Mysore
22
overcast clouds

Social Media

ಸೋಮವಾರ, 10 ನವೆಂಬರ್ 2025
Light
Dark

ವಕ್ಫ್‌ ಆಸ್ತಿ ವಿವಾದ: ಕಾಂಗ್ರೆಸ್‌ ಸರ್ಕಾರ ವಿರುದ್ಧ ಮಾಜಿ ಸಂಸದೆ ಸುಮಲತಾ ಕಿಡಿ

ಮಂಡ್ಯ: ವಕ್ಫ್‌ ಆಸ್ತಿ ವಿವಾದಕ್ಕೆ ಸಂಬಂಧಿಸಿದಂತೆ ರಾಜ್ಯಾದ್ಯಾಂತ ಬಿಜೆಪಿ ಪ್ರತಿಭಟನೆ ನಡೆಸುತ್ತಿದ್ದು, ಮಾಜಿ ಸಂಸದೆ ಸುಮಲತಾ ಅಂಬರೀಶ್‌ ಕಾಂಗ್ರೆಸ್‌ ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.

ನಗರದಲ್ಲಿ ಇಂದು(ನ.22) ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ವಕ್ಫ್‌ ವಿವಾದ ಗಂಭೀರ ವಿಷಯವಾಗಿದ್ದು, ರೈತರ ಜಮೀನನ್ನು ವಶಪಡಿಸಿಕೊಂಡು ಅನ್ಯಾಯವಾಗುವಂತೆ ಮಾಡಿದೆ. ವಕ್ಫ್‌ ಮಂಡಳಿಯ ಬಗ್ಗೆ ರೈತರಿಗೆ ಅರಿವು ಮೂಡಿಸುವ ಕೆಲಸವನ್ನು ಬಿಜೆಪಿ ಪಕ್ಷ ಮಾಡುತ್ತಿದೆ. ಈ ವಿಚಾರ ಯಾವುದೋ ಪಕ್ಷಕ್ಕೋ ಅಥವಾ ವ್ಯಕ್ತಿಗೋ ಸಂಬಂಧಿಸಿದಲ್ಲ. ಹೀಗಾಗಿ ಈಗ ಇದನ್ನು ನಿರ್ಲಕ್ಷ್ಯ ಮಾಡಿದರೆ ಮುಂದಿನ ದಿನಗಳಲ್ಲಿ ಉಲ್ಬಣವಾಗುತ್ತದೆ ಎಂದು ಎಚ್ಚರಿಸಿದ್ದಾರೆ.

ವಕ್ಫ್‌ ಆಸ್ತಿ ವಿಚಾರದಲ್ಲಿ ರೈತರಿಗೆ ಕೊಟ್ಟು ಕಿತ್ತುಕೊಳ್ಳುವ ಕೆಲಸವನ್ನು ಸರ್ಕಾರ ಮಾಡುತ್ತಿದೆ. ರೈತರಿಗೆ ನೋಟಿಸ್‌ ಕಳುಹಿಸಿ ವಾಪಾಸ್‌ ತೆಗೆದುಕೊಳ್ಳುತ್ತಾರೆ ಎಂದರೆ ಏನು ಅರ್ಥ? ಸರ್ಕಾರದ ಈ ಉದ್ದೇಶವನ್ನು ಜನತೆ ಅರ್ಥ ಮಾಡಿಕೊಳ್ಳಬೇಕು. ರಾಜ್ಯ ಸರ್ಕಾರದ ಈ ನಡವಳಿಕೆ ಖಂಡನೀಯವಾಗಿದೆ ಎಂದು ವಾಗ್ದಾಳಿ ನಡೆಸಿದ್ದಾರೆ.

Tags:
error: Content is protected !!