ಕನಕಪುರ(ರಾಮನಗರ ಜಿಲ್ಲೆ): ಮದುವೆಗೆ ಹೊರಟಿದ್ದ ಖಾಸಗಿ ಬಸ್ ಪಲ್ಟಿಯಾಗಿ 30ಕ್ಕೂ ಹೆಚ್ಚು ಮಂದಿ ಗಾಯಗೊಂಡಿರುವ ಘಟನೆ ಕನಕಪುರ ತಾಲೂಕಿನ ಸಂಗಮ ಸಮೀಪ ನಡೆದಿದೆ.
ಗಾಯಾಳುಗಳನ್ನು ಕನಕಪುರದ ಐಪಿಪಿ ಆಸ್ಪತ್ರೆಗೆ ದಾಖಲಿಸಲಾಗಿದೆ. ತಗಡೇಗೌಡನದೊಡ್ಡಿ ಗ್ರಾಮದ ಗಂಡು ಮತ್ತು ಹೆಣ್ಣಿನ ಮದುವೆಯನ್ನು ಮಡಿವಾಳದಲ್ಲಿ ಆಯೋಜಿಸಲಾಗಿತ್ತು. ಹೀಗಾಗಿ, ಬೆಳಿಗ್ಗೆಯ ಎರಡು ಖಾಸಗಿ ಬಸ್‌ಗಳಲ್ಲಿ ಗ್ರಾಮದ ಜನರು ಮದುವೆಗೆ ಹೊರಟಿದ್ದರು.
ಒಂದು ಬಸ್ ಸಂಗಮ ಸಮೀಪ್ ತಿರುವಿನಲ್ಲಿ ಚಾಲಕನ ನಿಯಂತ್ರಣ ಕಳೆದುಕೊಂಡು ಪಲ್ಟಿಯಾಗಿದೆ ಎಂದು ಪೊಲೀಸರು ತಿಳಿಸಿದರು.
ಗಾಯಳು ಆರೋಗ್ಯ ವಿಚಾರಿಸಿ ಮಾಜಿ ಸಂಸದ ಡಿಕೆ ಸುರೇಶ್
ಗಾಯಾಳುಗಳನ್ನು ದಾಖಲಿಸಿದ್ದ ಆಸ್ಪತ್ರೆಗೆ ಭೇಟಿ ನೀಡಿ ಮಾಜಿ ಸಂಸದ ಡಿಕೆ ಸುರೇಶ್ , ಆರೋಗ್ಯ ವಿಚಾರಿಸಿ, ಧೈರ್ಯ ತುಂಬಿದರು.
ಮದುವೆಯ ಸಂಭ್ರಮ ಮನೆ ಮಾಡಬೇಕಿದ್ದ ಮನೆಯಲ್ಲಿ ಈ ರೀತಿಯ ಆಘಾತವುಂಟಾಗಿರುವುದು ದುಃಖದ ವಿಚಾರ. ಆದಷ್ಟು ಬೇಗ ಎಲ್ಲರೂ ಗುಣಮುಖರಾಗಲಿ ಎಂದು ಹಾರೈಸಿ, ಕೈಲಾದ ನೆರವನ್ನು ನೊಂದ ಕುಟುಂಬಕ್ಕೆ ನೀಡಿದರು.