ರಾಯಚೂರು : ಯಾರೀ ಈ ಪ್ರತಾಪ್ ಸಿಂಹ? ಆತ ರಾಜಕೀಯದಲ್ಲಿ ಪ್ರಸಿದ್ಧ ಆಗಬೇಕು ಎಂದು ಹಾಗಾಗಿ, ಸುಮ್ನೆ ಸಾಕ್ಷಿ, ಆಧಾರ ಇಲ್ದೆ ಆರೋಪ ಮಾಡ್ತಿರ್ತಾರೆ. ಅವರ ಆರೋಪ ಗಂಭೀರವಾಗಿ ತೆಗೆದುಕೊಳ್ಳಬೇಕಿಲ್ಲ ಎಂದು ಎಂಎಲ್‌ಸಿ ಯತೀಂದ್ರ ಸಿದ್ದರಾಮಯ್ಯ ಅವರು ಮಾಜಿ ಸಂಸದ ಪ್ರತಾಪ್ ಸಿಂಹ ಆರೋಪಗಳಿಗೆ ಟಾಂಗ್ ನೀಡಿದ್ದಾರೆ.
ರಾಯಚೂರಿನಲ್ಲಿ ಮಾತನಾಡಿದ ಯತೀಂದ್ರ, ಪ್ರತಾಪ್ ಸಿಂಹ ಕಮಿಷನ್ ಆರೋಪ ವಿಚಾರಕ್ಕೆ ಪ್ರತಿಕ್ರಿಯಿಸಿ ಕೌಂಟರ್ ಕೊಟ್ಟಿದ್ದಾರೆ. ಅವರ ಪಕ್ಷವೇ ಅವರನ್ನ ಗಂಭೀರವಾಗಿ ತೆಗೆದುಕೊಂಡಿಲ್ಲ. ನಾವ್ಯಾಕೆ ಗಂಭೀರವಾಗಿ ತೆಗೆದುಕೊಳ್ಬೇಕು ಎಂದು ಪ್ರಶ್ನಿಸಿದ್ದಾರೆ.
ಇದನ್ನು ಓದಿ : RSS ವಿಷಪೂರಿತ ಸಿದ್ಧಾಂತ ಹರಡಬಾರದು : ಯತೀಂದ್ರ ಸಿದ್ದರಾಮಯ್ಯ
ಸಿಎಂ ಔತಣಕೂಟದಲ್ಲಿ ಬಿಹಾರ ಎಲೆಕ್ಷನ್‌ಗೆ ಯಾರ‍್ಯಾರು ಎಷ್ಟು ಹಣ ನೀಡಬೇಕು ಅಂತ ಚರ್ಚೆ ಮಾಡಿದ್ದಾರೆಂಬ ಆರ್.ಅಶೋಕ್ ಆರೋಪ ಕುರಿತು ಮಾತನಾಡಿ, ನಮ್ಮ ಪಕ್ಷದಲ್ಲಿ ನಡೆಯೋದು ಅವರಿಗೆ ಹೇಗ್ರಿ ಗೊತ್ತಾಗತ್ತೆ. ಅವರು ಏನಾದ್ರು ಹೇಳ್ತಾರೆ, ಅವರು ಹೇಳೋದು ನಿಜ ಆಗುತ್ತಾ? ಸಿಎಂ ಆವಾಗ ಆವಾಗ ಔತಣಕೂಟ ಕರೆಯುತ್ತಿರುತ್ತಾರೆ ಎಂದು ತಿಳಿಸಿದರು.
ಈಗಿನ ರಾಜಕೀಯ ಸ್ಥಿತಿಗತಿ ಏನಿದೆ? ಅವರವರ ಇಲಾಖೆ ಹೇಗೆ ನಡೀತಿದೆ. ಸಮಸ್ಯೆ ಇದೆಯಾ ಅನ್ನೋದನ್ನ ಕೇಳಿ. ಬಿಹಾರ್ ಎಲೆಕ್ಷನ್ ಬಗ್ಗೆಯೂ ಚರ್ಚೆ ಮಾಡ್ತಾರೆ ಎಂದರು. ಎಲ್ಲಿವರೆಗೂ ಸಿದ್ದರಾಮಯ್ಯ ಅವರು ಸಿಎಂ ಆಗಿರ್ತಾರೋ, ಅಲ್ಲಿವರೆಗೂ ಅವರ ಸಂಪುಟದಲ್ಲಿ ನನ್ನ ಮಂತ್ರಿ ಮಾಡಲ್ಲ ಅಂತ ಹೇಳಿದ್ದಾರೆ. ಹಾಗಾಗಿ ನನ್ನ ಮಂತ್ರಿ ಸ್ಥಾನದ ಬಗ್ಗೆ ಪ್ರಶ್ನೆ ಬರಲ್ಲ ಅಂತ ಹೇಳಿದರು.





