Mysore
26
few clouds

Social Media

ಗುರುವಾರ, 05 ಡಿಸೆಂಬರ್ 2024
Light
Dark

ನಾನು ಒಕ್ಕಲಿಗ ನಾಯಕನೆಂದು ಎಲ್ಲಿ ಹೇಳಿದ್ದೇನೆ : ಆರ್‌. ಅಶೋಕ್‌ ವಿರುದ್ಧ ಡಿಸಿಎಂ ವಾಗ್ದಾಳಿ

ಬೆಂಗಳೂರು: ನಾನು ಒಕ್ಕಲಿಗ ನಾಯಕನೆಂದು ಎಲ್ಲಿ ಹೇಳಿದ್ದೇನೆ, ನನ್ನ ಮುಂದೆ ಕನಕಪುರದಲ್ಲಿ ಡಿಚ್ಚಿ ಹೊಡಿತಿನೆಂದು ಬಂದು ನಿಂತರಲ್ಲಾ ಡೆಪಾಸಿಟ್‌ ಬಂತಾ ಎಂದು ವಿಪಕ್ಷ ನಾಯಕ ಆರ್‌.ಅಶೋಕ್‌ ವಿರುದ್ಧ ಡಿಸಿಎಂ ಡಿ.ಕೆ.ಶಿವಕುಮಾರ್‌ ವಾಗ್ದಾಳಿ ನಡೆಸಿದ್ದಾರೆ.

ವಿಕಾಸಸೌಧದಲ್ಲಿ ಇಂದು(ನ.25) ಆರ್.ಅಶೋಕ್‌ ಹೇಳಿಕೆಗಳಿಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ನಾನ ಯಾವತ್ತು ನಾಯಕನೆಂದು ಹೇಳಿದ್ದೆ? ಕನಕಪುರ ಕ್ಷೇತ್ರದಲ್ಲಿ ಕಂದಾಯ ಸಚಿವರಾಗಿ ಬಂದು ನನ್ನ ವಿರುದ್ಧ ಚುನಾವಣೆಯಲ್ಲಿ ನಿಂತಾಗ ಎಷ್ಟು ಡೆಪಾಸಿಟ್‌ ತಂಗೋಡ್ಯಪ್ಪ, ನನ್ನ ಮೇಲೆ ಕುಸ್ತಿ ಮಾಡುತ್ತೇನೆಂದು ಹೇಳಿದ್ದೆ. ಆದರೆ ಆ ಕ್ಷೇತ್ರದಲ್ಲಿ ನಿನಗೆ ಎಷ್ಟು ಮತಗಳು ಬಂದಿದೆ ಎಂದು ವ್ಯಂಗ್ಯವಾಡಿದ್ದಾರೆ.

ತಮ್ಮ ಚುನಾವಣೆಯಲ್ಲಿ ಸೋತಿದ್ದಾನೆ ನಿಜ. ಆದರೆ ಸೋಲಿಸಿದ ಕೊಂಡಿಗಳು ಒಂದೊಂದೆ ಕಳಚಿ ಹೋಗಿವೆ. ರಾಜರಾಜೇಶ್ವರಿ ನಗರ ಹಾಗೂ ಚನ್ನಪಟ್ಟಣದಲ್ಲಿ ಏನೆಲ್ಲಾ ಆಯಿತು ಎಂಬ ವಿಚಾರ ಎಲ್ಲರಿಗೂ ತಿಳಿದಿದೆ. ಇತಿಹಾಸಗಳನ್ನು ನಾನು ಹೇಳೋಕೆ ಹೋಗಲ್ಲ . ನನಗೂ ಪಾಲಿಟಿಕ್ಸ್‌ ಗೊತ್ತಿದೆ ಎಂದು ತಿರುಗೇಟು ನೀಡಿದ್ದಾರೆ.

Tags: