Mysore
27
broken clouds

Social Media

ಬುಧವಾರ, 15 ಜನವರಿ 2025
Light
Dark

ಬಾನು ಜತೆಗಿನ ಮೊದಲ ಭೇಟಿ

  ಮ್ಮ ಬಾಳಿನ ಮಹತ್ವದೆನಿಸುವ ಎಷ್ಟೋ ಘಟನೆಗಳು ಆಕಸ್ಮಿಕಗಳಿಂದ ಸಂಭವಿಸಿರುತ್ತವೆನಾವು ಬದುಕಲು ಆರಿಸಿಕೊಂಡ ಊರುಬೀದಿಮನೆವೃತ್ತಿಮಾಡುವ ಪಯಣಪ್ರವಾಸದಲ್ಲಿ ಆಕಸ್ಮಿಕವಾಗಿ ಸಿಕ್ಕ ಜನರ ಸಂಗಓದಿದ ಪುಸ್ತಕನೋಡುವ ಸಿನಿಮಾಇವು ನಮ್ಮ ಅನುಭವ ಮತ್ತು ಆಲೋಚನ ಕ್ರಮವನ್ನು ರೂಪಿಸುತ್ತವೆಜೀವನಕ್ಕೆ ಅನಿರೀಕ್ಷಿತ ತಿರುವನ್ನು ಕೊಡುತ್ತವೆನಮ್ಮ ಮನೆತನದಲ್ಲಿ ಆಗಿಹೋದ ಕಲ್ಯಾಣ ಪ್ರಸಂಗಗಳು ಈ ತತ್ವಕ್ಕೆ ಹೊರತಲ್ಲಅಪ್ಪ ಬೇಸರದಿಂದ ಮನೆಬಿಟ್ಟು ಹೋದವನುಕೆಲಸ ಕೊಟ್ಟ ಮಾಲಕರ ಮಗಳನ್ನು ಪ್ರೀತಿಸಿ ಲಗ್ನವಾಗಿ ಮರಳಿದನುನನ್ನ ಚಿಕ್ಕಮ್ಮನದೂ ಗಾಂಧರ್ವ ವಿವಾಹನನ್ನೊಬ್ಬ ಸೋದರ ತಾನು ಪ್ರೀತಿಸಿ ಪ್ರೇಮಪತ್ರ ಕೊಟ್ಟುಬರುತ್ತಿದ್ದ ಹುಡುಗಿಯನ್ನೇ ವರಿಸಿ ಕ್ರಾಂತಿ ಮಾಡಿದನುನಮ್ಮಿಬ್ಬರು ಮಕ್ಕಳು ಕಲಿಯಲು ಪರಸ್ಥಳಕ್ಕೆ ಹೋದವರುಅಲ್ಲಿ ಗೆಳೆಯರಾದ ಹುಡುಗರನ್ನೇ ಜೀವನ ಸಂಗಾತಿಗಳಾಗಿಸಿಕೊಂಡರುಇದು ನಮಗೆ ಗೊತ್ತಾಗಿದ್ದು ನಾಟಕೀಯ ಸನ್ನಿವೇಶದಲ್ಲಿಚಿಕ್ಕಮಗಳನ್ನು ಒಬ್ಬ ಹುಡುಗ ಇಷ್ಟಪಡುತ್ತಿದ್ದಂತೆ ತೋರಿತುಆತ ಪರೋಕ್ಷವಾಗಿ ನನ್ನೊಡನೆ ಅದನ್ನು ವ್ಯಕ್ತಪಡಿಸಿದನಾನುಬಾನು ‘ಮಗಳು ಒಪ್ಪಿದರೆ ಯಾಕಾಗಬಾರದು?’ ಎಂದುಕೊಂಡೆವುಒಂದು ದಿನ ಆಕೆಯನ್ನು ಕೂರಿಸಿಕೊಂಡು ‘ಇವನ ಬಗ್ಗೆ ಏನವ್ವಾ ನಿನ್ನ ಇರಾದೆ’ ಎಂದೆವುಆಕೆ “ಅವನು ನನ್ನ ಜತೆಗೂ ಮಾತಾಡಿದನನಗೆ ಇಂಪ್ರೆಸ್ ಮಾಡಲು ಐದಾರು ಹುಡುಗಿಯರ ಪ್ರೊಪೊಸಲ್ ಬಂದಿತ್ತುಇಷ್ಟವಾಗಲಿಲ್ಲರಿಜೆಕ್ಟ್ ಮಾಡಿದೆ ಅಂದಒಪ್ಪಿಗೆಯಾಗಲಿಲ್ಲ ಎನ್ನಬಹುದುರಿಜೆಕ್ಟ್ ಮಾಡುವುದಕ್ಕೆ ಇವನ್ಯಾರುಹುಡುಗಿಯರೂ ಇವನನ್ನು ರಿಜೆಕ್ಟ್ ಮಾಡಿರಬಹುದಲ್ಲವಾ?” ಎಂದಳುಆಡುವ ಭಾಷೆಮಾಡುವ ವರ್ತನೆಯನ್ನು ಸೂಕ್ಷ ವಾಗಿ ಗಮನಿಸುವಅವುಗಳ ಮೂಲಕ ವ್ಯಕ್ತಿಯ ಲೋಕದೃಷ್ಟಿ ವ್ಯಕ್ತಿತ್ವ ಅಳೆವ ವಿಷಯದಲ್ಲಿ ಮಕ್ಕಳು ನಮಗಿಂತ ಮುಂದಿದ್ದಾರೆ ಅನಿಸಿತು. ‘ನಿನ್ನ ತರ್ಕ ಸರಿಯಿದೆ ಮಗಳೆಆದರೆ ಒಂದು ಘಟನೆಯಿಂದಲೇ ಒಬ್ಬರ ವ್ಯಕ್ತಿತ್ವ ಅಳೆಯುವುದು ಅವಸರವಾಗಬಹುದು’ ಎಂದೆವುಅವಳು ಆಗ ತಾನು ಇಷ್ಟಪಟ್ಟಿರುವ ಹುಡುಗನ ಮಾಹಿತಿ ಕೊಟ್ಟಳುಮದುವೆ ಆಯಿತುವೈದ್ಯಕೀಯ ಕಾಲೇಜಿನಲ್ಲಿ ಸಹಪಾಠಿಯಾಗಿದ್ದ ಹುಡುಗನ ಬಗ್ಗೆ ದೊಡ್ಡಮಗಳು ಹೀಗೆ ನೇರ ಹೇಳಲಿಲ್ಲನಮಗೆ ಒಂದು ಪತ್ರ ಬರೆದು ತನ್ನ ಒಲುಮೆ ತಿಳಿಸಿದಳುಒಮ್ಮೆ ಹುಡುಗನ ಭೇಟಿ ಮಾಡಿಸಿದಳು. ‘ಎಂಡಿ ಮುಗಿದ ಬಳಿಕ ಮದುವೆಯಾದರೆ ಒಳ್ಳೆಯದಲ್ಲವಾ?’ ಎಂದೆವುಮದುವೆ ಆದ ಬಳಿಕ ಎಂಡಿ ಮಾಡುವೆ ಎಂದಳುಹಾಗೆಯೇ ಮಾಡಿದಳು.

