Mysore
23
overcast clouds
Light
Dark

ಸಿಎಂ ಸಿದ್ದರಾಮಯ್ಯ ಮಗನ ವಿಚಾರವನ್ನು ಹೊರಗಿಡುತ್ತೇನೆ: ಎಚ್‌ಡಿಕೆ ಆಕ್ರೋಶ

ಹುಬ್ಬಳ್ಳಿ: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ ಅವರ ಅಶ್ಲೀಲ ವೀಡಿಯೋ ಎನ್ನಲಾದ ಪೆನ್‌ಡ್ರೈವ್‌ ಪ್ರಕರಣಕ್ಕೆ ಸಂಬಂಧಿಸಿದಂತೆ ಕಾಂಗ್ರೆಸ್‌ ನಡವಳಿಕೆಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿರುವ ಮಾಜಿ ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ ಅವರು ಅವರ ಮನೆಯಲ್ಲಿ ನಡೆದ ಸಾವಿ ವಿಚಾರವನ್ನು ಹೊರಗೆ ಎಳೆದು ತರುತ್ತೇನೆ ಎಂದು ಕಿಡಿಕಾರಿದ್ದಾರೆ. ಆ ಮೂಲಕ ಸಿಎಂ ಸಿದ್ದರಾಮಯ್ಯ ಅವರ ಪುತ್ರ ರಾಕೇಶ್‌ ಸಿದ್ದರಾಮಯ್ಯ ಅವರ ಸಾವಿನ ವಿಚಾರವನ್ನು ಪ್ರಸ್ತಾಪಿಸಿದ್ದಾರೆ.

ಪೆನ್‌ಡ್ರೈವ್‌ ಪ್ರಕರಣ ದಿನೇ ದಿನೇ ಹೊಸ ತಿರುವು ಪಡೆದುಕೊಳ್ಳುತ್ತಿರುವ ಬಗ್ಗೆ ಹುಬ್ಬಳ್ಳಿಯಲ್ಲಿಂದು ಮಾತನಾಡಿರುವ ಅವರು, ಸಿಎಂ ಸಿದ್ದರಾಮಯ್ಯ ಅವರ ಕುಟುಂಬದಲ್ಲಿ ನಡೆದಿದ್ದ ಘಟನೆಗೆ ಸಂಬಂಧಿಸಿದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಮಾಡಿದ ಸಹಾಯ ಮರೆತಿದ್ದೀರಿ? ಈ ಎಲ್ಲಾ ದಾಖಲೆಗಳನ್ನು ನಾವು ಹೊರಗೆ ತರುತ್ತೇವೆ. ನಿಮ್ಮ ಕುಟುಂಬದಲ್ಲಿ ಏನೇನು ನಡಯಿತು ಎಂಬುದೆಲ್ಲಾ ಹೊರಗೆ ಬೀಳಲಿದೆ ಎಂದು ಎಚ್‌.ಡಿ ಕುಮಾರಸ್ವಾಮಿ ಆಕ್ರೋಶ ಹೊರ ಹಾಕಿದ್ದಾರೆ.

ಎಚ್‌.ಡಿ ರೇವಣ್ಣ ವಿಷಯ ಕೆದಕಿದರೇ ಚರ್ಚೆ ಮಾಡಲು ನಾನು ಸಿದ್ದನಿದ್ದೇನೆ, ಎಲ್ಲಿಗೂ ಪಲಾಯನ ಮಾಡುವುದಿಲ್ಲ. ಈ ವಿಚಾರವಾಗಿ ಕಾಂಗ್ರೆಸ್‌ ನಾಯಕ ಮಹಾಪರಾಧ ಮಾಡಿದ್ದಾನೆ. ಈ ಪೆನ್‌ ಡ್ರೈವ್‌ ವಿಚಾರ ಎಷ್ಟು ತಿಂಗಳ ಹಿಂದೆ ಅವನಿಗೆ ಗೊತ್ತಿತ್ತು. ಅವನಿಗೆ ಪೆನ್‌ಡ್ರೈವ್‌ ಸರಬರಾಜು ಮಾಡಿದವರಾರು ಎಲ್ಲವೂ ತಿಳಿದಿದೆ. ಈ ಮಹಾನ್‌ ನಾಯಕನ ಬಗ್ಗೆಯೂ ಚರ್ಚಿಸೋಣ ಎಂದರು.

ಇನ್ನು ಈ ಪ್ರಕರಣದಲ್ಲಿ ಹಾಸನ ಜಿಲ್ಲಾಧಿಕಾರಿ ಅವರ ಮಾತುಗಳನ್ನು ನಾನು ಗಮನಿಸಿದ್ದು, ರೇವಣ್ಣ ವಿಚಾರದ ಹಿಂದೆ ಸರ್ಕಾರದ ಹುನ್ನಾರ ಅಡಗಿದೆ ಎಂದು ಎಚ್‌ಡಿಕೆ ಆರೋಪಿಸಿದರು.