Mysore
34
few clouds

Social Media

ಶನಿವಾರ, 11 ಏಪ್ರಿಲ 2026
Light
Dark

ಬಿಹಾರ ಚುನಾವಣೆಯಲ್ಲೂ ವೋಟ್‌ ಚೋರಿ: ಸಚಿವ ಭೋಸರಾಜು

ಬೆಂಗಳೂರು: ಬಿಹಾರ ಚುನಾವಣೆಯಲ್ಲೂ ವೋಟ್‌ ಚೋರಿ ಆಗಿದೆ ಎಂದು ಸಚಿವ ಭೋಸರಾಜು ಆರೋಪ ಮಾಡಿದ್ದಾರೆ.

ಬಿಹಾರ ಚುನಾವಣೆ ಎಕ್ಸಿಟ್‌ ಪೋಲ್‌ ವಿಚಾರಕ್ಕೆ ಸಂಬಂಧಿಸಿದಂತೆ ಬೆಂಗಳೂರಿನಲ್ಲಿ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಜನರ ಅಭಿಪ್ರಾಯ ಏನೇ ಬಂದರೂ ನಾವು ಒಪ್ಪುತ್ತೇವೆ. ಆದರೆ ಬಿಜೆಪಿಯವರು ಇಡೀ ದೇಶದಲ್ಲಿ ವೋಟ್‌ ಚೋರಿ ಮಾಡುತ್ತಿದ್ದಾರೆ. ಬಿಹಾರದಲ್ಲೂ ಕೂಡ ಆಗಿದೆ. ಅಮಿತ್‌ ಶಾ ವೋಟ್‌ ಚೋರಿ ಮಾಡುವ ಕೆಲಸ ಮಾಡುತ್ತಿದ್ದಾರೆ. ಫಲಿತಾಂಶ ಏನು ಬರುತ್ತೆ ನೋಡೋಣ ಎಂದರು.

ಇನ್ನು ಸಿಎಂ ದೆಹಲಿ ಪ್ರವಾಸ, ನವೆಂಬರ್‌ ಕ್ರಾಂತಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ಅವರು, ಸಿಎಂ ಅವರು ಪುಸ್ತಕ ಬಿಡುಗಡೆಗೆ ದೆಹಲಿಗೆ ಹೋಗುತ್ತಿದ್ದಾರೆ. ರಾಹುಲ್‌ ಗಾಂಧಿ ಅವರು ಟೈಂ ಕೊಟ್ಟರೆ ಭೇಟಿಯಾಗಿರುವುದಾಗಿ ಸಿಎಂ ಹೇಳಿದ್ದಾರೆ. ಸಮಯ ಸಿಕ್ಕರೆ ಸಹಜವಾಗಿ ಕ್ಯಾಬಿನೆಟ್‌ ಪುನರ್‌ ರಚನೆ ಬಗ್ಗೆ ಮಾತನಾಡುತ್ತಾರೆ. ದೆಹಲಿಗೆ ಹೋದರೆ ಹೈಕಮಾಂಡ್‌ ಭೇಟಿಯಾಗುವುದು ಸಹಜ ಎಂದು ಹೇಳಿದರು.

Tags:
error: Content is protected !!