ಹೀಗೆ ಅವಿಚ್ಛಿನ್ನನಾದ ಪ್ರೇಮವಿವಾಹಗಳಿಂದ ಕೂಡಿದ ವಂಶಪರಂಪರೆಯಲ್ಲಿನಾನು ಮಾತ್ರ ಹೊರತಾದೆನನ್ನಬಾನುವಿನ ವಿವಾಹ ಮಹೋತ್ಸವ ನೆರವೇರಿದ್ದು ಪ್ರೇಮದಿಂದಲ್ಲಆಕಸ್ಮಿಕ ಮಾತುಕತೆಯಿಂದನಾನು ಆಗಷ್ಟೆ ಎಂ.ಮುಗಿಸಿ ಅಧ್ಯಾಪಕನಾಗಿದ್ದೆಅಪ್ಪ ಅಕ್ಕ ಅಮ್ಮ ಮೂವರೂ ಕನ್ಯಾಶೋಧ ಸಮಿತಿ ರಚಿಸಿಕೊಂಡು ಭರದಿಂದ ಪ್ರಯತ್ನ ಮಾಡುತ್ತಿದ್ದರುತಮ್ಮನಿಗೆ ‘ಗುದ್ದೆಕಟ್ಟುವ’ ಹೊಣೆಯ ವಿಷಯದಲ್ಲಿ ಅಕ್ಕಂದಿರಲ್ಲಿ ಅಭಿಮಾನದ ಸ್ಪರ್ಧೆಯಿದ್ದಂತೆ ತೋರಿತುಅವರು ಅಪ್ಪನ ಕಡೆಯ ದೂರದ ಸಂಬಂಧವೊಂದನ್ನು ಪತ್ತೆಮಾಡಿದರುಅವರ ಮನೆಯ ಹುಡುಗಿಯನ್ನು ಕಂಡುಈಕೆಯೇ ತಕ್ಕವಳೆಂದು ನಿಶ್ಚಯಿಸಿದರುಹುಡುಗಿಯ ತಾಯಿ ಕೋಮಲ ಮನಸ್ಸಿನ ಮಹಿಳೆಅಪ್ಪ ಪೊಲೀಸು ಇಲಾಖೆಯಲ್ಲಿದ್ದಈ ನಡುವೆ ಪೊಲೀಸು ಗಂಡನ ಯಾವುದೊ ಒರಟು ಮಾತಿಗೆ ಹೆಂಡತಿ ಆತ್ಮಹತ್ಯೆ ಮಾಡಿಕೊಂಡರುತಾಯಿಲ್ಲದ ತಬ್ಬಲಿ ಎಂದು ಪೊಲೀಸನ ಮಗಳ ಮೇಲೆ ಅಕ್ಕಂದಿರಿಗೆ ಮತ್ತಷ್ಟು ಅಕ್ಕರೆ ಹುಟ್ಟಿತುನನ್ನನ್ನು ಪೊಲೀಸನ ಮನೆಗೆ ದಿಬ್ಬಣ ಕರೆದೊಯ್ದರುಭಾವಿ ಮಾವ ಭಾವನೆಗಳಿಲ್ಲದ ನಿಷ್ಠುರ ಮನುಷ್ಯನಾಗಿದ್ದಅವನಿಗೆ ಕುಲುಮೆ ಕೆಲಸ ಮಾಡುತ್ತಿದ್ದ ಅಪ್ಪನ ಜತೆ ಬೀಗತನ ಮಾಡುವುದಕ್ಕೆ ಇಷ್ಟವಿದ್ದಂತೆ ಕಾಣಲಿಲ್ಲಆದರೆ ಕಾಲೇಜಿನಲ್ಲಿ ಅಧ್ಯಾಪಕನಾಗಿದ್ದ ನನ್ನ ಬಗ್ಗೆ ಆಸ್ಥೆಯಿದ್ದಂತೆ ತೋರಿತುಮಗಳ ಬಿಎ ಮುಗಿವ ತನಕ ಮದುವೆ ಸಾಧ್ಯವಿಲ್ಲ ಎಂದು ಸಾಹೇಬರು ವಾರೆಂಟು ಜಾರಿ ಮಾಡಿದರುಕೊಡಲಾರದ ಹೆಣ್ಣು ತೆರದಲ್ಲಿ ಮುರಿದರಂತೆಬಳಿಕ ಆತನಿಗೆಲ್ಲೊ ವರ್ಗವಾಯಿತುನಾವೂ ಹುಡುಕಲಿಲ್ಲಅವರೂ ನಮ್ಮನ್ನು ಹುಡುಕಿ ಬರಲಿಲ್ಲ.

