Mysore
28
overcast clouds

Social Media

ಬುಧವಾರ, 15 ಜನವರಿ 2025
Light
Dark

ಪುಂಡರಿಂದ ಹೈವೆಯಲ್ಲಿ ವ್ಹೀಲಿಂಗ್ : ಫ್ಲೈಓವರ್​​ನಿಂದ ಸ್ಕೂಟಿಗಳ​ನ್ನು ಕೆಳಗೆ ಎಸೆದ ಜನ

ತುಮಕೂರು: ರಾಷ್ಟ್ರೀಯ ಹೆದ್ದಾರಿಯಲ್ಲಿ ವೀಲಿಂಗ್ ಮಾಡುತ್ತಿದ್ದ ಪುಂಡರ ಸ್ಕೂಟಿಗಳ​ನ್ನು ಸಾರ್ವಜನಿಕರು ಫ್ಲೈಓವರ್ ಮೇಲಿಂದ ಎತ್ತಿ ಬೀಸಾಡಿದ್ದಾರೆ.

ತುಮಕೂರು ರಸ್ತೆಯ ಅಡಕಮಾರನಹಳ್ಳಿ ಬಳಿಯ ಫ್ಲೈಓವರ್ ಮೇಲಿಂದ ಸರ್ವಿಸ್ ರಸ್ತೆಗೆ ಎರಡು ಡಿಯೋ ಸ್ಕೂಟಿಗಳನ್ನು ಎಸೆಯಲಾಗಿದೆ. ಪುಂಡರು ಹೆದ್ದಾರಿಯಲ್ಲಿ ವಾಹನ ಸವಾರರಿಗೆ ಭಯ ಹುಟ್ಟಿಸೋ ರೀತಿ ವೀಲಿಂಗ್ ಮಾಡುತ್ತಿದ್ದರು. ಅಷ್ಟೇ ಅಲ್ಲದೇ, ಒಂದು ವಾಹನಕ್ಕೆ ಡಿಕ್ಕಿ ಕೂಡ ಹೊಡೆದಿದ್ದಾರೆ. ಈ ವೇಳೆ ಸಾರ್ವಜನಿಕರು ಸ್ಕೂಟಿಯನ್ನು ತಡೆದು ಹಿಗ್ಗಾಮುಗ್ಗಾ ಕ್ಲಾಸ್ ತೆಗೆದುಕೊಂಡು ಅವುಗಳಿಗೆ ಒಂದು ಗತೀ ಕಾಣಿಸಿದ್ದಾರೆ.

ವ್ಹೀಲಿಂಗ್ ಮಾಡಿದ ಪುಂಡರ ಸ್ಕೂಟಿಗಳನ್ನು ಫ್ಲೈಓವರ್​​ ಮೇಲಿಂದ ಬಿಸಾಡಿರುವ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಮೇಲ್ನೋಟಕ್ಕೆ ಜನ ಕಾನೂನು ಕೈಗೆತ್ತಿಕೊಂಡಂತೆ ಕಂಡರೂ ಈ ಪುಂಡರಿಗೆ ಇದೇ ರೀತಿ ಆಗಬೇಕು. ಆಗಲಾದರು ಬುದ್ಧಿ ಬರುತ್ತೆ ಅನಿಸುತ್ತೆ‌ ಎಂದು ನೆಟ್ಟಿಗರು ಕಮೆಂಟ್‌ ಹಾಕುತ್ತಿದ್ದಾರೆ.

Tags: