ಆತ ತುಂಬು ಆಸಕ್ತಿವಹಿಸಿ ದುಭಾಷಿಯಾಗಿ ನೆರವು ನೀಡಿದ. ಸತ್ತವರ ಇತ್ಯೋಪರಿಗಳನ್ನು ಕೇಳಿಕೊಂಡು ತಿಳಿಸುತ್ತಾ ಹೋದ. ನಮ್ಮ ಕೆಲಸ ಸುಸೂತ್ರವಾಯಿತು. “ಏನು ಕೆಲಸ ಮಾಡ್ತಿದ್ದೀರಿ?" ಕೇಳಿದೆ. “ಫಾರೆಸ್ಟ್ ಕಂತ್ರಾಟು ಮಾಡ್ತಿದ್ದೇನೆ" ಅವನೆಂದ. ಹೆಸರು, ವೀರಪ್ಪನ್ ! ಎರಡು ಗಂಟೆ ವೇಳೆಗೆ ನನ್ನ ಕೆಲಸ ಮುಗಿಯಲು ಬಂದಿತ್ತು. ಶವಗಳನ್ನು ಪೋಸ್ಟ್‌ಮಾರ್ಟಂ ಮಾಡಲು ಡಾಕ್ಟರಿಗೆ ಒಪ್ಪಿಸಬೇಕಿತ್ತು. ಪೋಸ್ಟ್‌ಮಾರ್ಟಂ …