ನನ್ನ ಪಿಎಚ್.ಡಿಕೆಲಸ ಮುಗಿದು ನಿರಾಳವಾಗಿದ್ದೆಬೇಸಿಗೆ ರಜೆಕಡೂರಲ್ಲಿದ್ದ ದೊಡ್ಡಕ್ಕನ ಮನೆಗೆ ಬಂದಿದ್ದೆವ್ಯಾಪಾರಿಗಳಾದ ಭಾವನವರು ಸಂತೆಗೆ ಹೋಗುವ ಮುನ್ನಅಕ್ಕನಿಗೆ ಹಳೆಯ ಸಾಲವೊಂದರ ವಸೂಲಿ ಕಾರ್ಯಕ್ರಮ ಕೊಟ್ಟು ಹೋದರುಸಾಲಗಾರನ ಮನೆ ಸಖರಾಯಪಟ್ಟಣದ ಬಳಿಯ ಎಮ್ಮೆದೊಡ್ಡಿ ಎಂಬಲ್ಲಿತ್ತುಅಕ್ಕ ‘ಬಾರಪ್ಪಎಮ್ಮೆದೊಡ್ಡಿಗೆ ಹೋಗಿ ಬರಾಣಅಯ್ಯನಕೆರೆ ನೋಡಬಹುದು’ ಎಂದಳುತಿರುಗಾಟವೆಂದರೆ ಒಂದೇ ಕಾಲಿನಲ್ಲಿರುತ್ತಿದ್ದ ನಾನು ಜತೆಗೆ ಹೋದೆಸಾಲಗಾರನು ಕಾಡಿನಲ್ಲಿ ಸಾಗುವಳಿ ಮಾಡಿಕೊಂಡುಹೊಲದಲ್ಲೇ ಗುಡಿಸಲು ಕಟ್ಟಿಕೊಂಡು ವಾಸವಾಗಿದ್ದನುವಿಶಾಲ ಕೆರೆಅದರ ದಂಡೆಗೆ ಕಾಡುಮಧುಚಂದ್ರಕ್ಕೆ ಬೇಕಾದ ಮೋಹಕ ಪರಿಸರಅಲ್ಲಿ ಹಿಂದೆ ಒಬ್ಬ ಸಾಹಸಿ ಕಿತ್ತಲೆ ಬೆಳೆಯಲು ಮಾಡಿದ್ದುಎಸ್ಟೇಟು ಪಾಳುಬಿದ್ದಿತ್ತುನಮ್ಮ ಸಾಲ ವಸೂಲಾಗಲಿಲ್ಲಒಳ್ಳೆಯ ಊಟ ಹಾಕಿಬ್ಯಾಗಿನ ತುಂಬ ತರಕಾರಿ ತುಂಬಿಕೊಟ್ಟರುಅದನ್ನು ಹೊತ್ತು ವಾಪಸು ನಡೆಯುತ್ತ ಬರುತ್ತಿರುವಾಗ ಅಕ್ಕ ಹೇಳಿದಳು: ‘ಮುನ್ನನಮ್ಮ ಮನೆಯ ಓನರ್ ಕಡೆಯುವರು ಚಿತ್ರದುರ್ಗದಿಂದ ಆಗಾಗ್ಗೆ ಕಡೂರಿಗೆ ಬರ್ತಾ ಇರ‍್ತಾರೆಅವರ ಮನೆಯಲ್ಲಿ ಒಬ್ಬ ಹುಡುಗಿ ಇದ್ದಾಳೆತೆಳ್ಳಗೆ ಉದ್ದಕ್ಕೆ ಲಕ್ಷಣವಾಗಿದ್ದಾಳೆನಿನಗೆ ಸರಿಯಾದ ಜೋಡಿಹ್ಞೂ ಎಂದರೆ ಮಾತಾಡುವೆ’

