ನಮ್ಮ ಬಾಳಿನ ಮಹತ್ವದೆನಿಸುವ ಎಷ್ಟೋ ಘಟನೆಗಳು ಆಕಸ್ಮಿಕಗಳಿಂದ ಸಂಭವಿಸಿರುತ್ತವೆ. ನಾವು ಬದುಕಲು ಆರಿಸಿಕೊಂಡ ಊರು, ಬೀದಿ-ಮನೆ, ವೃತ್ತಿ, ಮಾಡುವ ಪಯಣ, ಪ್ರವಾಸದಲ್ಲಿ ಆಕಸ್ಮಿಕವಾಗಿ ಸಿಕ್ಕ ಜನರ ಸಂಗ, ಓದಿದ ಪುಸ್ತಕ, ನೋಡುವ ಸಿನಿಮಾ-ಇವು ನಮ್ಮ ಅನುಭವ ಮತ್ತು ಆಲೋಚನ ಕ್ರಮವನ್ನು ರೂಪಿಸುತ್ತವೆ; ಜೀವನಕ್ಕೆ ಅನಿರೀಕ್ಷಿತ ತಿರುವನ್ನು ಕೊಡುತ್ತವೆ. ನಮ್ಮ ಮನೆತನದಲ್ಲಿ ಆಗಿಹೋದ ಕಲ್ಯಾಣ ಪ್ರಸಂಗಗಳು …