- ರಹಮತ್ ತರೀಕೆರೆ ತೋಟದ ಕಾವಲಿನ ಹನುಮಂತಾ ಬೋವಿಯ ಕತೆಗಳನ್ನು ಸಂಗ್ರಹಿಸಿ ಎಕ್ಸೈಜ್ ಪುಸ್ತಕದಲ್ಲಿ ಬರೆದಿಡತೊಡಗಿದೆ ಬಹುತೇಕ ಲೇಖಕರಂತೆ ನನ್ನ ಬರೆಹದ ಬದುಕೂ ಕವನಗಳಿಂದ ಆರಂಭವಾಯಿತು. ಪಿಯಿಸಿಯಲ್ಲಿದ್ದೆ. ಕೃತಕವಾಗಿ ಪ್ರಾಸ ಜೋಡಿಸಿದ ಕವನಗಳನ್ನು ಊದುಬತ್ತಿಗಳಂತೆ ಹೊಸೆಯುತ್ತಿದ್ದೆ. ಪತ್ರಿಕೆ ಯಾವುದಾದರೂ ಸರಿ ಪ್ರಕಟವಾಗಬೇಕು …