Mysore
23
clear sky

Social Media

ಮಂಗಳವಾರ, 24 ಮಾರ್ಚ್ 2026
Light
Dark

ಕಾಂಗ್ರೆಸ್‌ಗೆ ಯಾರು ಅನಿವಾರ್ಯ ಅಲ್ಲ : ಸಚಿವ ಎಚ್‌.ಸಿ ಮಹದೇವಪ್ಪ

ಬೆಂಗಳೂರು : ಸತೀಶ್ ಜಾರಕಿಹೊಳಿ ಭವಿಷ್ಯದ ನಾಯಕ ಎಂಬ ಎಂ.ಎಲ್.ಸಿ ಯತೀಂದ್ರ ಸಿದ್ದರಾಮಯ್ಯ ಹೇಳಿಕೆ ಕುರಿತು ಸಮಾಜ ಕಲ್ಯಾಣ ಇಲಾಖೆ ಸಚಿವ ಹೆಚ್.ಸಿ ಮಹದೇವಪ್ಪ ಪ್ರತಿಕ್ರಿಯಿಸಿದ್ದಾರೆ.

ಈ ಕುರಿತು ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವ ಹೆಚ್.ಸಿ ಮಹದೇವಪ್ಪ, ಯಾವಾಗ ಏನಾಗಬೇಕೆಂಬುದನ್ನ ವರಿಷ್ಠರು ತೀರ್ಮಾನ ಮಾಡುತ್ತಾರೆ. ಅದನ್ನ ಬಿಟ್ಟರೇ ಬೇರೆಯವರ ಮಾತಿಗೆ ಮಾನ್ಯತೆ ಇಲ್ಲ. ಯತೀಂದ್ರ ಹೇಳಿಕೆಗೆ ನಾನು ವಿವರಣೆ ನೀಡುವುದಿಲ್ಲ ಎಂದರು.

ಇದನ್ನು ಓದಿ: ಕಾಂತರಾಜು ವರದಿ ಬಗ್ಗೆ ಜನತೆಗೆ ಅನುಮಾನ ಇದೆ, ಹಾಗಾಗಿ ಹೊಸ ವರದಿ ಪಡೆಯಲಿ: ಆರ್.‌ಅಶೋಕ್‌ ಆಗ್ರಹ

ನಮ್ಮ ಹೈಕಮಾಂಡ್ ಏನ್ ಹೇಳುತ್ತೆ ಅದೇ ಫೈನಲ್. ಸಿಎಂ, ಹೈಕಮಾಂಡ್ ಇದೆ. ಅವರು ನೋಡಿಕೊಳ್ಳುತ್ತಾರೆ. ಕಾಂಗ್ರೆಸ್ ವ್ಯವಸ್ಥೆಗೆ ಯಾರೂ ಕೂಡ ಅನಿವಾರ್ಯವಲ್ಲ. ಸಿಎಂ ಸಿದ್ದರಾಮಯ್ಯ, ಡಿಸಿಎಂ ಡಿಕೆ ಶಿವಕುಮಾರ್, ಸತೀಶ್ ಜಾರಕಿಹೊಳಿ ಯಾರೂ ಕೂಡ ಅನಿವಾರ್ಯವಲ್ಲ. ಸಿದ್ದರಾಮಯ್ಯ ಈಗ ಸಿಎಂ ಆಗಿದ್ದಾರೆ. ಬದಲಾವಣೆ ಎಲ್ಲಿ? ನಾವು ತುಂಬಾ ಕ್ಲಿಯರ್ ಆಗಿದ್ದೇವೆ ಎಂದು ಸಚಿವ ಮಹದೇವಪ್ಪ ತಿಳಿಸಿದರು.

Tags:
error: Content is protected !!