ಆಗಲಿ ಎಂದೆನನ್ನ ಬಾನುವಿನ ಪ್ರಥಮ ಭೇಟಿ ಏರ್ಪಟ್ಟಿತುಮುಖ ನೋಡಿದೆಭಾವಿ ವಧುವಿನ ಕಣ್ಣು ಕೆಂಪಾಗಿದ್ದವುನಿದ್ದೆಗೆಟ್ಟು ಪಯಣ ಮಾಡಿ ಬಂದಿದ್ದಕ್ಕೆ ಎಂದು ಅಕ್ಕನ ವಿವರಣೆ ಸಿಕ್ಕಿತು. ‘ಕನ್ನಡ ಮೇಷ್ಟರನ್ನು ಮದುವೆಯಾಗಲಾರೆ’ ಎಂದು ಬಾನು ಅತ್ತಿದ್ದಳು ಎಂದು ನಂತರ ತಿಳಿಯಿತುಆಕೆಗೆ ಇಂಜಿನಿಯರನ್ನು ಮದುವೆಯಾಗುವ ಆಸೆಯಿತ್ತಂತೆಕನ್ನಡ ಮೇಷ್ಟರೆಂದರೆ ಕಚ್ಚೆಪಂಚೆ ಕರಿಟೋಪಿ ಕೋಟು ಧರಿಸಿ ಹುಡುಗರ ಗೇಲಿಗೆ ಒಳಗಾಗುತ್ತ ಹಳಗನ್ನಡ ಪಾಠ ಮಾಡುವ ಸಿನಿಮಾ ದೃಶ್ಯ ಅವಳ ತಲೆಯಲ್ಲಿದ್ದಿರಬೇಕುನನ್ನನ್ನು ಕಂಡ ಮೇಲೆ ‘ಆಗಬಹುದುಪರವಾಗಿಲ್ಲ’ ಎಂದು ಸಮ್ಮತಿಸಿದಳುಇದು ನಾನೊಬ್ಬ ಜಗದೇಕವೀರ ಎಂಬ ನನ್ನ ಅಹಮಿಕೆಯನ್ನು ಮೊಟಕಿದಂತಾಯಿತುಪರಸ್ಪರ ಮುಖ ನೋಡಿದೆವುಮಾತುಕತೆ ಸಾಧ್ಯವಾಗಲಿಲ್ಲಮಹೋನ್ನತ ಜೀವನ ಆದರ್ಶಗಳನ್ನು ಭಾವೀ ಪತ್ನಿಗೆ ಮನವರಿಕೆ ಮಾಡಿಕೊಡುವ ಕೆಲಸವೊಂದು ಬಾಕಿ ಉಳಿದುಬಿಟ್ಟಿತುಮದುವೆಗೆ ಇನ್ನೊಂದು ತಿಂಗಳು ಉಳಿದಿತ್ತು.

