Mysore
24
scattered clouds

Social Media

ಗುರುವಾರ, 13 ನವೆಂಬರ್ 2025
Light
Dark

ನನ್ನ ವಿರುದ್ಧ ಯಾವುದೇ ದಾಖಲೆಗಳಿದ್ದರೂ ಯತ್ನಾಳ್‌ ಬಿಡುಗಡೆ ಮಾಡಲಿ: ಬಿ.ವೈ.ವಿಜಯೇಂದ್ರ

ಬೆಂಗಳೂರು: ಶಾಸಕ ಯತ್ನಾಳ್‌ ಅವರು ಯಾವ ಶುಭ ಮುಹೂರ್ತಕ್ಕೆ ಕಾಯದೇ ನನ್ನ ವಿರುದ್ಧ ಯಾವುದೇ ದಾಖಲೆ ಅಥವಾ ವಿಡಿಯೋಗಳಿದ್ದರೆ ತಕ್ಷಣವೇ ಬಿಡುಗಡೆ ಮಾಡಲಿ ಎಂದು ಬಿಜಿಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಸವಾಲ್‌ ಹಾಕಿದ್ದಾರೆ.

ಬೆಂಗಳೂರಿನಲ್ಲಿ ಇಂದು(ಡಿ.1) ಬಿ.ಎಸ್‌.ಯಡಿಯೂರಪ್ಪ ಅವರ ನಿವಾಸದಲ್ಲಿ ತಮ್ಮ ಬಣದೊಂದಿಗೆ ಸಮಾಲೋಚನೆ ನಡೆಸಿ ಯತ್ನಾಳ್‌ ಅವರ ಹೇಳಿಕೆಗೆ ಮಾಧ್ಯಮಗಳೊಂದಿಗೆ ಪ್ರತಿಕ್ರಿಯೆ ನೀಡಿದ ಅವರು, ನನಗೆ ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಳ್ಳುವ ಯಾವ ಅವಶ್ಯಕತೆಯಿಲ್ಲ. ಆದರೆ ಯತ್ನಾಳ್‌ ಅವರು ಹೊಂದಾಣಿಕೆ ರಾಜಕಾರಣ ಎಂದು ಪಕ್ಷದ ಸಂಘಟನೆಗೆ ಪೆಟ್ಟು ನೀಡುತ್ತಿದ್ದಾರೆ ಎಂದಿದ್ದಾರೆ.

ಯತ್ನಾಳ್‌ ಅವರು ಬಿಜೆಪಿ ರಾಜ್ಯಾಧ್ಯಕ್ಷ ಸ್ಥಾನದಿಂದ ವಿಜಯೇಂದ್ರ ಬದಲಾವಣೆಯಾಗಲಿ ಎಂದು ಬಯಸುತ್ತಿದ್ದಾರೆ. ಈ ಬಗ್ಗೆ ಅವರೊಂದಿಗೆ ಇನ್ನೂ ಹತ್ತು ಮಂದಿ ಸೇರಿಕೊಳ್ಳಲಿ ನಾನು ಅದಕ್ಕೆಲ್ಲಾ ತಲೆ ಕಡೆಸಿಕೊಳ್ಳಲ್ಲ. ಆದರೆ ಯತ್ನಾಳ್‌ ವಿರುದ್ಧ ಬಿಗು ಕ್ರಮವಾಗಬೇಕೆಂಬುದು ಅಷ್ಟೇ ಕಾರ್ಯಕರ್ತರ ಅಪೇಕ್ಷೆಯಾಗಿದೆ. ಹೀಗಾಗಿ ನಾನು ಈಗಲೂ ಯತ್ನಾಳ್‌ ಅವರಿಗೆ ಮನವಿ ಮಾಡುವುದೆಂದರೆ ಪಕ್ಷದ ಕಾರ್ಯಕರ್ತರಿಗೆ ಯಾವುದೇ ರೀತಿಯ ಅವಮಾನವಾಗದಂತೆ ನಡೆದುಕೊಳ್ಳಬಾರದು ಎಂದು ಹೇಳಿದ್ದಾರೆ.

ಮಾಜಿ ಸಿಎಂ ಬಿ.ಎಸ್‌.ಯಡಿಯೂರಪ್ಪ ಹಾಗೂ ವಿಜಯೇಂದ್ರ ಅವರಿಗೆ ಬೈಯೋದು ಒಂದೇ ಪದವಿ ಎಂದು ಯತ್ನಾಳ್‌ ಅಂದುಕೊಂಡಿದ್ದಾರೆ ಎಂದು ಮಾಜಿ ಶಾಸಕರು ತಿಳಿಸಿದ್ದಾರೆ. ಆದರೆ ನಾನು ಅವರೆಲ್ಲರಿಗೂ ಅದನ್ನು ಬದಿಗೊತ್ತಿ ಪಕ್ಷದ ಸಂಘಟನೆಗೆ ಕೆಲಸ ಮಾಡಿ ಎಂದಷ್ಟೇ ಹೇಳಿದ್ದೇನೆ. ಶಾಸಕ ಯತ್ನಾಳ್‌ ಅವರ ವಿರುದ್ಧ ಬಿಜೆಪಿ ಹೈಕಮಾಂಡ್‌ಗೆ ಚಾಡಿ ಹೇಳುವ ಅಥವಾ ಪಕ್ಷದಿಂದ ಉಚ್ಛಾಟನೆ ಮಾಡಿ ಎಂದು ಹೇಳಿಲ್ಲ, ಹೇಳುವ ಯಾವ ಅವಶ್ಯಕತೆಯೂ ಇಲ್ಲ ಎಂದು ತಿಳಿಸಿದ್ದಾರೆ.

ಶಾಸಕ ಯತ್ನಾಳ್‌ ನೀಡಿರುವ ಹೇಳಿಕೆ ಏನು?

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಕಾಂಗ್ರೆಸ್‌ನೊಂದಿಗೆ ಹೊಂದಾಣಿಕೆ ಮಾಡಿಕೊಂಡಿರುವ ಬಗ್ಗೆ ನನ್ನ ಬಳಿ ಸಾಕ್ಷ್ಯಾಧಾರವಿದೆ. ಅದನ್ನು ನಾನು ಬಿಡುಗಡೆ ಮಾಡಲಾ ಎಂದು ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು.

 

 

Tags:
error: Content is protected !!