ಗಳನ್ನು ಟ್ರಾಯ್‌ ಡಿಎನ್‌ಡಿ ಆ್ಯಪ್‌ನಲ್ಲಿ ಫೋನ್‌ ಮಾಡುವ ಅಥವಾ ಎಸ್‌ಎಂಎಸ್‌ ಮೂಲಕ ವರದಿ ಮಾಡುವಂತೆ ಸೂಚಿಸಿದೆ.

ಇದನ್ನೂ ಓದಿ:-ಮಹಿಳೆಯರಿಗೆ ಶಿಕ್ಷಣ, ಉದ್ಯೋಗ ಖಾತರಿಪಡಿಸಬೇಕು : ಮಹಿಳೆ, ಮಕ್ಕಳ ಮೇಲಿನ ದೌರ್ಜನ್ಯ ವಿರೋಧಿಸಿ ಸಹಿ ಸಂಗ್ರಹ ಅಭಿಯಾನಕ್ಕೆ ಚಾಲನೆ

ಬಳಕೆದಾರರು ಅನಪೇಕ್ಷಿತ ಕರೆಗಳ ನಂಬರ್‌ಗಳನ್ನು ಆ್ಯಪ್‌ನಲ್ಲಿ ನಮೂದಿಸಿದಾಗ ನಮಗೆ ಆ ಸಂಖ್ಯೆ ಇರುವ ಜಾಗವನ್ನು ಪತ್ತೆ ಮಾಡಲು, ಪರಿಶೀಲಿಸಲು ಮತ್ತು ಶಾಶ್ವತವಾಗಿ ಸಂಪರ್ಕ ಕಡಿತಗೊಳಿಸಲು ನೆರವಾಗುತ್ತದೆ. ಫೋನ್‌ ನಂಬರ್‌ಗಳನ್ನು ನಿಮ್ಮ ಮೊಬೈಲ್‌ನಲ್ಲಿ ಮಾತ್ರ ಬ್ಲಾಕ್‌ ಮಾಡಿದಾಗ ನಿಮ್ಮ ಖಾಸಗಿ ಸಾಧನದಲ್ಲಿ ಮಾತ್ರ ಮರೆಯಾಗುತ್ತದೆ. ಇದು ವಂಚಕರು ಹೊಸ ಸಂಖ್ಯೆಗಳನ್ನು ಬಳಸಿಕೊಂಡು ಇತರರನ್ನು ಸಂಪರ್ಕಿಸುವುದನ್ನು ತಡೆಯುವುದಿಲ್ಲ ಎಂದು ಟ್ರಾಯ್‌ ತಿಳಿಸಿದೆ.

Tags:
error: Content is protected !!