 

ಬಾನುವನ್ನು ಭೇಟಿ ಮಾಡಲು ಅವಳು ವಾಸವಾಗಿದ್ದ ಅವರಣ್ಣನ ಮನೆಗೆ ಗೆಳೆಯನ ಜತೆ ಹೋದೆಊಟೋಪಚಾರ ಚೆನ್ನಾಗಿ ನಡೆಯಿತುಅತಿಥಿಯ ಮನರಂಜನೆಗೆ ಟೇಪ್‌ರೆಕಾರ್ಡಿನಲ್ಲಿ ಮುಖೇಶನ ಹಾಡುಗಳನ್ನು ಹಾಕಲಾಗಿತ್ತುನಾವು ಹೋಗುವ ಹೊತ್ತಿಗೆ ‘ಜಬ್ ದಿಲ್‌ಹೀ ಟೂಟ್ ಗಯಾಹಂ ಜೀಕೆ ಕ್ಯಾಕರೇಂಗೆ?’ ಹಾಡು ನಡೆಯುತ್ತಿತ್ತುಹೊರಡುವ ಮುನ್ನ ‘ಬಾನು ಜತೆ ಮಾತಾಡಬೇಕಿತ್ತುವಾಕಿಂಗ್ ಹೋಗಿಬರುತ್ತೇವೆ’ ಎಂದೆಬೇಡಿಕೆ ಅನಿರೀಕ್ಷಿತವಾಗಿತ್ತುಈತ ಅಪಹರಿಸಿಕೊಂಡು ಹೋಗಬಹುದು ಎಂದು ತರ್ಕಿಸಿದರೊ ಏನೊ, ‘ಸಾಧ್ಯವಿಲ್ಲ’ ಎಂದು ಕಡ್ಡಿಮುರಿದರು. ‘ನಾವಿಬ್ಬರೂ ಮಾತಾಡಲು ಅವಕಾಶವಾದರೂ ಬೇಡವೇ?’ ಎಂದೆಒಪ್ಪಿದರುನಾನಿದ್ದ ಕಡೆ ಬಾನು ಬಂದಳುಬರುತ್ತ ಅಣ್ಣನ ಪುಟ್ಟಮಗಳನ್ನು ಬಾಡಿ ಗಾರ್ಡಾಗಿ ಕರೆತಂದಿದ್ದಳುಕಬಾಬ್ ಮೆ ಹಡ್ಡಿನನಗೆ ಭಯಂಕರ ಕೋಪ ನಿರಾಶೆ ಬಂದಿತುಜೀವನದ ಮಹೋನ್ನತ ಉದ್ದೇಶಗಳನ್ನೂ ಸರಳ ಮದುವೆಯ ಆಸೆಯನ್ನೂ ಸಾಮಾಜಿಕ ಕಾರ್ಯಕರ್ತನಾಗುವ ಹಂಬಲವನ್ನೂ ಸಾಹಿತ್ಯ ಸಂಗೀತಗಳ ಆಸಕ್ತಿಯನ್ನೂ ಹಂಚಿಕೊಳ್ಳಬೇಕುಎಲ್ಲರಂಥವನಲ್ಲ ನನಗಂಡ ಎಂದು ಮನದಟ್ಟು ಮಾಡಬೇಕು ಎಂದು ಹಾಕಿಕೊಂಡಿದ್ದ ಹಂಚಿಕೆಯೆಲ್ಲ ವ್ಯರ್ಥವಾಯಿತುಭಾಷಣಕ್ಕೆ ಹಾಕಿಕೊಂಡಿದ್ದ ಪಾಯಿಂಟುಗಳೆಲ್ಲ ಮರೆತುಹೋದವುಮನೆಯ ಸದಸ್ಯರು ಗ್ಯಾಸ್‌ಚೇಂಬರಿಗೆ ಕಳಿಸಿಕೊಟ್ಟಂತೆ ನಿಶ್ಶಬ್ದವಾಗಿ ಕಾವಲಿಯ ಮೇಲೆ ನಿಂತು ಹೊರಗೆ ಕಾದಿದ್ದರುಬಾನು ಚಿರತೆ ಗುಹೆಯಿಂದ ಯಾವಾಗ ಹೊರಹೋದೇನೊ ಎಂಬಂತೆ ಚಡಪಡಿಸುತ್ತಿದ್ದಳುಜೀವನಸಂಗಾತಿಗಳು ಭಾವನೆ ಹಂಚಿಕೊಳ್ಳಲು ಬೇಕಾದ ಏಕಾಂತವನ್ನೇ ಕೊಲ್ಲುವ ಘೋರ ಮೌನ. ‘ನಾನು ಒಪ್ಪಿಗೆಯೇ?’ ಎಂದೆಮಾತಿಲ್ಲದೆ ತಗ್ಗಿದ ಮುಖದಲ್ಲಿ ಕಣ್ಣನ್ನು ಮಾತ್ರ ಮೇಲೆತ್ತಿ ನೋಡುತ್ತ ತಲೆಯಾಡಿಸಿದಳುಅದು ಒಪ್ಪಿಗೆಯೊ ನಿರಾಕರಣೆಯೊ ತಿಳಿಯಲಿಲ್ಲವಿವಾಹಪೂರ್ವ ಭೇಟಿಯು ಸಿನಿಮಾಗಳಲ್ಲಿ ನಡೆಯುವಂತೆ ಯಾವ ರೋಮಾಂಚಕ ಘಟನೆಯೂ ಇಲ್ಲದೆ ಮುಗಿದುಹೋಯಿತುಬಾಡಿ ಗಾರ್ಡಾಗಿ ಬಂದಿದ್ದ ಹುಡುಗಿಗೆ (ಈಗ ಈಕೆ ವಿದೇಶದಲ್ಲಿ ವೈದ್ಯಕೀಯ ಅಧ್ಯಾಪಕಿಯಾಗಿದ್ದಾಳೆ) ‘ಪ್ಯಾರ್ ಕ ದುಶ್ಮನ್’ ಎಂದು ನಾಮಕರಣ ಮಾಡಿದೆಅಂದಕಾಲತ್ತಿಲೆ ಪ್ರೇಮವಿವಾಹವಾದ ಅಪ್ಪಅಮ್ಮನ ಬಗ್ಗೆ ಅಸೂಯೆ ಮೂಡಿತುಇದಾದ ತಿಂಗಳಲ್ಲಿ ಮದುವೆ ಮುಗಿಯಿತುಶಿವಮೊಗ್ಗೆ ನಗರದಲ್ಲಿ ಹೊಸಬಾಳು ಆರಂಭವಾಯಿತುಜೂನ್ ಮೊದಲ ವಾರಕಾದನೆಲಕ್ಕೆ ತಂಪೆರೆವ ಮಳೆಬೆದರಿಸುವ ಗುಡುಗುಝಳಪಿಸುವ ಸಿಡಿಲುಕಣ್ಮಿಟುಕಿಸುವ ಮಿಂಚುಬಾಳಿನಲ್ಲಿ ಪ್ರೇಮದ ಸುಂದರವಾದ ಗಳಿಗೆಗಳೂಅಭಿರುಚಿ ಆಲೋಚನೆಗಳ ಸಂಘರ್ಷಗಳೂ ಒಟ್ಟಿಗೆ ಶುರುವಾದವುಈಗಲೂ ಜೂನ್ ಮೊದಲ ವಾರ ಬಂದರೆ ಹವಾಮಾನ ಬದಲಿನಿಂದ ನನಗೆ ನೆಗಡಿ ಜ್ವರ ತಪ್ಪಿದ್ದಲ್ಲ.

Tags:

ಸುದ್ದಿ ಬಗ್ಗೆ ನಿಮ್ಮ ಅಭಿಪ್ರಾಯ ತಿಳಿಸಿ